ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಸ್ವಚ್ಛತಾ ರಾಯಭಾರಿಗಳಾಗಿ ಜ್ಞಾನಾನಂದ ಸ್ವಾಮೀಜಿ, ಯೋಗಪಟು ಖುಷಿ

By Yashaswini
|
Google Oneindia Kannada News

ಮೈಸೂರು, ನವೆಂಬರ್ 11 : ಮೈಸೂರು ಮಹಾನಗರ ಪಾಲಿಕೆಯು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಆತ್ಮ ಜ್ಞಾನಾನಂದ ಸ್ವಾಮೀಜಿ ಮತ್ತು ವಿಶ್ವ ಗಿನ್ನಿಸ್ ದಾಖಲೆ ಯೋಗಪಟು ಖುಷಿ ಹೆಚ್ ಅವರನ್ನು ಸ್ವಚ್ಛತಾ ರಾಯಭಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ರಾಮಚಂದ್ರ ತಿಳಿಸಿದ್ದಾರೆ.

ಇದರನ್ವಯ ಈಗಾಗಲೇ ನಿಯೋಜಿಸಿರುವ ಸ್ವಚ್ಛತಾ ರಾಯಭಾರಿಗಳಾದ ರಾಜಮಾತೆ ಪ್ರಮೋದಾದೇವಿ ಹಾಗೂ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಭಾರತದ ಅಂತಾರಾಷ್ಟ್ರೀಯ ವೇಗದ ಬೌಲರ್ ಹಾಗೂ ಹಾಲಿ ಅಂತಾರಾಷ್ಟ್ರೀಯ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ರವರ ಜೊತೆಗೆ ಹೊಸದಾಗಿ ನೇಮಕಗೊಂಡಿರುವ ಸ್ವಚ್ಛತಾ ರಾಯಭಾರಿಗಳ ಮುಖಾಮುಖಿ ಪರಿಚಯ ನ.12ರಂದು ಬೆಳಿಗ್ಗೆ 10 ಮೈಸೂರಿನ ಅರಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Seer, yoga exponent ambassadors of Swachh Mysuru

ಮೈಸೂರು ನಗರವು ದೇಶದ ಪ್ರಥಮ ಸ್ವಚ್ಛನಗರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡು, 2016-17ನೇ ಸಾಲಿನಲ್ಲಿ ಐದನೇ ಸ್ವಚ್ಛನಗರವೆಂಬ ಗರಿಮೆಯನ್ನು ಪಡೆದುಕೊಂಡಿದೆ. ಮೈಸೂರು ನಗರವು ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳದೇ ಐದನೇ ಸ್ಥಾನವನ್ನು ಪಡೆಯಲು ಸಾರ್ವಜನಿಕರ ಸಹಕಾರ ದೊರೆಯದ ಕಾರಣ ಮೈಸೂರು ಐದನೇ ಸ್ಥಾನವನ್ನು ಪಡೆದುಕೊಂಡಿದೆ.

ಆದರೆ ಮೈಸೂರು ನಗರವು ದೇಶದ ಸ್ವಚ್ಛ ನಗರವೆಂಬ ಗರಿಮೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

English summary
Mysuru City Corporation (MCC) has named seer Athma Jnanananda of Ramakrishna Ashram, and Guinness record holder and yoga exponent Khushi as its ambassadors for Swachh Mysuru campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X