ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರದರ್ಶಕವಾಗಿ ನಡೆಯುತ್ತದಾ ಉಪಚುನಾವಣೆ? ಅನುಮಾನ ಪಟ್ಟ ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 21: ರಾಜ್ಯದ 15 ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.

Recommended Video

Ex CM Siddaramaiah gives shocking statement on MTB Nagaraj | Oneindia Kannada

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ, ಅನರ್ಹರು ಮಾರಾಟವಾದ ದುಡ್ಡನ್ನು ಜನರಿಗೆ ಹಂಚುತ್ತಿದ್ದಾರೆ. ಜೊತೆಗೆ ಜನರಿಗೆ ಸೀರೆ, ಕುಕ್ಕರ್, ಫ್ರಿಜ್ ನೀಡಲಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಪಾರದರ್ಶಕತೆ ಎಲ್ಲಿಂದ ಬಂತು? ಎಂದು ಅನುಮಾನ ವ್ಯಕ್ತಪಡಿಸಿದರು.

 ಎಂಟಿಬಿನೇ ಸಾಲ ಕೊಟ್ಟಿದ್ದಾರೆ

ಎಂಟಿಬಿನೇ ಸಾಲ ಕೊಟ್ಟಿದ್ದಾರೆ

ಎಂಟಿಬಿ ನಾಗರಾಜು ಗೆಲುವಿಗೆ ಬಿ.ಎಸ್.ಯಡಿಯೂರಪ್ಪ ಪಣತೊಟ್ಟಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಎಂಟಿಬಿ ನಾಗರಾಜು ಅವರಿಂದ ಯಡಿಯೂರಪ್ಪ ಸಾಲ ಪಡೆದಿದ್ದಾರೆ. ಆಪರೇಷನ್ ಕಮಲದಲ್ಲಿ ಎಂಟಿಬಿನೇ ಸಾಲ ಕೊಟ್ಟಿದ್ದಾರೆ. ಅಲ್ಲದೇ ಯಡಿಯೂರಪ್ಪ ಎಲ್ಲರಿಗೂ ಗೆಲ್ಲಿಸುತ್ತೀನಿ ಅಂತಾರೆ" ಎಂದು ಟೀಕಿಸಿದರು. "ಯಡಿಯೂರಪ್ಪ ಸಾಕಷ್ಟು ಸುಳ್ಳು ಹೇಳಿದ್ದು, ಹಲವು ತಾಲೂಕುಗಳನ್ನು ದತ್ತು ಪಡೆದುಕೊಳ್ಳುವುದಾಗಿ ಹೇಳಿದ್ದರು. ಯಾವ ತಾಲೂಕನ್ನೂ ದತ್ತು ಪಡೆದಿಲ್ಲ. ಸುಳ್ಳು ಹೇಳುವುದು ಚುನಾವಣಾ ಗಿಮಿಕ್" ಎಂದು ಟೀಕಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಹೀಗೆ ಹೇಳುವುದೇ?

 ಮನವೊಲಿಸುತ್ತೇನೆ ಎಂದಿಲ್ಲ

ಮನವೊಲಿಸುತ್ತೇನೆ ಎಂದಿಲ್ಲ

ಮಾಜಿ ಸಚಿವ ಜಿಟಿಡಿ ತಟಸ್ಥ ವಿಚಾರದ ಕುರಿತು ಮಾತನಾಡಿದ ಅವರು, "ಜಿಟಿಡಿಯೊಂದಿಗೆ ಮಾತನಾಡುತ್ತೇನೆಂದು ಹೇಳಿದ್ದೇನೆ, ಅವರ ಮನವೊಲಿಸುತ್ತೇನೆ ಎಂದು ಹೇಳಿಲ್ಲ. ಆದರೆ ಜಿಟಿಡಿ ಮನಸ್ಥಿತಿ ನೋಡಿ ಮಾತನಾಡುತ್ತೇನೆ" ಎಂದು ಸ್ಪಷ್ಟನೆ ನೀಡಿದರು.

 ನಿರೀಕ್ಷೆಗೂ ಮೀರಿದ ಸ್ಪಂದನೆ

ನಿರೀಕ್ಷೆಗೂ ಮೀರಿದ ಸ್ಪಂದನೆ

ಚುನಾವಣಾ ಪ್ರಚಾರದಲ್ಲಿ ನಿರೀಕ್ಷೆಗೂ ಮೀರಿ ಜನ ಸ್ಪಂದಿಸುತ್ತಿದ್ದಾರೆ. ಜನರೇ ಅನರ್ಹರ ಬಗ್ಗೆ ಮಾತನಾಡುತ್ತಿದ್ದು, ಹಣದ ಆಸೆಗೆ, ಅಧಿಕಾರಿದ ಆಸೆಗೆ ಅನರ್ಹರಾಗಿದ್ದಾರೆ ಎನ್ನುತ್ತಿದ್ದಾರೆ. ಭಾಷಣದಲ್ಲಿ ನಾನು ಪ್ರಶ್ನೆ ಕೇಳಿದರೆ ಅವರೇ ಉತ್ತರ ಹೇಳುತ್ತಿದ್ದಾರೆ. ಪಕ್ಷಾಂತರ ಮಾಡಿದವರನ್ನು ಸೋಲಿಸಬೇಕೆಂದು ಜನರಿಗೆ ತಿಳಿದಿದ್ದು, 15 ಜನರೂ ಸೋಲುತ್ತಾರೆ. ಅವರು ಎಷ್ಟೇ ಸುಳ್ಳು ಹೇಳಿದ್ರೂ ಜನ ಕೇಳಲ್ಲ ಎಂದರು.

ಎಂಟಿಬಿ ನಾಗರಾಜ್ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ: ಸಿದ್ದರಾಮಯ್ಯಎಂಟಿಬಿ ನಾಗರಾಜ್ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ: ಸಿದ್ದರಾಮಯ್ಯ

 ಜಾತಿ ಬಣ್ಣ ಕಟ್ಟುವುದು ಸರಿಯಲ್ಲ

ಜಾತಿ ಬಣ್ಣ ಕಟ್ಟುವುದು ಸರಿಯಲ್ಲ

"ಸಚಿವ ಮಾಧುಸ್ವಾಮಿ ಕ್ಷಮೆ ಕೇಳಲಿಲ್ಲ, ಯಡಿಯೂರಪ್ಪನೇ ಕ್ಷಮೆ ಕೇಳಿದ ಮೇಲೆ ಮಾಧುಸ್ವಾಮಿ ಕೇಳಬೇಕಿತ್ತು. ಇದನ್ನು ಇಲ್ಲಿಗೆ ಮುಕ್ತಾಯ ಮಾಡಬೇಕಿತ್ತು, ಇದಕ್ಕೆ ಜಾತಿ ಬಣ್ಣ ಕಟ್ಟುವುದು ಸರಿಯಲ್ಲ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

'ಹಳ್ಳಿಹಕ್ಕಿ'ಯ ಗೂಡಿಗೆ ಡಿಚ್ಚಿ ಕೊಟ್ಟ 'ಟಗರು'!'ಹಳ್ಳಿಹಕ್ಕಿ'ಯ ಗೂಡಿಗೆ ಡಿಚ್ಚಿ ಕೊಟ್ಟ 'ಟಗರು'!

English summary
Former chief minister Siddaramaiah has expressed doubts about the transparency in by-elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X