• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಯುವ ದಸರಾ: ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಯುವಂತೆ ಮಾಡಿದ ಸ್ಯಾಂಡಲ್ ವುಡ್ ನಟಿಯರು

|

ಮೈಸೂರು, ಅಕ್ಟೋಬರ್. 16 : ಸೋಮವಾರ (ಅ.15)ನಡೆದ ಸ್ಯಾಂಡಲ್ ವುಡ್ ನೈಟ್ಸ್ ಲ್ಲಿ ನಟಿಯರಾದ ಹರಿಪ್ರಿಯ, ಶುಭಾಪೂಂಜ ಅವರ ನೃತ್ಯ ಹಾಗೂ ಕನ್ನಡದ ಹಿನ್ನೆಲೆ ಗಾಯಕರ ಗಾಯನ ಯುವ ಸಮೂಹ ಕುಣಿದು ಕುಪ್ಪಳಿಸುವಂತೆ ಮಾಡಿತು.

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಯಶಸ್ವಿಯಾಗಿ ಮುಂದುವರಿದಿರುವ ಯುವ ದಸರಾ ಸೋಮವಾರ ನಟ-ನಟಿಯರ ಆಗಮದಿಂದ ಮತ್ತಷ್ಟು ರಂಗೇರಿತು. ಯುವಕ, ಯುವತಿಯರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಕಾರ್ಯಕ್ರಮಕ್ಕೆ ಮೆರಗು ತಂದರು.

ಮೈಸೂರು ದಸರಾ - ವಿಶೇಷ ಪುರವಣಿ

ನೀರ್ ದೋಸೆ.. ಗೀತೆಗೆ ಹೆಜ್ಜೆ ಹಾಕಿ ಎಲ್ಲರ ಮನಗೆದ್ದ ಹರಿಪ್ರಿಯ ಒಂದೆಡೆಯಾದರೆ, ಮತ್ತೊಬ್ಬ ನಟಿ ಶುಭಾಪೂಂಜ ಯಾಕಿಂಗ್ ಆಡ್ತಾರೋ ಈ ಹುಡುಗರು....ಎಂದು ಕುಣಿಯುತ್ತಾ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಯುವ ದಸರಾದಲ್ಲಿ ಅರ್ಮಾನ್ ಮಲ್ಲಿಕ್ ಹಾಡಿಗೆ ಹುಚ್ಚೆದ್ದು ಕುಣಿದ ಪಡ್ಡೆಹೈಕ್ಳು

ಇಂತಿ ನಿನ್ನ ಪ್ರೀತಿಯ ಖ್ಯಾತಿಯ ಸೋನುಗೌಡ ನಿಂತಲ್ಲಿ, ನಿಲ್ಲಲಾರೇ ...ಹಾಡಿಗೆ ನರ್ತಿಸಿದರೆ, ಕಿರು ತೆರೆಯ ನಾಗಿಣಿ ಧಾರಾವಾಹಿಯ ದೀಪಿಕಾದಾಸ್ ಚುಮು ಚುಮು ಅಂತೈತಿ...ಎಂಬ ಗೀತೆಗೆ ಕುಣಿದು ಸಭಿಕರಿಂದ ಚಪ್ಪಾಳೆ, ಶಿಳ್ಳೆಗಳನ್ನು ಗಿಟ್ಟಿಸಿಕೊಂಡರು. ಮುಂದೆ ಓದಿ...

 ಸಿಂಚನಾ ಮಾಡಿದ ಮೋಡಿ

ಸಿಂಚನಾ ಮಾಡಿದ ಮೋಡಿ

ಹಿನ್ನೆಲೆ ಗಾಯಕಿ ಸಿಂಚನಾ `ರಸಿಕಾ ಬಲು ಮೆಲ್ಲನೆ ಮಾತಾಡು..', `ಇನ್ನು ಯಾಕ ಬರಲಿಲ್ಲವಾ ಹುಬ್ಬಳ್ಳಿಯವಾ..', ಯಾಕ ಹುಡುಗ ಮೈಯಾಂಗ ಹೆಂಗ್ ಐತಿ', `ಕೋಡಗನ ಕೋಳಿ ನುಂಗಿತ್ತಾ..' ಮೊದಲಾದ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಹಾಡಿ ನೆರೆದಿದ್ದವರನ್ನು ಮೋಡಿ ಮಾಡಿದರು.

 ಹಾಡು ಸಂತೋಷಕ್ಕೆ...

ಹಾಡು ಸಂತೋಷಕ್ಕೆ...

ಗಾಯಕಿ ಅನುರಾಧ ಭಟ್ `ನಂದ ನಂದನಾ ನೀನು ಶ್ರೀಕೃಷ್ಣ', 'ಜುಮ್ ಜುಮ್ ಮಾಯ, ಜುಮ್ ಜುಮ್ ಮಾಯ..' ಗಾಯನ, ಗಾಯಕ ಸಂಜಿತ್ ಹೆಗಡೆ ಗಾಯಕ ಸಂತೋಷ್ `ಐರಾವತಾ' ಗಾಯನ ಹಾಗೂ ಚಿನ್ಮಯ್ ಅವರು ಶಂಕರ್ ನಾಗ್ ಅವರ `ಹಾಡು ಸಂತೋಷಕ್ಕೆ' ಗೀತೆ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು

 ಕಿರುತೆರೆ ನಟಿ ಶಾಲಿನಿ ಹಾಸ್ಯ

ಕಿರುತೆರೆ ನಟಿ ಶಾಲಿನಿ ಹಾಸ್ಯ

ಯುವ ಸಂಭ್ರಮದಿಂದ ಯುವ ದಸರೆಗೆ ಆಯ್ಕೆಯಾದ ಕರುಣಾಮಯಿ ವಿಶೇಷ ಮಕ್ಕಳ ಶಾಲೆ, ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು, ನೃತ್ಯ ವಿಹಾರ್ ಪ್ಯಾಷನ್ ತಂಡ ತಮ್ಮ ಪ್ರತಿಭೆ ಪ್ರದರ್ಶಿಸಿದವು. ಕಿರುತರೆ ನಟಿ ಶಾಲಿನಿ ತಮ್ಮ ಹಾಸ್ಯದ ಮೂಲಕವೇ ಕಾರ್ಯಕ್ರಮ ನಿರೂಪಿಸಿದ್ದು ವಿಶೇಷ.

ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

 ರಂಜಿಸಿದ ಶಿವರಾಜ್-ನಯನಾ ಜೋಡಿ

ರಂಜಿಸಿದ ಶಿವರಾಜ್-ನಯನಾ ಜೋಡಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಕೆ.ಆರ್.ಪೇಟೆ ಶಿವರಾಜ್ ಹಾಗೂ ನಯನ ಜೋಡಿ ಕಾರ್ಯಕ್ರಮದ ಮಧ್ಯೆ ತಮ್ಮ ಹಾಸ್ಯಗಳ ಮೂಲಕ ಎಲ್ಲರನ್ನೂ ನಕ್ಕು ನಲಿಸಿದರು.

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sandalwood night program was successful on Monday (October 15) in Mysuru yuva dasara. Audience was delighted to see Haripriya, Shuba punja gorgeous dance.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more