• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಕೇವಲ ಊಹಾಪೋಹ: ಶೋಭಾ ಕರಂದ್ಲಾಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 19: 'ರಾಜ್ಯ ರಾಜಕಾರಣಕ್ಕೆ ಶೋಭಾ ಕರದ್ಲಾಂಜೆ ಮರಳುತ್ತಾರೆ' ಎಂಬ ವಿಚಾರ ಕೇವಲ ಊಹಾಪೋಹ. ಇಂತಹ ಸುದ್ದಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ''ಈ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿ ದೊಡ್ಡ ಅವಕಾಶವನ್ನು ನಮ್ಮ ಪಕ್ಷ ನೀಡಿದೆ. ನಾನು ನೋಡದ ರಾಜ್ಯವನ್ನು ಸಚಿವೆಯಾಗಿ ನೋಡಿದ್ದೇನೆ. ರಾಜ್ಯದಲ್ಲಿ ಹರಡುತ್ತಿರುವ ಸುದ್ದಿಗಳಿಗೂ ನನಗೂ ಸಂಬಂಧವಿಲ್ಲ'' ಎಂದರು.

ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ

''ಸಿದ್ದರಾಮಯ್ಯವರ ಗೋ ಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು? ಸಿದ್ದರಾಮಯ್ಯ ಎದೆ ಮುಟ್ಟಿಕೊಂಡು ಹೇಳಲಿ. 5 ವರ್ಷ ಆಡಳಿತದಲ್ಲಿ ಒಂದು ಅಭಿವೃದ್ಧಿ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ಲಿಂಗಾಯತರನ್ನ ಒಡೆಯುವುದು, ಹಿಂದುಳಿದ ಜಾತಿಯನ್ನ ಒಡೆಯುವುದು ಇದೇ ಅವರು ಮಾಡಿದ ಅಭಿವೃದ್ಧಿ ಕಾರ್ಯ. ಅಂದು ಕೆಲಸ ಮಾಡದವರು ಮುಂದೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರ ಎಲ್ಲಾ ಹೇಳಿಕೆಗಳು ಗಿಮಿಕ್'' ಎಂದು ವ್ಯಂಗ್ಯವಾಡಿದರು.

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಸಿಗುವುದು ಎಂಬುದು ಮನೆ ಮುಂದೆ ನಾಳೆ ಬಾ ಎಂಬ ಬೋರ್ಡ್ ಇದ್ದಂತೆ. ಮತ್ತೆ ಬೇಕು ಮತ್ತೆ ಬೇಕು ಎಂಬಂತೆ. ಕಾಂಗ್ರೆಸ್‌ನೊಳಗಿನ ಪೈಪೋಟಿಗೆ ಎಲ್ಲಾ ಗಿಮಿಕ್‌ಗಳ ಹೇಳಿಕೆಗಳನ್ನ ಸಿದ್ದರಾಮಯ್ಯ ನೀಡುತ್ತಿದ್ದಾರೆ ಎಂದರು.

Shobha Karandlaje on returning to State Politics speculation

ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರದ ಬಗ್ಗೆ ಮಾತನಾಡಿದ ಅವರು, ಹಂತಹಂತವಾಗಿ ರಸಗೊಬ್ಬರ ಸಮಸ್ಯೆಯನ್ನ ನೀಗಿಸುತ್ತೇವೆ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಕೆಲವೆಡೆ ರಸಗೊಬ್ಬರ ಪೂರೈಕೆಯಲ್ಲಿ ಸಮಸ್ಯೆ ಬಗ್ಗೆ ವರದಿಯಾಗಿದೆ. ಮುಂದಿನದಿನದಲ್ಲಿ ಭಾರತದಲ್ಲೇ ರಸಗೊಬ್ಬರ ಉತ್ಪಾದನೆಗೆ ಕ್ರಮ ಕೈಗೊಳ್ಳುತ್ತೇವೆ. ಮುಂಗಾರು ಆರಂಭವಾದ ಹಿನ್ನೆಲೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ಕೊಟ್ಟಿದೆ. ಯಾವುದೇ ರಸಗೊಬ್ಬರ, ಭಿತ್ತನೆಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

English summary
Minister of Sate Shobha Karandlaje reacted to speculation on returning to State Politics after a gap of nine years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X