ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ? ಸುಳಿವು ಕೊಟ್ಟ ಸಿದ್ದರಾಮಯ್ಯ

|
Google Oneindia Kannada News

Recommended Video

ಜೆಡಿಎಸ್ ಜೊತೆ ಮೈತ್ರಿಯ ಸುಳಿವನ್ನು ಕೊಟ್ರಾ ಸಿದ್ದರಾಮಯ್ಯ? |Oneindia kannada

ಮೈಸೂರು, ನವೆಂಬರ್ 20: ಲೋಕಸಭೆ ಚುನಾವಣೆಯಲ್ಲಿ ಮುಗ್ಗರಿಸಿ, ಮೈತ್ರಿ ಸರ್ಕಾರ ಮುರಿದು ಬಿದ್ದ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದಿದೆ. ಆದರೆ ಇದಕ್ಕೆ ಮತ್ತೆ ಜೀವ ನೀಡುವ ಸಣ್ಣ ಸುಳಿವೊಂದನ್ನು ಸಿದ್ದರಾಮಯ್ಯ ಅವರೇ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿರುವ ಸಿದ್ದರಾಮಯ್ಯ, 'ಜೆಡಿಎಸ್ ಮತ್ತು ಕಾಂಗ್ರೆಸ್ ಭಿನ್ನ ಹಾದಿಯಲ್ಲಿದ್ದೇವೆ, ಆದರೆ ನಮ್ಮ ಗುರಿ ಒಂದೇ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೇ ನಮ್ಮ ಗುರಿ' ಎಂದು ಹೇಳಿದ್ದಾರೆ. ಇದೇ ಮಾದರಿಯ ಮಾತುಗಳನ್ನು ಮೈತ್ರಿ ಸರ್ಕಾರ ರಚನೆ ಸಮಯದಲ್ಲಿಯೂ ಸಿದ್ದರಾಮಯ್ಯ ಆಡಿದ್ದರು.

ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ ಎಂದ ಸಿದ್ದರಾಮಯ್ಯನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ ಎಂದ ಸಿದ್ದರಾಮಯ್ಯ

'ಬಿಜೆಪಿ ಅಭ್ಯರ್ಥಿಯನ್ನು, ಅನರ್ಹರನ್ನು ಸೋಲಿಸಲು ಜೆಡಿಎಸ್‌ ನವರು ಕಾಂಗ್ರೆಸ್‌ಗೆ ಬೆಂಬಲಿಸಿದರೆ ತಪ್ಪೇನಿದೆ?' ಎಂದು ಸಿದ್ದರಾಮಯ್ಯ ಇಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಕನಿಷ್ಟ 8 ಸ್ಥಾನ ಗೆಲ್ಲಬೇಕು ಆದರೆ ಅದು ಸಾಧ್ಯವಿಲ್ಲ: ಸಿದ್ದರಾಮಯ್ಯ

ಬಿಜೆಪಿ ಕನಿಷ್ಟ 8 ಸ್ಥಾನ ಗೆಲ್ಲಬೇಕು ಆದರೆ ಅದು ಸಾಧ್ಯವಿಲ್ಲ: ಸಿದ್ದರಾಮಯ್ಯ

'ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಇಲ್ಲ. ಅವರ ಬಳಿ 105 ಸ್ಥಾನಗಳಷ್ಟೆ ಇವೆ. ಬಹುಮತ ಪಡೆಯಲು ಕನಿಷ್ಟ ಎಂಟು ಸ್ಥಾನಗಳನ್ನು ಅವರು ಗೆಲ್ಲಲೇಬೇಕಿದೆ' ಆದರೆ ಅದು ಸಾಧ್ಯವಿಲ್ಲ, ಕರ್ನಾಟಕದ ಜನರು ಪಕ್ಷಾಂತರವನ್ನು ಸಹಿಸುವುದಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಅನರ್ಹ' ಹಣೆಪಟ್ಟಿ ಕಟ್ಟಿದ್ದು ನಾನಲ್ಲ, ಸುಪ್ರೀಂಕೋರ್ಟ್: ಸಿದ್ದರಾಮಯ್ಯ

