ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಕ್ಯೂಆರ್ ಕೋಡ್ ಬಳಸಿ ಓದಿ ಶಾಲಾ ಪುಸ್ತಕ

|
Google Oneindia Kannada News

ಮೈಸೂರು, ಜುಲೈ 8: ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪಠ್ಯಪುಸ್ತಕದ ಹೆಚ್ಚುವರಿ ಮಾಹಿತಿಯನ್ನು ಕ್ಯೂಆರ್ ಕೋಡ್ ಬಳಸಿ ಪಡೆಯಬಹುದಾದ ಹೊಸ ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಸಿಂಡಿಕೇಟ್ ಸಹಾಯದಿಂದ ಪರಿಚಯಿಸಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಠ್ಯದ ಸಮಗ್ರ ಮಾಹಿತಿಯನ್ನು ತಾವಿದ್ದ ಸ್ಥಳದಿಂದಲೇ ಪಡೆಯಬಹುದಾಗಿದೆ.

ಈ ಯೋಜನೆಗಾಗಿ ದೀಕ್ಷಾ ಎಂಬ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಮೂಲಕ ದೀಕ್ಷಾ ಆಪ್ ಡೌನ್ಲೋಡ್ ಮಾಡಿಕೊಂಡು ಪಠ್ಯಪುಸ್ತಕದ ಕ್ಯೂಆರ್ ಕೋಡ್ ಬಳಸಿ ಸುಲಭವಾಗಿ ಪುಸ್ತಕದಲ್ಲಿರುವ ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುಲಭವಾಗಿ ಮಾಹಿತಿ ಒದಗಿಸುವ ಉದ್ದೇಶದಿಂದ ಕರ್ನಾಟಕ ಪಠ್ಯಪುಸ್ತಕ ಸಂಘ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ 6 ರಿಂದ 10 ತರಗತಿಗಳಿಗೆ ಇಂಗ್ಲಿಷ್ ಪಠ್ಯ ಪುಸ್ತಕ, 6,7,8,9 ಮತ್ತು 10ನೇ ತರಗತಿಗಳ ಗಣಿತ ಮತ್ತು ವಿಜ್ಞಾನ ಪಠ್ಯಪುಸ್ತಕದಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಿದೆ.

 ರಾಜ್ಯ ಪಠ್ಯಕ್ರಮದ ಪುಸ್ತಕಕ್ಕೆ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ ರಾಜ್ಯ ಪಠ್ಯಕ್ರಮದ ಪುಸ್ತಕಕ್ಕೆ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ

ಎರಡೂ ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಅನುಕೂಲ ಪಡೆಯಬಹುದಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಾರ್ಡ್ ಗಳ ಮೂಲಕ ಶಿಕ್ಷಕರು ತಮಗೆ ಬೇಕಾದ ಅಗತ್ಯ ಮಾಹಿತಿಯನ್ನು ತುರ್ತಾಗಿ ಪಡೆಯಬಹುದು ಮತ್ತು ಅದರ ಪ್ರಿಂಟೌಟ್ ಅನ್ನು ತೆಗೆದುಕೊಳ್ಳುವ ಅವಕಾಶವಿದೆ.

school students and teachers can read text books by using qr code

ವಿದ್ಯಾರ್ಥಿಗಳು ತಮ್ಮ ಪಾಲಕರ ಮೊಬೈಲ್ ನಲ್ಲಿ ದೀಕ್ಷಾ ಆಪ್ ಡೌನ್ ಲೋಡ್ ಮಾಡಿಕೊಂಡು ಮನೆಯಲ್ಲಿ ಪಠ್ಯಪುಸ್ತಕದ ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ಆರರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವಾಗಲಿದೆ. ಮುಂದಿನ ದಿನದಲ್ಲಿ ಎಲ್ಲಾ ವಿಷಯಗಳಿಗೂ ಇದನ್ನು ಅಳವಡಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ವಿವರಿಸಿದರು.

625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ.... 625/625 ಅಂಕಗಳು ತೆಗೆಯುವುದು ಮಹತ್ ಸಾಧನೆಯೆ! ಆದರೆ....

ದೀಕ್ಷಾ ಆಪ್ ಡೌನ್ಲೋಡ್ ಮಾಡಿಕೊಂಡು ತೆರೆದ ತಕ್ಷಣ ಯಾವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗುತ್ತದೆ. ಅದರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ, ತೆಲುಗು, ತಮಿಳು, ಉರ್ದು ಭಾಷೆಗಳ ಆಯ್ಕೆ ಲಭ್ಯವಿದೆ. ಭಾಷೆಯನ್ನು ಆಯ್ಕೆ ಮಾಡಿಕೊಂಡರೆ ನಂತರ ವಿದ್ಯಾರ್ಥಿ ಅಥವಾ ಶಿಕ್ಷಕರೇ ಎಂಬ ಪ್ರಶ್ನೆ ಬರುತ್ತದೆ. ವಿದ್ಯಾರ್ಥಿಯಾಗಿದ್ದರೆ ಪುಸ್ತಕ ಸಂಪನ್ಮೂಲಗಳನ್ನು ಹುಡುಕಿ ಎಂದು ಬರುತ್ತದೆ. ಅದರ ಆಯ್ಕೆ ಬಳಿಕ ಕ್ಯೂಆರ್ ಕೋಡ್ ಆಯ್ಕೆ ತೆರೆದುಕೊಳ್ಳುತ್ತದೆ. ನಂತರ ಕ್ಯೂ ಆರ್ ಕೋಡ್ ಬಳಸಿ ಮಾಹಿತಿ ಪಡೆಯಬಹುದಾಗಿದೆ. ಶಿಕ್ಷಕರಾಗಿದ್ದರೆ ಅಗತ್ಯ ಕೋರ್ಸ್ ಸಂಬಂಧಿ ಸಂಪನ್ಮೂಲ ಗುಂಪುಗಳ ಮೂಲಕ ಹುಡುಕಬಹುದು.

English summary
Education department introduced new scheme where school students and teachers can read text books by using qr code. 6,7 and 8,9,10th student can read books online now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X