ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತೀ, ಚೆನ್ನಮಲ್ಲಿಕಾರ್ಜುನ ಸತಿ, ಅಕ್ಕಮಹಾದೇವಿ ಏಕವ್ಯಕ್ತಿ ಪ್ರದರ್ಶನ

|
Google Oneindia Kannada News

ಮೈಸೂರು, ಜನವರಿ 31 : ವ್ಯಕ್ತಿಯ ಸರ್ವತೋಮುಖ ಗುಣಗಳನ್ನು ತೆರೆಯ ಮೇಲೆ ರಂಗರೂಪದ ಮುನ್ನುಡಿಯಿಟ್ಟು ಸಂಭ್ರಮಿಸುವ ಧ್ಯೋತಕ ಈ ನಾಟಕ ಕಲೆ .

ಏಕವ್ಯಕ್ತಿ ನಾಟಕ ಪ್ರದರ್ಶನ ಎಂದರೇ ಅದೊಂದು ಸಾಮಾನ್ಯ ಕಲೆಯಲ್ಲ. ಇಂತಹ ಕಲೆಯನ್ನು ಒಬ್ಬ ವ್ಯಕ್ತಿ ರಂಗರೂಪಕ್ಕಿಳಿಸುವುದು, ಅವನೇ ಮುಖ್ಯ ರಂಗಭೂಮಿಕೆಯಲ್ಲಿ, ಹಾಡುಗಾರನಾಗಿ, ನಾಯಕನಾಗಿ, ವಿಲನ್ ಆಗಿ ಎಲ್ಲಾ ಪಾತ್ರಗಳನ್ನು ನಿಭಾಯಿಸಬಲ್ಲ ಚಾಣಾಕ್ಷನಾಗಬೇಕು.

ರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರುರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರು

ಹೀಗೆ ರಂಗಕಲೆಯನ್ನು ಯಾವುದೇ ಲೇಶವಿಲ್ಲದೇ ಪ್ರಸ್ತುತಪಡಿಸುವ ಪರಿ ಜನಮೆಚ್ಚುಗೆ ಗಳಿಸಿದರೇ ಸ್ಥಳದಲ್ಲೇ ಚಪ್ಪಾಳೆಯ ಉಡುಗೊರೆ ಆತನಿಗೆ ಸಾರ್ಥಕ. ಇಂತಹ ರಂಗಕಲೆಯ ಏಕವ್ಯಕ್ತಿ ಪ್ರದರ್ಶನ ನಾಟಕವನ್ನು ಮೈಸೂರಿನ ಶ್ವೇತಾ ಮಡಪ್ಪಾಡಿ ಇಂದು ಪ್ರಚುರಪಡಿಸಲಿದ್ದಾರೆ.

Shwetha madappadis one act play show in mysuru

ಶ್ವೇತಾ ಮೂಲತಃ ಸಕಲ ವಿದ್ಯೆಯನ್ನು ತಿಳಿದವರು. ಈಕೆಗೆ ಸಾಹಿತ್ಯ, ಸಂಗೀತ, ಕಲೆ, ಅಭಿನಯ, ಜಾನಪದ, ಸಂಶೋಧನೆ, ಭರತನಾಟ್ಯ ಹೀಗೆ ಎಲ್ಲವೂ ಗೊತ್ತಿರುವ ಚಾಣಾಕ್ಷೆ.. ಇತ್ತೀಚಿನ ಕೆಲ ದಿನಮಾನಸಗಳಲ್ಲಿ ಅಭಿನಯದ ನಟನ ತಂಡದೊಂದಿಗೆ ತಾನು ಕೂಡ ಭಾಗಿಯಾಗುತ್ತಿರುವಾಗ ಥಟ್ಟನೆ ತಲೆಯಲ್ಲಿ ಹೊಳೆದದ್ದು ನಾನೇಕೆ ಏಕವ್ಯಕ್ತಿ ರಂಗಪ್ರಯೋಗ ಮಾಡಬಾರದೆಂಬ ಅಭಿಲಾಷೆ.

