• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಲಿ ಚರ್ಮ ಮಾರಾಟ ಮಾಡಿದವನಿಗೆ ಶಿಕ್ಷೆ ನೀಡಿದ ಕೋರ್ಟ್

By ಮೈಸೂರು ಪ್ರತಿನಿಧಿ
|

ಚಾಮರಾಜನಗರ, ಮಾರ್ಚ್ 01: ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿಗೆ 3 ವರ್ಷ ಜೈಲು, 10 ಸಾವಿರ ರುಪಾಯಿ ದಂಡ ವಿಧಿಸಿ ಗುಂಡ್ಲುಪೇಟೆ ಜೆಎಂಎಫ್​ಸಿ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ತಾರಕ ಗ್ರಾಮದ ನಿವಾಸಿ ಸೈಯದ್ ಶಿಕ್ಷೆಗೆ ಒಳಗಾದ ಆರೋಪಿ. ಮತ್ತೋರ್ವ ಆರೋಪಿ ಅಂತರಸಂತೆ ಗ್ರಾಮದ ಅನ್ಸರ್ ಖುಲಾಸೆಗೊಂಡಿದ್ದಾನೆ. ಇನ್ನೊಬ್ಬ ಆರೋಪಿ ಹುಣಸಿನಕುಪ್ಪೆ ಹಾಡಿಯ ವೆಂಕಟ ಈಗಾಗಲೇ ಸಾವನ್ನಪ್ಪಿದ್ದಾನೆ.

ಚಾಮರಾಜನಗರದಲ್ಲಿ ಅಕ್ರಮ ವಿದ್ಯುತ್‌ ಬೇಲಿಗೆ ಎರಡು ಕಾಡಾನೆಗಳು ಬಲಿ

2008 ರಲ್ಲಿ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಅಂತರಸಂತೆ ವಲಯ ದಲ್ಲಿ ಹುಣಸಿನಕುಪ್ಪೆಯ ವೆಂಕಟ ಹುಲಿಯೊಂದನ್ನು ಹತ್ಯೆ ಮಾಡಿದ್ದ. ಈ ಹುಲಿಯ ಚರ್ಮವನ್ನು ವೆಂಕಟ, ಸೈಯದ್ ಹಾಗು ಅನ್ಸರ್ ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಮದ್ದೂರು ವಲಯದ ಬರಗಿ-ಹೊಂಗಳ್ಳಿ ಬಳಿ ತಂದು ಮಾರಾಟಕ್ಕೆ ಯತ್ನಿಸಿದ್ದರು.

ಈ ಮಾಹಿತಿ ಅರಿತ ಬಂಡೀಪುರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಸೈಯದ್ ಮಾತ್ರ ಸಿಕ್ಕಿಬಿದ್ದಿದ್ದ. ಅನ್ಸರ್ ಹಾಗು ವೆಂಕಟ ಪರಾರಿಯಾಗಿದ್ದರು. ಈ ಸಂಬಂಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ನಡುವೆಯೇ ಹುಲಿ ಕೊಂದ ಆರೋಪಿ ವೆಂಕಟ ಎಂಬಾತ ಸಾವನ್ನಪಿದ್ದ.

ಏನಿದು ಫೈರ್ ಅಲರ್ಟ್? ಬಂಡೀಪುರದಲ್ಲಿ ಇದರ ಅಳವಡಿಕೆ ಏಕೆ?

ಸೈಯದ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಜೆಎಂಎಫ್​ಸಿ ನ್ಯಾಯಾಧೀಶ ಚಂದ್ರಶೇಖರ್ ಪಿ. ದಿಡ್ಡಿ ಅವರು ತೀರ್ಪು ನೀಡಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಅನ್ಸರ್​ನನ್ನು ಖುಲಾಸೆಗೊಳಿಸಿದ್ದಾರೆ.

English summary
Gundlupete JMFC court has sentenced accused to 3 years in jail and 10 thousand rupees fine for trying to sell a tiger skin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X