• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು; ಕೋವಿಡ್ ಲಸಿಕೆ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 01: ಭಾರತದಲ್ಲಿ 2ನೇ ಹಂತದ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಸೋಮವಾರ ಚಾಲನೆ ಸಿಕ್ಕಿದೆ. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಚಾಲನೆ ನೀಡಿದರು.

ಮಾಧ್ಯಮ ಜೊತೆ ಮಾತನಾಡಿದ ಅವರು, "ಇಡೀ ಪ್ರಪಂಚ ಕೋವಿಡ್‌ನಿಂದಾಗಿ ತತ್ತರಿಸಿ ಹೋಗಿದೆ. ಸಾಂಕ್ರಮಿಕ ರೋಗದ ಹರಡುವಿಕೆ ತಡೆಗೆ ಎಲ್ಲರ ಪ್ರಯತ್ನದ ಅಗತ್ಯವಿದೆ. ಯಾರೂ ಭಯ ಪಡದೇ ಲಸಿಕೆ ಪಡೆಯುವಂತೆ" ಕರೆ ನೀಡಿದರು.

ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಪ್ರಧಾನಿ ಮೋದಿ ಆರೋಗ್ಯ ಹೇಗಿದೆ?ಕೋವಿಡ್ ಲಸಿಕೆ ಪಡೆದುಕೊಂಡ ಬಳಿಕ ಪ್ರಧಾನಿ ಮೋದಿ ಆರೋಗ್ಯ ಹೇಗಿದೆ?

"ಇಂದು ನಾನು ಲಸಿಕೆ ತೆಗೆದುಕೊಳ್ಳುತ್ತಿಲ್ಲ. ಕೇವಲ ಉದ್ಘಾಟನೆ ಮಾಡುತ್ತಿದ್ದೇನೆ. ಮುಂದಿನ ದಿನದಲ್ಲಿ ನಾನು ಲಸಿಕೆ ತೆಗೆದುಕೊಳ್ಳುತ್ತೇನೆ. ಕೋವಿಡ್ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು" ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ದರ ಎಷ್ಟು? ತಪ್ಪು ಮಾಹಿತಿ ಬಗ್ಗೆ ಸರ್ಕಾರದ ಸ್ಪಷ್ಟನೆಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ದರ ಎಷ್ಟು? ತಪ್ಪು ಮಾಹಿತಿ ಬಗ್ಗೆ ಸರ್ಕಾರದ ಸ್ಪಷ್ಟನೆ

ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಒಂದು ಡೋಸ್‌ಗೆ 250 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಹಲವು ಜನರಿಗೆ ಲಸಿಕೆ ಪಡೆಯಲು ದುಡ್ಡಿನ ಕೊರತೆ ಎದುರಾಗುತ್ತದೆ. ಆದ್ದರಿಂದ, ಪ್ರಮೋದಾದೇವಿ ಒಡೆಯರ್ 2.5 ಲಕ್ಷ ಹಣವನ್ನು ದೇಣೀಗೆಯಾಗಿ ಕೊಟ್ಟಿದ್ದಾರೆ. ಇದರಿಂದ 1000 ಜನರು ಲಸಿಕೆ ಪಡೆಯಬಹುದಾಗಿದೆ.

ಕೊರೊನಾ ಲಸಿಕೆ ಪಡೆದ ಬಳಿಕ ನರ್ಸ್ ನಿವೇದಾಗೆ ಪ್ರಧಾನಿ ಮೋದಿ ಹೇಳಿದ್ದೇನು? ಕೊರೊನಾ ಲಸಿಕೆ ಪಡೆದ ಬಳಿಕ ನರ್ಸ್ ನಿವೇದಾಗೆ ಪ್ರಧಾನಿ ಮೋದಿ ಹೇಳಿದ್ದೇನು?

ಮೈಸೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಜನರು ಲಸಿಕೆ ಪಡೆಯಲು 250 ರೂ.ಗಳನ್ನು ಪಾವತಿ ಮಾಡಬೇಕಿದೆ.

ಭಾನುವಾರದ ವರದಿಯಂತೆ ಮೈಸೂರು ಜಿಲ್ಲೆಯಲ್ಲಿ 11 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 54,097. ಸಕ್ರಿಯ ಪ್ರಕರಣಗಳ ಸಂಖ್ಯೆ 205.

ಮೈಸೂರಿನಲ್ಲಿ ಲಸಿಕೆ ಲಭ್ಯವಿರುವ ಆಸ್ಪತ್ರೆಗಳ ಪಟ್ಟಿ ಇಲ್ಲಿದೆ.

English summary
In Mysuru JSS hospital Pramoda Devi Wadiyar launched the second phase of Covid vaccination drive. Here are the list of hospitals of Mysuru where vaccine available.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X