• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಜಾಗ್ರತೆ ಇಲ್ಲದೆ ಪೌರಕಾರ್ಮಿಕನಿಂದ ಚರಂಡಿ ಸ್ವಚ್ಛತೆ: ಅಧಿಕಾರಿಗಳಿಗೆ ಛೀಮಾರಿ

|

ಮೈಸೂರು, ಜುಲೈ 11: ಮ್ಯಾನ್ ಹೋಲ್, ಸಂಪ್, ಡ್ರೈನೇಜ್ ಶುಚಿಗೊಳಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಪೌರಕಾರ್ಮಿಕರು ನೂರಾರು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇವರು ಸಾವನ್ನಪ್ಪುತ್ತಿರುವ ಪ್ರಕರಣಗಳೂ ಅಲ್ಲಲ್ಲಿ ನಡೆಯುತ್ತಲೇ ಇವೆ. ಹೀಗಿದ್ದಾಗ, ಮೈಸೂರಿನ ಈ ಅಧಿಕಾರಿಗಳು ಈ ಪೌರಕಾರ್ಮಿಕನಿಗೆ ಯಾವುದೇ ವ್ಯವಸ್ಥೆ ಹಾಗೂ ಸಲಕರಣೆ ನೀಡದೇ ಚರಂಡಿ ಶುಚಿ ಮಾಡಿಸಿದ್ದಾರೆ. ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧವೂ ವ್ಯಕ್ತಗೊಂಡಿದೆ.

ಮೈಸೂರಿನ ತಾಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೀಗೆ ಪೌರಕಾರ್ಮಿಕನೊಬ್ಬನನ್ನು ಯಾವುದೇ ಮುಂಜಾಗ್ರತೆ ಕ್ರಮವಿಲ್ಲದೆ ಚರಂಡಿಗೆ ಇಳಿಸಿರುವುದು.

ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರ

ಅಧಿಕಾರಿಗಳ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಗೊಂಡಿದೆ. ಇಂಥ ಹೈಟೆಕ್ ಯುಗದಲ್ಲೂ ಏನಿದು ಸ್ವಾಮಿ ಅವ್ಯವಸ್ಥೆ? ಪೌರಕಾರ್ಮಿಕನಿಗೆ ಸುರಕ್ಷತೆ ಒದಗಿಸದೆ ಚರಂಡಿ ಶುಚಿತ್ವ ಮಾಡಿಸುತ್ತೀರಾ? ಪೌರಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಬೇಕಾದಷ್ಟು, ಅವರಿಗೆ ಒದಗಿಸುವಷ್ಟು ಹಣಕಾಸಿನ ಕೊರತೆ ಅಷ್ಟೊಂದು ಕಾಡುತ್ತಿದೆಯೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಪೌರಕಾರ್ಮಿಕನ ಜೀವಕ್ಕೆ ಬೆಲೆಯೇ ಇಲ್ಲವೇ.? ಪೌರಕಾರ್ಮಿಕ ನಮ್ಮ ನಿಮ್ಮಂತೆ ಮನುಷ್ಯನಲ್ಲವೆ.? ಎಂದು ಹಲವು ಪ್ರಶ್ನೆಗಳನ್ನು ಮಾಡುವ ಮೂಲಕ ಆಕ್ರೋಶಗೊಂಡಿದ್ದಾರೆ. ಎಲ್ಲ ತಿಳಿದ ಅಧಿಕಾರಿಗಳೇ ಹೀಗೆ ವರ್ತಿಸುತ್ತಿರುವುದು ಎಷ್ಟು ಸರಿ? ಸಮಾಜಕ್ಕೆ ನೀವು ಏನು ಸಂದೇಶ ನೀಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.

ಗುತ್ತಿಗೆ ಪೌರಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್‌ಕಾರ್ಡ್: ಜಿ ಪರಮೇಶ್ವರ

ಅಷ್ಟೇ ಅಲ್ಲ, ಈ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮುಂದುವರೆದ ಪೌರಕಾರ್ಮಿಕರ ಪ್ರತಿಭಟನೆ: ಗಬ್ಬೆದ್ದು ನಾರುತ್ತಿದೆ ಸ್ವಚ್ಛ ನಗರಿ

ಕಳೆದ ವರ್ಷ ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಹೀಗೆ ಡ್ರೈನೇಜ್ ಶುಚಿಗೊಳಿಸುವ ಸಂದರ್ಭ ಇಬ್ಬರು ಸಾವಿಗೀಡಾಗಿದ್ದರು. ಶಿವಮೊಗ್ಗದಲ್ಲೂ ಎರಡು ವರ್ಷದ ಹಿಂದೆ ಶುಚಿಗೊಳಿಸುವ ವೇಳೆ ಮೂವರು ಪೌರಕಾರ್ಮಿಕರು ಸಾವಿಗೀಡಾಗಿದ್ದರು. ಇಷ್ಟೆಲ್ಲಾ ಉದಾಹರಣೆಗಳು ಕಣ್ಣಮುಂದೆಯೇ ಇದ್ದರೂ ಇನ್ನೂ ಕಣ್ತೆರೆದು ನೋಡುವವರೇ ಇಲ್ಲ ಎಂದು ಬೇಸರವೂ ಆಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tayur grama panchayat officials made pourakarmika clean the drainage without any precautions. People opposing this and posting on social media with many questions and demand to take action against these officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more