ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; 2ನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಗಳ ಮೀಸಲಾತಿ ನಿಗದಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 27: ಮೈಸೂರು ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಗಳ ಮೀಸಲಾತಿ ನಿಗದಿಯಾಗಿದ್ದು, ನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ-ಎ (ಮಹಿಳೆ), ಉಪಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿ ಪಡಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯಾಲಯ ಆದೇಶ ಹೊರಡಿಸಿದೆ.

ನ.17ಕ್ಕೆ ಮೊದಲ ಅವಧಿಯ ಅಧಿಕಾರಾವಧಿ ಅಂತ್ಯವಾಗಲಿದ್ದು, 39 ದಿನಗಳ ನಂತರ ಸರ್ಕಾರ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿದೆ. ನಗರ ಪಾಲಿಕೆಯ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮೊದಲ ಅವಧಿಯಲ್ಲಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿಯೂ, ಜೆಡಿಎಸ್ ನ ಶಫಿ ಅ ಹ್ಮದ್ ಉಪಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು.

''ಮೇಯರ್ ಹುದ್ದೆ ಎಂದರೆ ಬಿಬಿಎಂಪಿಯ ಎಟಿಎಂ ಮಷಿನ್''ಮೇಯರ್ ಹುದ್ದೆ ಎಂದರೆ ಬಿಬಿಎಂಪಿಯ ಎಟಿಎಂ ಮಷಿನ್"

ಈ ಬಾರಿ ಕೂಡ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನ ಒಪ್ಪಂದದಂತೆ 2ನೇ ಅವಧಿಯಲ್ಲಿ ಮೇಯರ್ ಸ್ಥಾನ ಜೆಡಿಎಸ್ ಗೆ ಉಪಮೇಯರ್ ಸ್ಥಾನ ಕಾಂಗ್ರೆಸ್ ಗೆ ದೊರೆಯಲಿದೆ. ಆಕಾಂಕ್ಷಿಗಳ ಪಟ್ಟಿ ಕೂಡ ದೊಡ್ಡದಾಗಿದ್ದು, ಮೇಯರ್ ಸ್ಥಾನದ ರೇಸ್ ನಲ್ಲಿ ಹಿಂದುಳಿದ ವರ್ಗ ಎ ಮೀಸಲಾತಿಯಡಿ 17ನೇ ವಾರ್ಡ್ ನ ರೇಷ್ಮಾಬಾನು, 22ನೇ ವಾರ್ಡ್ ನ ನಮ್ರತಾ ರಮೇಶ್, 26ನೇ ವಾರ್ಡ್ ನ ತಸ್ನಿಂ, 45ನೇ ವಾರ್ಡ್ ನ ನಿರ್ಮಲಾ ಹರೀಶ್ ಇದ್ದಾರೆ.

Second Term Mayor And Deputy Mayor Reservation Order In Mysuru

ಉಪಮೇಯರ್ ಸ್ಥಾನದ ರೇಸ್ ನಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸದಸ್ಯರಾದ 15ನೇ ವಾರ್ಡ್ ನ ಪ್ರದೀಪ್ ಚಂದ್ರ, 38ನೇ ವಾರ್ಡ್ ನ ಶ್ರೀಧರ್, 39ನೇ ವಾರ್ಡ್ ನ ಸತ್ಯರಾಜ್ ಇದ್ದಾರೆ. ಎರಡು ಪಕ್ಷದ ಮುಖಂಡರು ಚರ್ಚೆ ನಡೆಸಿ ತೀರ್ಮಾನಿಸಿ ಅಭ್ಯರ್ಥಿಗಳ ಆಯ್ಕೆ ಕಾರ್ಯ ನಡೆಸಲಿದ್ದಾರೆ.

English summary
Mysuru Municipality's second term mayor and deputy mayor posts have reserved. The Urban Development Department has ordered the reservation of the post of mayor for backward class A women) and deputy mayor for scheduled caste,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X