ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಮುಂದೆ ಮೋದಿ ಚರ್ಚೆಗೆ ಬರಲಿ: ಸಿದ್ದರಾಮಯ್ಯ

|
Google Oneindia Kannada News

Recommended Video

Lok Sabha Election 2019 :ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಮುಂದೆ ಮೋದಿ ಚರ್ಚೆಗೆ ಬರಲಿ ಸಿದ್ದರಾಮಯ್ಯ

ಮೈಸೂರು, ಮಾರ್ಚ್ 30 : ಬಿಜೆಪಿ ಪಕ್ಷ ಒಂದು ರೀತಿ ಕ್ಯಾನ್ಸರ್ ರೋಗ ಇದ್ದಂತೆ. ಇದಕ್ಕೆ ಪರಿಹಾರ ಇವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇಬೇಕು. ತಾಕತ್ತಿದ್ದರೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಮುಂದೆ ಮೋದಿ ಚರ್ಚೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಬಹಿರಂಗ ಸವಾಲೆಸಿದಿದ್ದಾರೆ.

ಮೈಸೂರಿನಲ್ಲಿ ನಡೆದ ಕಾಂಗ್ರೆಸ್ - ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಜೊತೆ ಚರ್ಚೆಗೆ ನಾನು ಸದಾ ಸಿದ್ಧ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನರೇಂದ್ರ ಮೋದಿ ಒಂದೇ ವೇದಿಕೆಗೆ ಮೋದಿ ಮಹಾನ್ ನಾಟಕಕಾರ, ಸುಳ್ಳು ಹೇಳುವುದರಲ್ಲಿ ನಿಸ್ಸಿಮ. ನನ್ನ 50 ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಮೋದಿ. ಮೋದಿಯಂತೆ ಪ್ರತಾಪ್ ಸಿಂಹನು ಕೂಡ ಸುಳ್ಳು ಹೇಳ್ಕೊಂಡೆ ಓಟ್ ಕೇಳುವುದಕ್ಕೆ ಶುರು ಮಾಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹ ಅವರಿಗೆ ಅಹಂ ಹೆಚ್ಚಾಗಿದೆ

ಪ್ರತಾಪ್ ಸಿಂಹ ಅವರಿಗೆ ಅಹಂ ಹೆಚ್ಚಾಗಿದೆ

ಎಲ್ಲಾ ವಿಚಾರದಲ್ಲೂ ನಾನು ಎಂಬ ಅಹಂ ಪ್ರತಾಪ್ ಸಿಂಹಗೆ ಹೆಚ್ಚಿದೆ. ನಾನ್ ಮಾಡ್ದೆ ನಾನ್ ಮಾಡ್ದೆ ಅಂತಾನೆ. ನಮ್ಮ ಕೆಲಸವನ್ನು ಪುಸ್ತಕದಲ್ಲಿ ಬರೆದುಕೊಂಡು ನಾನೇ ಮಾಡಿದ್ದೂ ಅಂತಾನೆ. ಮೈಸೂರನ್ನ ಪ್ಯಾರಿಸ್ ಮಾಡ್ತೀನಿ ಅಂದಿದ್ದರು ಮೋದಿ. ಈಗ ಎಲ್ಲಿದೆ ಪ್ಯಾರೀಸು ? ಎಂದು ಪ್ರಶ್ನಿಸಿದರು.

ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ: ಸಿದ್ದರಾಮಯ್ಯ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ: ಸಿದ್ದರಾಮಯ್ಯ

ಎರಡೂ ಪಕ್ಷಗಳು ಒಗ್ಗಟ್ಟಿನಲ್ಲಿರಬೇಕು

ಎರಡೂ ಪಕ್ಷಗಳು ಒಗ್ಗಟ್ಟಿನಲ್ಲಿರಬೇಕು

ಎರಡು ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿದ್ದಕ್ಕೆ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳಿಂದ ದಾಖಲೆಯ ಗೆಲುವು ದಾಖಲಿಸಿದ್ದೆವು. ಮಂಡ್ಯ, ರಾಮನಗರ ಉಪಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡ ಹಿನ್ನೆಲೆ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಹಾಗೆಯೇ ಮೈಸೂರಿನಲ್ಲೂ ನಾವು ಒಂದಾದರೆ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಬಹುದು. ಎರಡು ಪಕ್ಷದ ಕಾರ್ಯಕರ್ತರು ಹಳೆಯದನ್ನು ಮರೆತು ಬಿಜೆಪಿ ಸೋಲಿಸಬೇಕು ಎಂದು ಕರೆ ನೀಡಿದರು.

ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತಾಡೊಲ್ಲ: ಸಿದ್ದರಾಮಯ್ಯಗೆ ಗೌಡರ ಚಾಟಿ ಗಂಡನನ್ನು ಕಳೆದುಕೊಂಡವರ ಬಗ್ಗೆ ಕೀಳಾಗಿ ಮಾತಾಡೊಲ್ಲ: ಸಿದ್ದರಾಮಯ್ಯಗೆ ಗೌಡರ ಚಾಟಿ

ಬಿಜೆಪಿ ಪಕ್ಷ ಒಂದು ರೀತಿ ಕ್ಯಾನ್ಸರ್ ರೋಗವಿದ್ದಂತೆ

ಬಿಜೆಪಿ ಪಕ್ಷ ಒಂದು ರೀತಿ ಕ್ಯಾನ್ಸರ್ ರೋಗವಿದ್ದಂತೆ

ಬಿಜೆಪಿ ಪಕ್ಷ ಒಂದು ರೀತಿ ಕ್ಯಾನ್ಸರ್ ರೋಗ ಇದ್ದಂತೆ. ಇದಕ್ಕೆ ಪರಿಹಾರ ಇವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇಬೇಕು. ಹೀಗಾಗಿ ಮಹಾಘಟಬಂಧನ್ ಮಾಡಲಾಗಿದೆ. ಮನ್ ಕೀ ಬಾತ್ ಆಯ್ತು, ಇದೀಗ ಚೌಕಿದಾರ್ ಅಂತೇ. ಈ ದೇಶದಲ್ಲಿ ಪ್ರಜೆಗಳನ್ನ ರಕ್ಷಿಸೋಕೆ ಅಧಿಕಾರ ಬಳಸಬೇಕು. ಅಧಿಕಾರ ಕೊಟ್ಟಿರೋದೆ ಜನರಿಗೆ ಸೇವೆ ಮಾಡಲು. ಮೋದಿ ಬಡವರಿಗೆ ಚೌಕಿದಾರ ಅಲ್ಲ. ಅಂಬಾನಿ, ಅದಾನಿಗೆ ಚೌಕಿದಾರ್ ಅಷ್ಟೇ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ, ಆರ್‌ಸಿಬಿ ಆಟಕ್ಕೆ ಚಪ್ಪಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ, ಆರ್‌ಸಿಬಿ ಆಟಕ್ಕೆ ಚಪ್ಪಾಳೆ

ಲೋಕ ಚುನಾವಣೆ 2 ಪಕ್ಷದ ಸಂಬಂಧ ಗಟ್ಟಿಗೊಳಿಸುತ್ತೆ

ಲೋಕ ಚುನಾವಣೆ 2 ಪಕ್ಷದ ಸಂಬಂಧ ಗಟ್ಟಿಗೊಳಿಸುತ್ತೆ

ಸಭೆಯಲ್ಲಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್, ನನ್ನ ಗೆಲುವು ಎರಡು ಪಕ್ಷಗಳ ಗೆಲುವು. ಈ ಚುನಾವಣೆ ಎರಡು ಪಕ್ಷಗಳ ಸಂಬಂಧವನ್ನ ಗಟ್ಟಿಗೊಳಿಸಲಿದೆ. ಎರಡು ಪಕ್ಷಗಳಲ್ಲಿ ರಾಜಕೀಯ ಹಿನ್ನೆಡೆ ಉಂಟಾಗಬಾರದು. ಇದು ಉಭಯ ಪಕ್ಷಗಳ ನಂಬಿಕೆ ಹಾಗೂ ವಿಶ್ವಾಸವನ್ನು ಹೆಚ್ಚಿಸಲಿದೆ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಂತೆ ರಾಷ್ಟ್ರ ಮಟ್ಟದಲ್ಲೂ ಹೊಂದಾಣಿಕೆಯ ಅವಶ್ಯಕತೆ ಇದೆ. ಹೀಗಾಗಿ ಈ ಚುನಾವಣೆಯಲ್ಲಿ ಮಾನಸಿಕವಾಗಿ ಸಿದ್ದಗೊಳ್ಳಬೇಕು ಎಂದು ಹೇಳಿದರು.

ಸಭೆಗೆ ಗೈರಾಗುವ ಮೂಲಕ ಅಂತರ ಕಾಯ್ದುಕೊಂಡ ಜಿ ಟಿ ದೇವೇಗೌಡ

ಸಭೆಗೆ ಗೈರಾಗುವ ಮೂಲಕ ಅಂತರ ಕಾಯ್ದುಕೊಂಡ ಜಿ ಟಿ ದೇವೇಗೌಡ

ಇನ್ನು ಸಭೆಗೆ ಗೈರಾಗುವ ಮೂಲಕ ಸಚಿವ ಜಿ.ಟಿ ದೇವೇಗೌಡ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಭೆಗೆ ಜೆಡಿಎಸ್ ನ ಪ್ರಮುಖರೇ ನಾಯಕರೇ ಗೈರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕೊಡಗು ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಸಭೆಗೆ ಆಗಮಿಸಿರಲಿಲ್ಲ. ಮೈತ್ರಿ ಸಭೆಯಿಂದ ಸಚಿವ ಜಿ.ಟಿ. ದೇವೇಗೌಡ ದೂರನೇ ಉಳಿದಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ದೋಸ್ತಿ ನಾಯಕರ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿತ್ತು.

English summary
Former chief minister Siddaramaiah invited to Prime Minister Narendra Modi For Open debate of the Development of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X