ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಲಮುರಿ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿ ನಿಗೂಢ ಸಾವು

|
Google Oneindia Kannada News

ಮೈಸೂರು, ಮೇ 19: ಬಲಮುರಿಗೆ ಶಾಲಾ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಮೃತ ವಿದ್ಯಾರ್ಥಿ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಬೇಲೂರಿನ ಮೌಂಟ್ ಕಾರ್ಮೆಲ್ ಶಾಲೆಯ ಹೇಮಂತ್ (16) ಸಾವಿಗೀಡಾದ ವಿದ್ಯಾರ್ಥಿ. ನಾಗರಾಜ್ ಹಾಗೂ ಜ್ಯೋತಿ ದಂಪತಿಯ ಪುತ್ರ ಹೇಮಂತ್, ಶಾಲಾ ಪ್ರವಾಸಕ್ಕೆಂದು ಶಾಲೆಯ ಶಿಕ್ಷಕರಾದ ಫಾದರ್ ಪ್ರಕಾಶ್ ಸಾಗರ್ ಹಾಗೂ 12 ಮಕ್ಕಳೊಂದಿಗೆ ಬಲಮುರಿಗೆ ಆಗಮಿಸಿದ್ದಾರೆ. ಆದರೆ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿ ಹೇಮಂತ್ ಸಾವಿಗೀಡಾಗಿದ್ದಾನೆ.

ಕೆರೆಯಲ್ಲಿ ಈಜಲು ಹೋದವರು ಮಸಣ ಸೇರಿದರುಕೆರೆಯಲ್ಲಿ ಈಜಲು ಹೋದವರು ಮಸಣ ಸೇರಿದರು

ವಿದ್ಯಾರ್ಥಿ ಸಾವನ್ನಪ್ಪಿದ್ದರೂ ಪೋಷಕರಿಗೆ ಈ ಬಗ್ಗೆ ಮೌಂಟ್ ಕಾರ್ಮಲ್ ಸಿಬ್ಬಂದಿ ಮಾಹಿತಿ ನೀಡದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮಗನ ಸಾವನ್ನು ಖುದ್ದು ಪೋಷಕರೇ ಖಚಿತಪಡಿಸಿಕೊಳ್ಳುವಂತೆ ಆಡಳಿತ ಮಂಡಳಿ ಹೇಳಿದ್ದು, ವಿದ್ಯಾರ್ಥಿ ಸಾವು ಮುಚ್ಚಿ ಹಾಕಲು ಪ್ರಯತ್ನಪಟ್ಟಂತೆ ಕಾಣುತ್ತಿದೆ. ಆಡಳಿತ ಮಂಡಳಿಯ ನಡೆಗೆ ಪೋಷಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

School student mysteriously died in Balamuri

ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಈಜಲು ಹೋದವರು ನೀರು ಪಾಲುಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಈಜಲು ಹೋದವರು ನೀರು ಪಾಲು

ಮೈಸೂರಿನ ಕೆ.ಆರ್. ಶವಗಾರಕ್ಕೆ ಹೇಮಂತ್ ದೇಹವನ್ನು ತರುವಷ್ಟರಲ್ಲಿ ಫಾದರ್ ಪ್ರಕಾಶ್ ಸಾಗರ್ ಕಾಲ್ಕಿತ್ತಿದ್ದಾರೆ. ಮಗನ ಸಾವು ಅಸಹಜ ಎಂದು ಶಾಲೆಯ ಆಡಳಿತ ಮಂಡಳಿ ಮೇಲೆ ದೂರ ದಾಖಲಿಸಲು ಪೋಷಕರು ಮುಂದಾಗಿದ್ದು, ಈ ಕುರಿತು ಕೆ.ಆರ್.ಎಸ್. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
School student who had come to school trip died of drowned at Balamuri. Parents made allegation on against the school management about his son death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X