ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟ ನಿಲ್ಲಿಸಿದ ಮೈಸೂರಿನ ಹಳೆಯ ಶಾಂತಲಾ ಚಿತ್ರಮಂದಿರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 22: ಮೈಸೂರು ನಗರದ ಉತ್ತಮ ಮನರಂಜನಾ ಕೇಂದ್ರವಾಗಿ ಎಲ್ಲರ ಮನೆ ಮಾತಾಗಿದ್ದ ಶಾಂತಲಾ ಚಿತ್ರಮಂದಿರ ಈಗ ತನ್ನ ಆಟ ನಿಲ್ಲಿಸಿದೆ. ಶಾಂತಲಾ ಚಿತ್ರಮಂದಿರವನ್ನು ಬಂದ್ ಮಾಡುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ.

ಶಾಂತಲಾ ಚಿತ್ರಮಂದಿರ ಶುರುವಾಗಿದ್ದು 1974 ರಲ್ಲಿ, ಸುಮಾರು 46 ವರ್ಷಗಳ ಹಿಂದೆ. ನಗರದ ಹೃದಯ ಭಾಗ ಚಾಮರಾಜ ಜೋಡಿ ರಸ್ತೆಯಲ್ಲಿದ್ದ ಖಾಲಿ ಜಾಗವನ್ನು ಭೋಗ್ಯಕ್ಕೆ ಪಡೆದು ಚಿತ್ರಮಂದಿರವನ್ನು ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಭೋಗ್ಯದ ಜಾಗದಲ್ಲೇ ಚಿತ್ರಮಂದಿರ ನಡೆಯುತ್ತಿತ್ತು. ಈಗ ಭೋಗ್ಯದ ಅವಧಿ ಮುಗಿದಿದ್ದು, ಮುಂದೆ ಆ ಜಾಗವನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಜಾಗದ ಮಾಲೀಕರು ಹೇಳಿದ ಕಾರಣ ಶಾಂತಲಾ ಚಿತ್ರಮಂದಿರದ ಮಾಲೀಕರು ಚಿತ್ರ ಪ್ರದರ್ಶನ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮೈಸೂರಿನ ಪ್ರತಿಷ್ಠಿತ ಔಷಧ ಮಳಿಗೆಯಲ್ಲಿ ಬೆಂಕಿಮೈಸೂರಿನ ಪ್ರತಿಷ್ಠಿತ ಔಷಧ ಮಳಿಗೆಯಲ್ಲಿ ಬೆಂಕಿ

"ಈಗ ಚಿತ್ರ ಪ್ರದರ್ಶನ ನಡೆಯುತ್ತಿಲ್ಲ, ಆದಾಯ ಬರುತ್ತಿಲ್ಲ. ವಿದ್ಯುತ್ ಶುಲ್ಕ, ನಿರ್ವಹಣೆ ಶುಲ್ಕ ಮತ್ತಿತರ ಶುಲ್ಕಗಳನ್ನು ಪಾವತಿಸಲು ಹಣ ಸಾಲುತ್ತಿಲ್ಲ. ಸಿಬ್ಬಂದಿಗೆ ಸಂಬಳ, ಚಿತ್ರಮಂದಿರದ ನಿರ್ವಹಣೆ, ಬಾಡಿಗೆ, ಕಂದಾಯ ಕಟ್ಟಲು ಹಣದ ಕೊರತೆ ಎದುರಾಗಿದೆ. ಈ ತಿಂಗಳು ಸಂಬಳ ಕೊಟ್ಟು ಬಂದ್ ಮಾಡುತ್ತೇವೆ. ಇನ್ನು ಮುಂದೆಯಂತೂ ಮತ್ತೆ ಚಿತ್ರಮಂದಿರ ಆರಂಭಿಸುವ ಯೋಚನೆ ಇಲ್ಲ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಆರಂಭಿಸಿದರೂ ಲಾಭವಿಲ್ಲ' ಎನ್ನುತ್ತಾರೆ ಶಾಂತಲಾ ಚಿತ್ರಮಂದಿರದ ಮಾಲೀಕ ಎನ್.ಪಿ ಪದಕಿ.

Shantala Theatre At Mysuru Downs Its Shutters

ದಶಕಗಳಿಂದ ಮೈಸೂರಿನಲ್ಲಿದ್ದು, ಮಲ್ಟಿಪ್ಲೆಕ್ಸ್ ಗಳು ಬರುವ ಮುನ್ನ ಚಿತ್ರಮಂದಿಗಳಲ್ಲಿ ಚಲನಚಿತ್ರಗಳನ್ನು ಆಸ್ವಾದಿಸುತ್ತಿದ್ದ ಸಿನಿಪ್ರಿಯರು, ಚಿತ್ರಮಂದಿರ ಮುಚ್ಚುತ್ತಿರುವ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ಹಿರಿಯರು ತಾವು ಸಾಲಿನಲ್ಲಿ ನಿಂತು ನೂಕುನುಗ್ಗಲಿನಲ್ಲಿ ಟಿಕೆಟ್ ಪಡೆದು ಚಿತ್ರ ನೋಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ದಶಕಗಳ ಕಾಲ ಜನರನ್ನು ಮನರಂಜಿಸಿ ಜನರ ಮನೆಮಾತಾಗಿದ್ದ ಚಿತ್ರಮಂದಿರ ಈಗ ಇತಿಹಾಸದ ಪುಟ ಸೇರುತ್ತಿರುವುದು ವಿಷಾದನೀಯ.

ಪಾದರಾಯನಪುರಕ್ಕೆ ತೆರಳಿದ್ದ ಮೈಸೂರು ಪೊಲೀಸರಿಗೆ ಕೊರೊನಾಪಾದರಾಯನಪುರಕ್ಕೆ ತೆರಳಿದ್ದ ಮೈಸೂರು ಪೊಲೀಸರಿಗೆ ಕೊರೊನಾ

ಚಿತ್ರಮಂದಿರಗಳ ಮಾಲೀಕರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ಲಾಕ್‌ಡೌನ್‌ನಿಂದಾಗಿ ಹೊರೆ ಮತ್ತಷ್ಟು ಹೆಚ್ಚಾಗಿದೆ. ಶಾಂತಲಾ ಚಿತ್ರಮಂದಿರವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ. ಮೈಸೂರು ನಗರಪಾಲಿಕೆಗೆ ಸಾಕಷ್ಟು ಬಾರಿ ನಾವು ಮನವಿ ಮಾಡಿದ್ದೇವೆ. ನಮ್ಮ ಆರ್ಥಿಕ ಸಂಕಷ್ಟ ಬಗೆಹರಿಯುವ ಕಾಲ ಇನ್ನೂ ಒದಗಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಉಪಾದ್ಯಕ್ಷ ಎಂ.ಆರ್‌ ರಾಜಾರಾಂ ಹೇಳಿದ್ದಾರೆ.

English summary
The owner has come to the decision to Close Shantala Theater At Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X