ಅದಕ್ಕೆ ತಕ್ಕಂತೆ ಆಯ್ಕೆಮಾಡಿಕೊಂಡದ್ದು ರಂಗಭೂಮಿಕೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಕ್ಕಮಹಾದೇವಿಯ ಕುರಿತಾದ ಏಕವ್ಯಕ್ತಿ ಪ್ರದರ್ಶನದ ಮುಖ್ಯ ಕಥಾ ಹಂದರ. ಅಷ್ಟಕ್ಕೂ ಅವರ ಆಯ್ಕೆ ಇದೇ ಏಕೆ, ಅವರಿಗಾದ ಸವಾಲುಗಳೇನು ಎಂಬುದರ ಕುರಿತಾಗಿ ಒನ್ ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡ ಅನುಭವ ಇಲ್ಲಿದೆ,

ಮದುವೆ ಮನೆ ಸಂಭ್ರಮ ಮೂಡಿಸಿದ ರಂಗಾಯಣದ ಆವರಣಮದುವೆ ಮನೆ ಸಂಭ್ರಮ ಮೂಡಿಸಿದ ರಂಗಾಯಣದ ಆವರಣ

ನಾನು ಬಾಲ್ಯದಲ್ಲಿ ಆಲಿಬಾಬಾ ಮತ್ತು 40 ಮಂದಿ ಕಳ್ಳರು, ಗುರುದಕ್ಷಿಣೆ ಸೇರಿದಂತೆ ಮತ್ತಷ್ಟು ನಾಟಕಗಳನ್ನು ರಂಗಕಲಾವಿದರೊಂದಿಗೆ ಮಾಡಿದ್ದೆ. ನನ್ನ ಅಣ್ಣ ನೀನಾಸಂ ವಿದ್ಯಾರ್ಥಿ, ಅವರನ್ನು ನೋಡಿಯೇ ನನಗೆ ಕಲೆಯ ಬಗ್ಗೆ ಸಾಧನೆಯ ಕುರಿತಾಗಿ ಆಸಕ್ತಿ ಹುಟ್ಟಿತು.

Shwetha madappadis one act play show in mysuru

ಆಗಲೇ ನನಗೆ ಆಸೆಯೊಂದು ಮೂಡಿತು, ಅದೇ ನನ್ನ ಕನಸು ಏಕವ್ಯಕ್ತಿ ನಾಟಕ ಪ್ರದರ್ಶನ. ನಾನದನ್ನೂ ಮಾಡಿಯೇ ತೀರಬೇಕೆಂಬ ಮನಸ್ಸು ಹಾತೊರೆಯಿತು. ಇದಕ್ಕೆ ಪುಷ್ಟಿಯೆಂಬಂತೆ ಶಿವಶಂಕರ್ ನೀನಾಸಂ ಸರ್ ನನ್ನ ಈ ಆಸೆಗೆ ಪೋಷಿಸದರು. ಸತತ 15 ವರ್ಷಗಳ ಬಳಿಕ ಮತ್ತೆ ರಂಗ ಪ್ರಯೋಗ ಶುರು ಮಾಡಿದ್ದೇನೆ. ಇದೊಂದು ರೋಮಾಂಚಕ ಅನುಭವವೇ ಸರಿ.

ಮೊದಲು ಏಕವ್ಯಕ್ತಿ ಪ್ರದರ್ಶನ ಮಾಡಬೇಕೆಂಬ ಯೋಚನೆ ಬಂದಾಗ ಎದುರಿಗೆ ಬಂದದ್ದು ಅಕ್ಕಮಹಾದೇವಿಯ ಜೀವನ ಚರಿತ್ರೆ. ಅವರ ಕಥಾನಕ ಏಕವ್ಯಕ್ತಿಯಾಗಿ ಎಲ್ಲಿಯೂ ಕೂಡ ನಡೆದಿಲ್ಲ. ನನ್ನ ನಾಟಕ ಪ್ರದರ್ಶನದ ಸಂದರ್ಭದಲ್ಲಿ ನನಗೆ ಬಹಳ ನೋವಿನ ಸಂಗತಿಯೆಂದರೇ, ಇಂದಿನ ಕಲಾವಿದರು ಹಣದ ವ್ಯಾಮೋಹದ ಪರಿ.

ದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕ

ನೃತ್ಯ, ಕೊರಿಯೋಗ್ರಫಿ, ಹಿಮ್ಮೇಳ ಯಾರನ್ನು ಕೇಳಿದರೂ ಸಾವಿರಾರು ರೂ ಕೇಳುವ ಮನಸ್ಥಿತಿ ನನ್ನನ್ನು ಬೇಸರ ತರಿಸಿತು. ಕಲೆಯ ಪ್ರದರ್ಶನಕ್ಕೂ ಹಣದ ವ್ಯಾಮೋಹದ ಅಳತೆಗೋಲು ನನ್ನನ್ನು ಒಮ್ಮೆ ಚಂಚಲನೆಯನ್ನಾಗಿಸಿತು. ನಾವು ಲಕ್ಷಾಂತರ ಖರ್ಚುಮಾಡಿ ಪ್ರದರ್ಶನ ಮಾಡುತ್ತಿಲ್ಲ. ನಮ್ಮದು ಸಣ್ಣ ಬಜೆಟ್. ಹಾಗೆಯೇ ಸವಾಲು ಎದುರಿಸಿ ಇಂದಿನ ಪ್ರದರ್ಶನಕ್ಕೆ ತಯಾರಾಗಿದ್ದೇನೆ.

ಇತೀ ಮಲ್ಲಿಕಾರ್ಜುನ ಸತಿಯ ಅಕ್ಕಮಹಾದೇವಿಯ ಚಿತ್ರಣದಲ್ಲಿ ಆಕೆ ಇಂದಿನ ಹೆಣ್ಣು ಮಕ್ಕಳ ಸಮಸ್ಯೆಯನ್ನು ಅಂದೇ ಎದುರಿಸಿ ಪುರುಷನೊಂದಿಗೆ ಸರಿಸಮವಾಗಿ ನಿಲ್ಲಬಲ್ಲ ಚಾಕ ಚಾಕ್ಯತೆಯುಳ್ಳ ಸ್ತ್ರೀ ಎಂದು ತೋರಿಸಿಲು ತಯಾರಾಗಿದ್ದೇನೆ. ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ ಹೊರಟವಳ ನಾಟಕ ಮಾಡುವುದು ನನ್ನ ಹೆಮ್ಮೆ. ಆ ತರಹದ ಶಕ್ತಿಯನ್ನು ಇಂದಿನ ಹೆಣ್ಣು ಮಕ್ಕಳಿಗೆ ತೋರಿಸ ಹೊರಟಲು ಇಂದಿನ ಇತೀ ಮಲ್ಲಿಕಾರ್ಜುನ ಸತಿ ಮೂಲಕ ಪರದೆಯಾಗಿದೆ.

ಮಿಕ್ಕೆಲ್ಲಾ ನಾಟಕಕಾರರಿಗೆ ಒಂದು ನಾಟಕದ ತಂಡದ ಹಿನ್ನೆಲೆಯಿದೆ. ಆದರೆ ನನಗೆ ಯಾವ ತಂಡದ ಹಿನ್ನೆಲೆಯಿಲ್ಲ. 60 ನಿಮಿಷಗಳ ನನ್ನೀ ನಾಟಕಕ್ಕೆ ನಾನು ಸಜ್ಜಾಗಿದ್ದೇನೆ, ಪತಿ ಪ್ರಸಾದ್ ಹಾಗೂ ಕುಟುಂಬದ ಸಂಪೂರ್ಣ ಸಹಕಾರ ನನ್ನ ಮೇಲಿದೆ. ಎಲ್ಲರೂ ಇಂದು ಹಾಗೂ ನಾಳೆ ಸಂಜೆ 6 ಕ್ಕೆ ಕಲಾಮಂದಿರದ ಕಿರು ರಂಗಮಂದಿರದ ಆವರಣದಲ್ಲಿ ನಾಟಕ ನೋಡಬನ್ನಿ.

English summary
A writer, singer and a actor of mysuru shwetha madappadi is playin one act show of social reformer akkamahadevi today and tomorrow evening 6 p m at kalamandir in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X