ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಕವಿಗೆ ಅವಮಾನ ಮಾಡಿಲ್ಲ: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಸಮರ್ಥನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂ. 1: ‌ಪಠ್ಯ ಪುಸ್ತಕದಲ್ಲಿ ಏನಾದರೂ ತಪ್ಪುಗಳಿದ್ದರೇ ಹೇಳಿ ಅದನ್ನು ಸರಿಪಡಿಸುತ್ತೇವೆ. ಮುಖ್ಯಮಂತ್ರಿ ಕೂಡಾ ಇದೇ ಭರವಸೆಯನ್ನು ನೀಡಿದ್ದಾರೆ.‌ ರಾಷ್ಟ್ರಕವಿ ಕುವೆಪುರವರಿಗೆ ನಾವು ಯಾವುದೇ ರೀತಿಯ ಅವಮಾನ ಮಾಡಿಲ್ಲ ಎಂದು ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ.‌ ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನು ಹಿಡಿದು ನೇತಾಡುತ್ತಿದ್ದಾರೆ.

ಪಠ್ಯದಲ್ಲಿ ಕೊನೆಗೆ ಉಳಿಯೋದು ಹೆಡಗೇವಾರ್, ಸೂಲಿಬೆಲೆ ಪಾಠ ಮಾತ್ರನಾ?ಪಠ್ಯದಲ್ಲಿ ಕೊನೆಗೆ ಉಳಿಯೋದು ಹೆಡಗೇವಾರ್, ಸೂಲಿಬೆಲೆ ಪಾಠ ಮಾತ್ರನಾ?

ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಏನು ಸರಿಮಾಡಬೇಕು ಎಂದು ಸಲಹೆ ಕೊಡಲಿ ಎಂದು ಹೇಳಿದರು.

Sadananda Gowda And Pratap Simha Says Kuvempu Is Not Insulted

ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಬರಲಿಲ್ಲ: ಪ್ರತಾಪಸಿಂಹ

ಪಠ್ಯದಿಂದ ತಮ್ಮ ಅಧ್ಯಾಯ ಕೈ ಬಿಡಬೇಕು ಎಂದು ಕೆಲ ಲೇಖಕರು ಪತ್ರಗಳನ್ನು ಬರೆದಿರುವ ವಿಚಾರದ ಬಗ್ಗೆ ಸಂಸದ ಪ್ರತಾಪಸಿಂಹ ಮಾತನಾಡಿ,‌ "ಮೊದಲು ಭಗತ್ ಸಿಂಗ್, ನಾರಾಯಣ್ ಗುರು ವಿಚಾರವಾಗಿ ಚರ್ಚೆ ನಡೆಯಲಿ. ಈ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರೂ ಬರಲಿಲ್ಲ. ಇವರು ವಿಚಾರಹೀನರಾಗಿಲ್ಲದಿದ್ದರೆ ಚರ್ಚೆಗೆ ಬರುತ್ತಿದ್ದರು," ಎಂದು ಟೀಕಿಸಿದರು..

ಚಕ್ರತೀರ್ಥ ಹೆಸರು ಶಿಫಾರಸು: 'ಡೀಸೆಲ್' ಕಥೆ ಹೇಳಿದ ಎಸ್. ಸುರೇಶ್ ಕುಮಾರ್!ಚಕ್ರತೀರ್ಥ ಹೆಸರು ಶಿಫಾರಸು: 'ಡೀಸೆಲ್' ಕಥೆ ಹೇಳಿದ ಎಸ್. ಸುರೇಶ್ ಕುಮಾರ್!

