ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀತೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಲೈಸೆಲ್ವಿ ವಿರುದ್ಧ ದೂರು

|
Google Oneindia Kannada News

ಮೈಸೂರು, ಜನವರಿ 13: ಚಿಂತಕಿ ಕಲೈಸೆಲ್ವಿ, ಸೀತೆ ಹಸು, ಜಿಂಕೆ ಮಾಂಸ ತಿನ್ನುತ್ತಿದ್ದಳು ಎಂಬ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದು, ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಶೀರಾಮ ಸೇನೆಯ ನಗರಾಧ್ಯಕ್ಷ ಎಂ.ಸಂಜಯ್ ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದಾಖಲೆ ಸಮೇತ ದೂರು ನೀಡಿದ್ದು, ಪೊಲೀಸರು ದೂರು ಸ್ವೀಕರಿಸಿದ್ದಾರೆ.

ಸೀತೆ ಜಿಂಕೆ, ದನ, ಹಂದಿ ಮಾಂಸ ತಿಂದಿದ್ದಾಳೆ : ವಿವಾದಾತ್ಮಾಕ ಹೇಳಿಕೆಸೀತೆ ಜಿಂಕೆ, ದನ, ಹಂದಿ ಮಾಂಸ ತಿಂದಿದ್ದಾಳೆ : ವಿವಾದಾತ್ಮಾಕ ಹೇಳಿಕೆ

ಅಷ್ಟಕ್ಕೂ ಚಿಂತಕಿ ಕಲೈಸೆಲ್ವಿ ಹೇಳಿದ್ದೇನು?
ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿರುವ ಕುರಿತು ಸೀತೆ ಅರಣ್ಯ ಕಾಂಡದಲ್ಲಿ ಉಲ್ಲೇಖವಿದೆ. ಆಕೆ ತಾನೇ ಖುದ್ದು ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿಂದ ಬಗ್ಗೆ ಆ ಪುರಾಣದಲ್ಲಿ ಉಲ್ಲೇಖವಿದೆ. ಅದೇ ನಾವು ಈಗಿನ ಕಾಲದಲ್ಲಿ ಜಿಂಕೆ ಮಾಂಸ ತಿಂದಿದ್ದರೆ ಅರಣ್ಯ ಕಾಯ್ದೆ ಅಡಿ ಬಂಧನವಾಗುತ್ತಿತ್ತು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Shri Rama Sene leader registered case against Kalaiselvi

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಎಂಬುದು ಶುದ್ಧ ಸುಳ್ಳು. ಆದರೆ, ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಿರಲಿಲ್ಲ. ಧರ್ಮವನ್ನು‌ ಪ್ರತಿಪಾದಿಸಲು ಮಹಿಳೆಯರ ಮೇಲೆ ಈ ರೀತಿ ಹೇರಿಕೆ ಮಾಡಲು ಇವರು ಯಾರು?.

ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ ಶ್ರೇಷ್ಟ, ಬ್ರಾಹ್ಮಣರು ಶ್ರೇಷ್ಟ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು ಎಂದು ತಿಳಿಸಿದ್ದರು.

English summary
Thinker Kalaiselvi has made a controversial statement on goddesses seethe devi. On this reason shri rama sene leader registered case against Kalaiselvi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X