ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಹೆದ್ದಾರಿಯಲ್ಲಿ ರಾರಾಜಿಸುತ್ತಿವೆ ಅರೆನಗ್ನ ಜಾಹೀರಾತುಗಳು

|
Google Oneindia Kannada News

ಮೈಸೂರು, ಅಕ್ಟೋಬರ್.24: ಕ್ಲೀನ್ ಸಿಟಿ, ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ...ಹೀಗೆ ಒಂದಲ್ಲ, ಎರಡಲ್ಲ ಮೈಸೂರಿಗೆ ನೂರಾರು ವರ್ಣಾತ್ಮಕ ಹೆಸರುಗಳು. ಆದರೆ ಮೈಸೂರಿಗೆ ಆಗಮಿಸುವ ರಸ್ತೆಗಳಲ್ಲಿ ನಿಮ್ಮನ್ನು ಸ್ವಾಗತಿಸಲು ತುದಿಗಾಲಿನಲ್ಲಿ ಕಾಯುತ್ತಿರುವುದು ಅರೆನಗ್ನ ಚಿತ್ರದ ಜಾಹೀರಾತುಗಳು.

ವಾಹನಗಳಲ್ಲಿ ಅಕ್ರಮವಾಗಿ ಜಾಹೀರಾತು ಹಾಕಬೇಡಿ, ದಂಡ ಬೀಳುತ್ತೆವಾಹನಗಳಲ್ಲಿ ಅಕ್ರಮವಾಗಿ ಜಾಹೀರಾತು ಹಾಕಬೇಡಿ, ದಂಡ ಬೀಳುತ್ತೆ

ಹೌದು, ಮೈಸೂರು-ಹುಣಸೂರು ರಸ್ತೆ, ಕಲಾ ಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್ ಇತ್ತೀಚೆಗಷ್ಟೇ ಅಭಿವೃದ್ಧಿಗೊಂಡಿದ್ದು, ಇದೀಗ ಈ ಮಾರ್ಗದಲ್ಲಿ ಅಶ್ಲೀಲ ಜಾಹೀರಾತುಗಳು ರಾರಾಜಿಸುತ್ತಿವೆ. ಇದರಿಂದ ಮೈಸೂರಿನ ಸುಸಂಸ್ಕೃತ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಅಬ್ಬಾ..! ಬಿಬಿಎಂಪಿ ಕೊನೆಗೂ ಸಿದ್ಧಪಡಿಸಿತು ಜಾಹೀರಾತು ನೀತಿ ಅಬ್ಬಾ..! ಬಿಬಿಎಂಪಿ ಕೊನೆಗೂ ಸಿದ್ಧಪಡಿಸಿತು ಜಾಹೀರಾತು ನೀತಿ

ಮೈಸೂರು-ಹುಣಸೂರು ರಸ್ತೆಯನ್ನು ಕಲಾಮಂದಿರದಿಂದ ಪಡುವಾರಹಳ್ಳಿ ಜಂಕ್ಷನ್ ವರೆಗೆ ಅಗಲೀಕರಣಗೊಳಿಸಿ, ರಸ್ತೆಯ ಎರಡೂ ಬದಿಯಲ್ಲೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಜಲದರ್ಶಿನಿ ಅತಿಥಿ ಗೃಹ ಸಮೀಪದ ರಂಗಾಯಣ ಸಿಬ್ಬಂದಿ ವಸತಿಗೃಹಗಳ ಬಳಿ ಪುರುಷ, ಸ್ತ್ರೀ ಅರೆನಗ್ನ ಜಾಹೀರಾತು ಫಲಕವುಳ್ಳ ಹೋರ್ಡಿಂಗ್ ಅಳವಡಿಸಲಾಗಿದೆ.

Semi-nude ads are pasted on the highway of Mysore

ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ಪುರುಷ, ಮಹಿಳೆಯರ ಒಳ ಉಡುಪುಗಳು ಆಕ್ಷೇಪಾರ್ಹ. ಇನ್ನು ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅಸಂಖ್ಯಾತ ಜನರು ಓಡಾಡುತ್ತಿರುತ್ತಾರೆ.

 ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌ ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌

ಈ ಹೆದ್ದಾರಿಯಲ್ಲಿ ಮಹಿಳೆಯರು, ಪುರುಷರ ಒಳ ಉಡುಪುಗಳ ಜಾಹೀರಾತು ಫಲಕವೊಂದನ್ನು ಸಹ ಅಳವಡಿಸಲಾಗಿದೆ. ಇಂತಹ ಅಶ್ಲೀಲ ಜಾಹೀರಾತು ಪ್ರದರ್ಶನದಿಂದ ವಾಹನ ಸವಾರರ ಗಮನ ಬೇರೆಡೆ ಸೆಳೆದು ಅಪಘಾತಗಳು ಸಂಭವಿಸಬಹುದು.

ಆದ್ದರಿಂದ ಈ ರಸ್ತೆಯಲ್ಲಿ ಅಳವಡಿಸಲಾಗಿರುವ ಅರೆನಗ್ನ ಜಾಹೀರಾತು ಫಲಕವನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಿ ಸಾಂಸ್ಕೃತಿಕ ನಗರಿ ಅಂದವನ್ನು ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಮುಜುಗರಪಡಿಸುವ ಈ ಜಾಹೀರಾತು ಫಲಕವನ್ನು ತೆರವುಗೊಳಿಸುವಂತೆ ಕಾಲೇಜಿನ ವಿದ್ಯಾರ್ಥಿನಿಯರು ಸಹ ಮನವಿ ಮಾಡಿದ್ದಾರೆ.

English summary
Semi-nude ads are pasted on the highway of Mysore. So College students requested to clear this ad panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X