ರಾಷ್ಟ್ರಕವಿ ಕುವೆಂಪು ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟಿರುವುದು ಬಿಜೆಪಿ.‌ ಸದಾನಂದಗೌಡರು ಸಿಎಂ ಆಗಿದ್ದಾಗ ನಾಡಗೀತೆ ಆಯ್ತು ಎಂದು ಹೇಳಿದ ಪ್ರತಾಪ್ ಸಿಂಹ,‌ "ಮೋದಿ ಅಧಿಕಾರಕ್ಕೆ ಬಂದಾಗ ಕೆಲವರು ಪ್ರಶಸ್ತಿ ವಾಪಸ್ಸು ನೀಡಿದರು. ಇದೀಗ ಪಠ್ಯದ ಲೇಖನ ವಾಪಸ್ಸಿಗೆ ಪತ್ರ ಬರೆಯುತ್ತಿದ್ದಾರೆ‌. ಇದು ಕಾಂಗ್ರೆಸ್ ಅವರಿಂದ ಉಪಕೃತರಾದವರ ಕೆಲವರ ನಾಟಕ.‌ ಕೆಲವರು ಕೈ ಬಿಟ್ಟ ಮೇಲೆ ನಮ್ಮ ಪಠ್ಯ ಕೈ ಬಿಡಿ ಅಂತಿದ್ದಾರೆ.‌‌ ದೇವನೂರು ಅವರ ಪಠ್ಯವನ್ನು ಹಿಂದೆ ಯುವಕರು ತುಂಬಾ ಓದಿದ್ದಾರೆ.‌ ಕಳೆದ 15 ವರ್ಷದಿಂದ ಇವರ ಸಾಹಿತ್ಯ ಕೃಷಿ ನಿಂತು ಹೋಗಿದೆ. ಕಾಂಗ್ರೆಸ್ ಪರ ನಿಲ್ಲಲು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡ್ತಿದ್ದಾರೆ.‌ ಅವರೆಲ್ಲಾ ಅದ್ಬುತ ಸಾಹಿತಿಗಳು ಅಂದುಕೊಳ್ಳುವುದು ಬೇಡ," ಎಂದು ಅಭಿಪ್ರಾಯಪಟ್ಟರು.

Sadananda Gowda And Pratap Simha Says Kuvempu Is Not Insulted

ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ

ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, "ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ, ಹಾಗೂ ರಾಜ್ಯ ಸಭಾ ಟಿಕೆಟ್ ಹಂಚಿಕೆಯಲ್ಲೂ ಭಿನ್ನಮತ ಇಲ್ಲ. ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಎಲ್ಲರನ್ನೂ ಮುಟ್ಟುವ ಕೆಲಸ ನಮ್ಮ ಪಕ್ಷ ಮಾಡಿದೆ. ಗೆಲ್ಲುವ ಪಕ್ಷ ಆದ ಕಾರಣ ಆಕಾಂಕ್ಷಿತರ ಪಟ್ಟಿಯೂ ಹೆಚ್ಚಿರುತ್ತದೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಸಹಜ. ಆದರೆ ವಾಸ್ತವವಾಗಿ ಎಲ್ಲರ ಸಹಮತ ಪಡೆದು ಕೋರ್ ಕಮಿಟಿಯಲ್ಲಿ ತೀರ್ಮಾನವಾಗುತ್ತದೆ" ಎಂದು ಜಗ್ಗೇಶ್ ಆಯ್ಕೆಯನ್ನು ಸಮರ್ಥಿಸಿಕೊಂಡರು.

Sadananda Gowda And Pratap Simha Says Kuvempu Is Not Insulted

ಎಂಎಲ್ಎ ಚುನಾವಣೆಗೆ ಹೆಚ್ಚು ಆಕ್ಟೀವ್ ಇರೋರು ಬೇಕಾಗುತ್ತೆ. ಇದಕ್ಕೆ ಆಕ್ಟೀವ್ ಇಲ್ಲದಿದ್ದರೂ ಪರವಾಗಿಲ್ಲ. ಹಾಗಾಗಿ ಆಕ್ಟೀವ್ ಇಲ್ಲದ ಜಗ್ಗೇಶ್ ಅವರನ್ನು ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿದೆ ಎಂದು ಡಿವಿಎಸ್ ಸ್ಪಷ್ಟಪಡಿಸಿದರು.

(ಒನ್ಇಂಡಿಯಾ ಸುದ್ದಿ)

English summary
Text book revision, Insult to a Kuvempu textbook, We have not done anything to humiliate those whom we respect., We will correct any errors in the text book. Former Union Minister DV Sadananda Gowda asserted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X