ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸ್ನೇಹಿತನ ಕಾರಣಕ್ಕೆ ಸಾವರ್ಕರ್ ಜೈಲಿಗೆ ಹೋಗಿದ್ದು': ಸಿದ್ದರಾಮಯ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರುವರಿ 02: ಸಾವರ್ಕರ್ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಜೈಲಿಗೆ ಹೋಗಿಲ್ಲ. ಸಾವರ್ಕರ್ ಜೈಲಿಗೆ ಹೋಗಿದ್ದು ಇಂಗ್ಲೆಂಡ್‌ನ ಸ್ನೇಹಿತನ ಕಾರಣಕ್ಕಾಗಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಸಿಎಎ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಅವನ ಹೆಸರು ದಾಮೋದರ ಸಾವರ್ಕರ್, ಆರ್‌ ಎಸ್‌ ಎಸ್‌ನವರು ವೀರ ಸಾವರ್ಕರ್ ಅಂತ ಹೆಸರಿಟ್ಟಿದ್ದಾರೆ ಎಂದರು.

ರಾಜ್ಯ ಖಜಾನೆ ಖಾಲಿ ಎಂದ ಸಿದ್ದುಗೆ ಬಿಎಸ್ವೈ ತಿರುಗೇಟು!ರಾಜ್ಯ ಖಜಾನೆ ಖಾಲಿ ಎಂದ ಸಿದ್ದುಗೆ ಬಿಎಸ್ವೈ ತಿರುಗೇಟು!

ಆರ್‌ ಎಸ್‌ ಎಸ್‌ನವರಿಗೆ ವೀರ ಸಾವರ್ಕರ್ ಆರಾಧ್ಯ ದೈವ. ಅವರಲ್ಲಿ ಒಬ್ಬನೇ ಒಬ್ಬ ಕೂಡ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ, ಸ್ವಾತಂತ್ರ್ಯಕ್ಕಾಗಿ ಒಬ್ಬನೂ ಬಲಿದಾನವನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Savarkar Is Not A Freedom Fighter Said Siddaramaiah

ಅಂಡಮಾನ್ ಜೈಲಿಗೆ ಹೋದ ಮೇಲೆ ಇದೇ ಸಾವರ್ಕರ್ ಬ್ರಿಟಿಷ್‌ರಿಗೆ ಪತ್ರ ಬರೆದಿದ್ದ. ನಾನು ತಪ್ಪು ಮಾಡಲ್ಲ, ಜೈಲಿನಿಂದ ಬಿಡುಗಡೆ ಮಾಡಿ ಅಂತ ಮನವಿ ಮಾಡಿದ್ದ ಎಂದು ತಿಳಿಸಿದರು.

ಸಿಎಎ ಜನ ಜಾಗೃತಿ ಸಭೆ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಎಲ್ಲ ಕಡೆ ಹೋರಾಟ ನಡೆಯುತ್ತಿದೆ, ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಆಗಿಲ್ವ ಅಂತ ಪ್ರಶ್ನೆ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ""ಸಂತೋಷ್ ಮೈಸೂರಿಗೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ಹಾಗಾಗಿ ಸತ್ಯ ಮತ್ತು ವಾಸ್ತವ ಹೇಳಲು ವಿಚಾರ ಸಂಕಿರಣ ಮಾಡಿದ್ದೇವೆ ಎಂದು ಹೇಳಿದರು.

ಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು : ಸಿದ್ದರಾಮಯ್ಯಮೋದಿಯವರ ಭರವಸೆ ಈಡೇರುವುದು ಕನಸಿನ ಮಾತು : ಸಿದ್ದರಾಮಯ್ಯ

ಬಿಜೆಪಿ ಪಕ್ಷದ್ದು ಕ್ರೂರತ್ವ ತುಂಬಿರುವ ಸರ್ಕಾರ. ಎಲ್ಲಿ ಮಾನವೀಯತೆ ಇರಲ್ಲ, ಅಲ್ಲಿ ಕ್ರೂರತೆ ಇರುತ್ತೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನು ದೇಶದ್ರೋಹಿಗಳು ಅನ್ನುತ್ತೀರಿ. ಹಾಗಾದರೆ ಸಂವಿಧಾನದ ವಿರುದ್ಧ ಕಾನೂನು ಮಾಡುವವರನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.

ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿದೆ. ಕೃಷಿ, ಕೈಗಾರಿಕಾ ವಲಯ, ಜಿಡಿಪಿ ಕುಸಿದಿದೆ. ಈ ಹಂತದಲ್ಲಿ ನಿಮ್ಮ ಆದ್ಯತೆ ಏನಾಗಬೇಕಿತ್ತು?

ಸಿಎಎ, ಎನ್‌ಆರ್‌ಸಿ ಜಾರಿಗೆ ತಂದು ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಸಿಎಎ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

English summary
Savarkar Goes To Jail For Friends Reason Siddaramaiah Said In Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X