ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಶ್ರೀರಾಮುಲು ವಿರುದ್ಧ ಗುಡುಗಿದ ಸಿದ್ದರಾಮಯ್ಯ

|
Google Oneindia Kannada News

ಮೈಸೂರು, ನವೆಂಬರ್ 19: ಮಾನ ಮರ್ಯಾದೆ ಇದ್ದಿದ್ದರೆ ಶ್ರೀರಾಮುಲು ಆಗಲೇ ರಾಜೀನಾಮೆ ನೀಡಬೇಕಿತ್ತು ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಶ್ರೀರಾಮುಲು ವಿರುದ್ಧ ಗುಡುಗಿದ್ದಾರೆ.

ರಾಜೀನಾಮೆ ನೀಡುವಂತೆ ಸಚಿವ ಶ್ರೀರಾಮುಲು ಸವಾಲು ವಿಚಾರ ಕುರಿತು ಮಾತನಾಡಿರುವ ಅವರು, ಸ್ವಾರ್ಥಕ್ಕೆ ಮಾತನಾಡುವವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಪಾಪ ಅವರು ನನ್ನ ಮೇಲೆ ಸೋತಿದ್ದಾರೆ ಅದಕ್ಕೆ‌ ಈ ರೀತಿ ಮಾತನಾಡುತ್ತಾರೆ. ಶ್ರೀರಾಮುಲು ಹತಾಶರಾಗಿದ್ದಾರೆ.

ಎಸ್‌ಟಿಗೆ ಮೀಸಲಾತಿ ಸಿಗದಿದ್ದರೆ ರಾಜೀನಾಮೆ ಅಂದಿದ್ದರು

ಎಸ್‌ಟಿಗೆ ಮೀಸಲಾತಿ ಸಿಗದಿದ್ದರೆ ರಾಜೀನಾಮೆ ಅಂದಿದ್ದರು

ಅವರಿಗೆ ಮಾನ ಮರ್ಯಾದೆ ಇದ್ದರೆ ಆಗಲೇ ರಾಜೀನಾಮೆ ಕೊಡಬೇಕಿತ್ತು.ಡಿಸಿಎಂ‌ ಮಾಡುತ್ತೇವೆ ಅಂತಾ ಪ್ರಚಾರ ಮಾಡಿದರು ಕೊಟ್ಟರಾ ? ಎಂ.ಎಲ್.ಎ ಅಲ್ಲದವರಿಗೆ ಡಿಸಿಎಂ ಪಟ್ಟ ಕೊಟ್ಟಿದ್ದಾರೆ. ಎಸ್.ಟಿ ಗೆ ಶೇ.7 ರಷ್ಟು ಮೀಸಲಾತಿ ನೀಡದಿದ್ದರೆ ರಾಜೀನಾಮೆ ಕೊಡುತ್ತೇನೆ ಅಂದಿದ್ದರು. ಒಂದು ನಿಮಿಷ ಇರಲ್ಲ ಅಂದರು.

ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'

ಸ್ವಾರ್ಥ ಮಾಡುವವರೆಲ್ಲಾ ಒಂದು ಕಡೆ

ಸ್ವಾರ್ಥ ಮಾಡುವವರೆಲ್ಲಾ ಒಂದು ಕಡೆ

ಏನಾಯ್ತು ? ಪಾಪ ಶ್ರೀರಾಮುಲು ಬಗ್ಗೆ ಏನು ಮಾತನಾಡೋದು. ಸ್ವಾರ್ಥ ಮಾಡುವವರೆಲ್ಲಾ ಒಂದು ಕಡೆ ಸೇರಿಕೊಂಡಿದ್ದಾರೆ. ಮೌಲ್ಯ ಸಿದ್ದಾಂತ ಏನೂ ಇಲ್ಲ. ಇವರ ಹೇಳಿಕೆಗಳಿಗೆ ಪ್ರತಿಕ್ರಿಯೆ ಕೊಡುವುದಿಲ್ಲ.

ದುಡ್ಡಿನ ಮೂಲಕ ಚುನಾವಣೆ

ದುಡ್ಡಿನ ಮೂಲಕ ಚುನಾವಣೆ

ಬಿಜೆಪಿ-ಜೆಡಿಎಸ್ ಪರ ಜನ ಇಲ್ಲ ಹೀಗಾಗಿ ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ ಇಂತಹ ಮುಖ್ಯಮಂತ್ರಿ ಚುನಾವಣಾ ಕಣದಲ್ಲಿರಬೇಕಾ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈಸೂರಲ್ಲಿ 30 ಸಾವಿರ ಸೀರೆ ಸಿಕ್ಕಿತು ಯಾರದು, ಅದು ಯಾರ ದುಡ್ಡು ? ಎಲ್ಲಿಂದ ಬಂತು ?
ಇದು ಅಕ್ರಮ ಅಲ್ವಾ ? ಕಾನೂನಿನಲ್ಲಿ ಸೀರೆ ಹಂಚುವುದಕ್ಕೆ ಅವಕಾಶ ಇದೆಯಾ ?
ಸರ್ಕಾರದಲ್ಲಿ ಇದ್ದುಕೊಂಡು ಅಕ್ರಮ ಮಾಡುತ್ತಾರೆ.ಇವರಿಗೆ ನೈತಿಕತೆ ಇದೆಯೇ ಎಂದು ಕೇಳಿದ್ದಾರೆ.

ಬಿಎಸ್‌ವೈಗೆ ಸಿಎಂ ಆಗಿ ಮುಂದುವರೆಯಲು ನೈತಿಕತೆ ಇಲ್ಲ

ಬಿಎಸ್‌ವೈಗೆ ಸಿಎಂ ಆಗಿ ಮುಂದುವರೆಯಲು ನೈತಿಕತೆ ಇಲ್ಲ

ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲು ಯಾವ ನೈತಿಕತೆ ಇದೆ ?ಅವರು ಚುನಾವಣಾ ಕಣದಲ್ಲಿರಲು ಅರ್ಹರಾ, ಸೀರೆಯಲ್ಲಿ ಯೋಗೇಶ್ವರ್ ಪೋಟೋ, ಬಿಜೆಪಿ ಅವರ ಪೋಟೋ, ವಿಶ್ವನಾಥ್ ಪೋಟೋ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಯಾರ ಫೋಟೋ ಇದೆ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ಇನ್ನು ಲಕ್ಷ್ಮಣ ಸವದಿ ಶಾಸಕರಲ್ಲದಿದ್ದರೂ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಯಿತು. ಇದೀಗ ಈಗ ಬಿಜೆಪಿ ಸೇರಿರುವವರು ಯಾರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಎಂದೇ ತಿಳಿಯುತ್ತಿಲ್ಲ ಎಂದು ಗುಡುಗಿದ್ದಾರೆ.

ಶ್ರೀರಾಮುಲುಗೆ ಮಾನ ಮರ್ಯಾದೆ ಇದ್ದರೆ ಮೊದಲೇ ರಾಜೀನಾಮೆ ನೀಡಬೇಕಿತ್ತು. ಡಿಸಿಎಂ ಮಾಡುತ್ತಾರೆ ಎಂದು ಪ್ರಚಾರ ಮಾಡಿಕೊಂಡಿದ್ದರು.

English summary
If there was any dignity, Sriramulu would have already resigned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X