• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ'ಗೆ ಭರ್ಜರಿ ರೆಸ್ಪಾನ್ಸ್

|

ಮೈಸೂರು, ಏಪ್ರಿಲ್ 10: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮತ ಚಲಾವಣೆ ಮಾಡುತ್ತಿರುವ ಯುವ ಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಡಿನ ಶಕ್ತಿ ಯುವಕರು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಯುವಕರು ಮತದಾನದಿಂದ ದೂರ ಸರಿದಿದ್ದರು ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊದಲ ಸಲ ಮತ ಚಲಾಯಿಸುತ್ತಿರುವವರನ್ನು ಮತಗಟ್ಟೆಯತ್ತ ಸೆಳೆಯಲು ಪಾಲಿಕೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.

ಮೈಸೂರು ಕ್ಷೇತ್ರದ ಚುನಾವಣಾ ಪುಟ

ಅದರಲ್ಲಿ 'ಸೆಲ್ಫಿ ವಿತ್ ಯುವರ್ ವೋಟರ್ ಐಡಿ' ಕಾರ್ಯಕ್ರಮ ಇದೇ ಮೊದಲ ಸಲ ಆಯೋಜಿಸಿದ್ದು, ಯುವ ಸಮೂಹದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೈಸೂರಿನಲ್ಲಿ ಈ ಬಾರಿ ಮತ ಚಲಾಯಿಸಲಿದ್ದಾರೆ 25.09 ಲಕ್ಷ ಮತದಾರರು

ಯುವಕರು ಸಾಮಾಜಿಕ ಜಾಲ ತಾಣವಾದ ಟ್ವಿಟ್ಟರ್ , ಫೇಸ್ ಬುಕ್ , ವಾಟ್ಸಪ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.ಇದನ್ನು ಮನಗಂಡಿರುವ ಪಾಲಿಕೆ ಯುವಕರು 'ಸೆಲ್ಫಿ ವಿಥ್ ವೋಟರ್ ಐಡಿ'

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದೆ. ಮುಂದೆ ಓದಿ...

 ಪಾಲಿಕೆಯಿಂದ ಆಕರ್ಷಕ ಬಹುಮಾನ

ಪಾಲಿಕೆಯಿಂದ ಆಕರ್ಷಕ ಬಹುಮಾನ

ಮೊದಲ ಸಲ ವೋಟ್ ಮಾಡುತ್ತಿರುವವರು ತಮ್ಮ ಐಡಿ ಕಾರ್ಡ್ ಜೊತೆ ಸೆಲ್ಫಿ ಫೋಟೋ ತೆಗೆದು ಅದನ್ನು ಮೈಸೂರು ನಗರ ಪಾಲಿಕೆಯ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ಟ್ಯಾಗ್ ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ಅಡಿ ಟಿಪ್ಪಣಿ ಬರೆಯಬೇಕು. ಹೀಗೆ ಕಳುಹಿಸಿದ ಫೋಟೊಗಳಲ್ಲಿ ಆಯ್ಕೆಯಾದ ಐವರಿಗೆ ಪಾಲಿಕೆಯಿಂದ ಆಕರ್ಷಕ ಬಹುಮಾನ ಕೂಡ ಸಿಗಲಿದೆ.

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 5.10 ಕೋಟಿ ಮತದಾರರು

 ಏಪ್ರಿಲ್ 12ರವರೆಗೆ ಅವಕಾಶ

ಏಪ್ರಿಲ್ 12ರವರೆಗೆ ಅವಕಾಶ

ಈಗಾಗಲೇ ಪಾಲಿಕೆ ಖಾತೆಗೆ ಸಾಕಷ್ಟು ಸೆಲ್ಫಿ ಫೋಟೊ ಟ್ಯಾಗ್ ಆಗುತ್ತಿದ್ದು, ಯುವಜನರ ಮೂಲಕವೇ ಮತ ಜಾಗೃತಿ ಪಾಲಿಕೆ ಮುಂದಾಗಿರುವುದು ಶ್ಲಾಘನೀಯ. ಏಪ್ರಿಲ್ 12ರವರೆಗೆ ಯುವ ಸಮೂಹ ತಮ್ಮ ಸೆಲ್ಫಿ ಫೋಟೋ ಒಂದು ಪೋಸ್ಟ್ ಮಾಡಲು ಪಾಲಿಕೆ ಅವಕಾಶ ಕಲ್ಪಿಸಿದೆ.

 ಐಡಿ ಕಾರ್ಡ್ ಹಿಡಿದು ಸೆಲ್ಫಿ ಫೋಟೋ

ಐಡಿ ಕಾರ್ಡ್ ಹಿಡಿದು ಸೆಲ್ಫಿ ಫೋಟೋ

ಒಬ್ಬರು ತಮ್ಮ ವೋಟರ್ ಐಡಿ ಕಾರ್ಡಿನೊಂದಿಗೆ ಸೆಲ್ಫಿ ತೆಗೆದು ಕಳುಹಿಸಬಹುದು ಅಥವಾ ಗ್ರೂಪ್ ನಲ್ಲಿ ಎಲ್ಲರೂ ಒಟ್ಟಿಗೆ ಐಡಿ ಕಾರ್ಡ್ ಹಿಡಿದು ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಬಹುದು. 1 ಸಾವಿರಕ್ಕೂ ಹೆಚ್ಚು ಸೆಲ್ಫಿ ಫೋಟೋ ಬರಬಹುದೆಂದು ಪಾಲಿಕೆ ನಿರೀಕ್ಷಿಸಿದೆ.

 ಮತದಾನದಿಂದ ಹಿಂದುಳಿಯಬೇಡಿ

ಮತದಾನದಿಂದ ಹಿಂದುಳಿಯಬೇಡಿ

ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಮತ ಜಾಗೃತಿ ಆರಂಭಿಸಿದೆ. ಶಾಲಾ ಕಾಲೇಜುಗಳಲ್ಲಿ ಜಾಥಾ ಮಾಡುವ ಮೂಲಕ ಯಾರು ಮತದಾನದಿಂದ ಹಿಂದುಳಿಯಬಾರದು ಎಂದು ಅರಿವು ಮೂಡಿಸುತ್ತಿದೆ.

English summary
Lok Sabha Elections 2019:Mysuru City Corporation has come up with a new initiative called Selfie With Your Vote ID for the first time to vote for the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X