ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಕ್ಕೆ ಉಗ್ರರ ಬಗ್ಗೆ ಮೃದು ಧೋರಣೆ ಬೇಡ, ಉಗ್ರವಾದ ಕ್ರಮ ಕೈಗೊಳ್ಳಿ: ಸಿದ್ದರಾಮಯ್ಯ

|
Google Oneindia Kannada News

Recommended Video

Pulwama : ಯೋಧರ ಮೇಲಿನ ದಾಳಿಯ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Oneindia Kannada

ಮೈಸೂರು, ಫೆಬ್ರವರಿ 16: ಉಗ್ರರು ಮಾಡಿರುವ ಹೇಯ ಕೃತ್ಯಕ್ಕೆ ಅವರಿಗೆ ಉಗ್ರವಾದ ಶಿಕ್ಷೆಯೇ ದೊರೆಯಬೇಕು, ಸರ್ಕಾರದಿಂದ ಮೃದು ಧೋರಣೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೆ 42 ಮಂದಿ ಯೋಧರು ಹುತಾತ್ಮರಾಗಿದ್ದಾರೆ, ಈ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಲೇ ಬೇಕು, ಇದೊಂದು ಅಮಾನುಷ ಕೃತ್ಯ ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ನರೇಂದ್ರ ಮೋದಿಯವರು ಹೇಳಿದರು, ನಕಲಿ ನೋಟುಗಳು ಉಗ್ರರಿಗೆ ಹೋಗ್ತಿದ್ದವು. ಅದಕ್ಕೇ ನೋಟು ಅಮಾನ್ಯೀಕರಣ ಮಾಡಿದ್ದೀವಿ, ಅಂತ ಇದ್ರಿಂದ ಏನು ಉಪಯೋಗವಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಟೋಟಲಿ ಫೆಲ್ಯೂರ್ ಆಗಿದೆ. ನಲವತ್ತು ಐವತ್ತು ಜನ ಸಾಯ್ತಾರೆ ಅಂದ್ರೆ ಏನರ್ಥ. 2500 ಜನ ಯೋಧರು ಹೋಗ್ತಿದ್ದರು ಲಕ್ಕಿಲಿ ಏನೂ ಆಗಿಲ್ಲ ಎಂದರು.

siddaramaiah attacked on Modi over Pulwama suicide bom attack

ಯೋಧರು ನಮಗೋಸ್ಕರ ಕೆಲಸ ಮಾಡ್ತಿದ್ದಾರೆ. ಸರ್ಕಾರ ಕೂಡಲೇ ಉಗ್ರರನ್ನ ಪತ್ತೆ ಹಚ್ಚಬೇಕು. ಉಗ್ರರ ಅಡಗುತಾಣಗಳನ್ನ ಪತ್ತೆಹಚ್ಚಬೇಕು, ಉಗ್ರನಾಯಕರನ್ನ ಮೊದಲು ನಾಶಪಡಿಸಬೇಕು. ಮಂಡ್ಯದ ಹುತಾತ್ಮ ಯೋಧನ ನೋಡಲು ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲು ಮಾಜಿ ಸಿಎಂ ನಕಾರ. ಯಾವುದೇ ಉತ್ತರ ಕೊಡದೆ ಸಿದ್ದರಾಮಯ್ಯ ಅಲ್ಲಿಂದ ಹೊರಟೇ ಬಿಟ್ಟರು.

English summary
Where is demonetisation effect, where is black money effect? former chief minister Siddaramaiah asks Prime minister Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X