ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!

ಮೈಸೂರಿನ ವಿಜಯನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ತನ್ನ ಕ್ರೆಡಿಟ್‌ ಕಾರ್ಡ್ ಸೇವೆಯನ್ನ ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನ ಖಾತೆದಾರ ಚೆಕ್ ಮೂಲಕ ನೀಡಿರುವ ಅಪರೂಪದ ಘಟನೆ ನಡೆದಿದೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 21 : ಐದು ಪೈಸೆಗೆ ಚೆಕ್ ಕೊಡೋದಾ? ಸಾಧ್ಯಾನೇ ಇಲ್ಲ ಅಂದ್ಕೋತಾ ಇದೀರಾ? ಹಾಗಿದ್ರೆ ಈ ಸುದ್ದಿ ಓದಿ.

ಮೈಸೂರಿನ ವಿಜಯನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ತನ್ನ ಕ್ರೆಡಿಟ್‌ ಕಾರ್ಡ್ ಸೇವೆಯನ್ನ ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನ ಖಾತೆದಾರ ಚೆಕ್ ಮೂಲಕ ನೀಡಿರುವ ಅಪರೂಪದ ಘಟನೆ ನಡೆದಿದೆ.[ಕಪ್ಪ ಕಾಣಿಕೆ ಆರೋಪ ನೂರಕ್ಕೆ ನೂರು ಸತ್ಯ: ಯಡಿಯೂರಪ್ಪ]

ವಿಜಯನಗರದ ಮೊದಲ ಹಂತದ ನಿವಾಸಿ ಸತೀಶ್ ಎಂಬುವರು ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 25 ಸಾವಿರ ಠೇವಣೆ ಹಣ ಇಟ್ಟು 5 ವರ್ಷಗಳ ಹಿಂದೆ ಕ್ರೆಡಿಟ್‌ ಕಾರ್ಡ್ ಪಡೆದಿದ್ದರು. ಆದರೆ ಕ್ರೆಡಿಟ್‌ ಕಾರ್ಡ್ ಬಳಕೆ ದುಬಾರಿಯಾದ ಹಿನ್ನಲೆಯಲ್ಲಿ ಬೇಸತ್ತ ಸತೀಶ್ ಠೇವಣಿ ಇಟ್ಟಿದ್ದ ತಮ್ಮ 25 ಸಾವಿರ ಹಣವನ್ನ ವಾಪಸ್‌ ಪಡೆದಿದ್ದರು.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]

SBI asks a man to give 5 paise cheque in Mysuru

ಬ್ಯಾಂಕಿನ ಸೂಚನೆ ಮೇರೆಗೆ ಐದು ಪೈಸೆ ಚೆಕ್!

ಇನ್ನು ಕ್ರೆಡಿಟ್‌ ಕಾರ್ಡ್ ಸೇವೆಯನ್ನ ಸ್ಥಗೀತಗೊಳಿಸುವಂತೆ ಬ್ಯಾಂಕ್‌ನವರಿಗೆ ಕೇಳಿದಾಗ ಕ್ರೆಡಿಟ್ ಕಾರ್ಡ್ ಸೇವೆಯನ್ನ ಪರೀಶಿಲಿಸಿದ್ದಾರೆ. ಬಳಿಕ ಬ್ಯಾಂಕ್‌ನವರು ನಿಮ್ಮ ಖಾತೆಯಲ್ಲಿ 5 ಪೈಸೆ ಬಾಕಿಯಿದೆ. ಅದನ್ನ ಪಾವತಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸಬಹುದು ಎಂದಿದ್ದಾರೆ.

ಸತೀಶ್ ಬ್ಯಾಂಕ್‌ನವರು ತಮಾಷೆ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡು ಪುನಃ ಬ್ಯಾಂಕ್‌ನವರನ್ನ ಕೇಳಿದಾಗ ಬ್ಯಾಂಕ್‌ನ ಹಣಕಾಸು ವ್ಯವಸ್ಥೆಯ ಪ್ರಕಾರ 5 ಪೈಸೆ ಬಾಕಿ ಪವಾತಿಸುವುದು ಅನಿರ್ವಾಯವೆಂದು ಹೇಳಿದ್ದಾರೆ.[ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ]

ಮುಗುಳ್ನಗುತ್ತಲೇ ಚೆಕ್ ನೀಡಿದ ಸತೀಶ್

5 ಪೈಸೆ ಈಗ ಚಾಲ್ತಿಯಲ್ಲಿಲ್ಲ. ಅದನ್ನ ಎಲ್ಲಿಂದ ತರುವುದು ಎಂಬ ತಲೆಬಿಸಿಯಲ್ಲಿ ಸಿಲುಕಿದ ಸತೀಶ್ ಗೆ ಬ್ಯಾಂಕ್‌ನ ಸಿಬ್ಬಂದಿ ಚೆಕ್ ಮೂಲಕ 5 ಪೈಸೆ ಪಾವತಿಸಲು ಸೂಚಿಸಿದರು. ಅದರಂತೆ ಮಾರ್ಚ್ 18 ರಂದು ಚೆಕ್ ಮೂಲಕವೇ 5 ಪೈಸೆಯನ್ನ ಪಾವತಿಸಿದರು. ಈ ಪ್ರಕ್ರಿಯೆಗೆ 3 ರೂಪಾಯಿ ವೆಚ್ಚವಾಗಿದೆ ಎಂದು ದಟ್ಸ್ ಕನ್ನಕ್ಕೆ ವಿವರಿಸುತ್ತ ನಗುತ್ತಾರೆ ಸತೀಶ್!

English summary
A man, wanted to deactivate his credit card. SBI asks him to pay remaining balance 5 paise to deactivate the card. the man gave 5 paise through cheque! The rare incident took place in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X