ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ್ವರದಿಂದ ಬಾಲಕಿ ಸಾವು: ಡೆಂಗ್ಯೂ ಶಂಕೆ

ಮೈಸೂರಿನಲ್ಲಿ ಡೆಂಗ್ಯೂನಿಂದ ಬಳಲುತ್ತಿದ್ದ ಶಾಲಾ ಬಾಲಕಿಯೊಬ್ಬಳು ನಿಧನ. ಕೆ.ಆರ್. ಪೇಟೆಯ ಬಾಚಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಬಾಲಕಿ.

By ಬಿ.ಎಂ. ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 26: ಮೈಸೂರು ವ್ಯಾಪ್ತಿಯಲ್ಲಿ ಜ್ವರದಿಂದ ಬಳಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಶಾಲಾ ಬಾಲಕಿಯೊಬ್ಬಳು ಜ್ವರದಿಂದ ಮೃತಪಟ್ಟಿದ್ದು ಡೆಂಗ್ಯೂ ಶಂಕೆ ವ್ಯಕ್ತವಾಗಿದೆ.

ಕೆ.ಆರ್.ನಗರ ತಾಲೂಕಿನ ಬಾಚಹಳ್ಳಿ ಗ್ರಾಮದ ಬಾಚಹಳ್ಳಿ ಗ್ರಾಮದ ಮಂಜುಳಾ ಮತ್ತು ಗೋವಿಂದೇಗೌಡ ದಂಪತಿ ಪುತ್ರಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಲಕ್ಷ್ಮಿ(9) ಎಂಬ ದುರ್ದೈವಿ.

School girl suffering from Dengue died in Mysuru

ಕಳೆದ ಒಂದು ತಿಂಗಳಿಂದ ಲಕ್ಷ್ಮಿಗೆ ಜ್ವರ ಕಾಣಿಸಿಕೊಂಡಿತ್ತು. ಸಾಲಿಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಲಾಗಿತ್ತು. ಆದರೆ, ಗುಣಮುಖವಾಗದೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.

ತಾಲೂಕು ಶಿಕ್ಷಣ ಸಂಯೋಜಕ ಕಿರಣ್‍ಕುಮಾರ್ ಬಾಲಕಿ ಕುಟುಂಬದವರಿಗೆ ಸಾಂತ್ವಾನ ಹೇಳಿ, ಶಾಲೆಯ ಮುಖ್ಯಶಿಕ್ಷಕರು ಹಾಗೂ ಎಸ್‍ಡಿಎಂಸಿ ಸಮಿತಿಯವರ ಜತೆಯಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಚರ್ಚಿಸಿ, ಪ್ರತಿ ವಾರಕ್ಕೊಮ್ಮೆ ಶಾಲಾ ವಿದ್ಯಾರ್ಥಿಗಳನ್ನು ಪರೀಕ್ಷ್ಷಿಸಲು ಆರೋಗ್ಯ ಸಹಾಯಕಿಯನ್ನು ಕಳುಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗುವುದಾಗಿ ತಿಳಿಸಿದ್ದಾರೆ.

English summary
A school girl who was suffering from Dengue died on Saturday (August 26, 2017) in Mysuru. She was here for higher level of treatment from K.R. Nagar Taluk's Bachahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X