'ಅನರ್ಹ' ಹಣೆಪಟ್ಟಿ ಕಟ್ಟಿದ್ದು ನಾನಲ್ಲ, ಸುಪ್ರೀಂಕೋರ್ಟ್: ಸಿದ್ದರಾಮಯ್ಯ

'ಪ್ರಸ್ತುತ ಬಿಜೆಪಿ ಅಭ್ಯರ್ಥಿಗಳಿಗೆ 'ಅನರ್ಹ' ಹಣೆಪಟ್ಟಿಯನ್ನು ನಾನು ಕಟ್ಟಿಲ್ಲ, ಸುಪ್ರೀಂಕೋರ್ಟ್ ಅವರಿಗೆ 'ಅನರ್ಹ' ಹಣೆಪಟ್ಟಿ ಕಟ್ಟಿದೆ' ಎಂದು ಅನರ್ಹ ಶಾಸಕರ ಮೇಲೆ ಸಿದ್ದರಾಮಯ್ಯ ಗುಡುಗಿದರು.

ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'

ಬೇಲಿಯೇ ಎದ್ದು ಹೊಲ ಮೇಯ್ದಿದೆ: ಸಿದ್ದರಾಮಯ್ಯ

ಬೇಲಿಯೇ ಎದ್ದು ಹೊಲ ಮೇಯ್ದಿದೆ: ಸಿದ್ದರಾಮಯ್ಯ

'ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅಮಿತ್ ಶಾ ಮತ್ತು ಯಡಿಯೂರಪ್ಪ ಗಾಳಿಗೆ ತೂರಿದ್ದಾರೆ. ಬೇಲಿಯೇ ಎದ್ದು ಹೊಲ ಮೇದಂತೆ ಆಗಿದೆ. 'ಬಿಜೆಪಿಯ ವರ್ತನೆಯಿಂದ ಜನರು ಬೇಸತ್ತಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನದ ನಂತರ ಕರ್ನಾಟಕ ಉಪಚುನಾವಣೆಯಲ್ಲಿಯೂ ಬಿಜೆಪಿ ಮುಗ್ಗರಿಸಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ರಾಮುಲು ಸವಾಲಿಗೆ ವ್ಯಂಗ್ಯದ ಪ್ರತಿಕ್ರಿಯೆ

ರಾಮುಲು ಸವಾಲಿಗೆ ವ್ಯಂಗ್ಯದ ಪ್ರತಿಕ್ರಿಯೆ

ಸಚಿವ ಶ್ರೀರಾಮುಲು ಹಾಕಿರುವ ಸವಾಲಿನ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ರಾಮುಲು ಖ್ಯಾತ ರಾಜಕಾರಣಿ ಅವರಷ್ಟು ಖ್ಯಾತಿ ನನಗಿಲ್ಲ, ಅವರಂತೆ ತೊಡೆ ತಟ್ಟಲೂ ಸಹ ನನಗೆ ಬರೊಲ್ಲ' ಎಂದು ಹೇಳಿ ನಕ್ಕರು.

ನಾನು ವಾಪಸ್ ಪಡೆದಿದ್ದು ವಿದ್ಯಾರ್ಥಿಗಳ ಮೇಲಿನ ಕೇಸ್: ಸಿದ್ದರಾಮಯ್ಯ

ನಾನು ವಾಪಸ್ ಪಡೆದಿದ್ದು ವಿದ್ಯಾರ್ಥಿಗಳ ಮೇಲಿನ ಕೇಸ್: ಸಿದ್ದರಾಮಯ್ಯ

'ಸಿದ್ದರಾಮಯ್ಯ ಕೇಸ್ ವಾಪಾಸ್ ಪಡೆದ ಸಂಘಟನೆಯೇ ಇಂದು ತನ್ವೀರ್ ಸೇಠ್ ಮೇಲಿನ ಹಲ್ಲೆಯಲ್ಲಿ ಭಾಗಿಯಾಗಿದೆ' ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಸಮಾಜಘಾತುಕ ಕೆಲಸದಲ್ಲಿ ತೊಡಗಿರುವ ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಅಗತ್ಯ. 'ಕೆಲವು ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು, ಅವರ ಮೇಲಿನ ಪ್ರಕರಣವನ್ನಷ್ಟೆ ನಾನು ವಾಪಾಸ್ ಪಡೆದಿದ್ದೆ' ಎಂದು ಸಿದ್ದರಾಮಯ್ಯ ಹೇಳಿದರು.

English summary
Siddaramaiah said today that, JDS-Congress party aim is one that they should defeat disqualified MLAs. He also said If JDS supports congress we welcome that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X