ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋನ್ ಕದ್ದಾಲಿಕೆ; ಸಂಬಂಧ ಹಾಳುಮಾಡುವ ಹುನ್ನಾರ ಎಂದ ಸಾರಾ ಮಹೇಶ್

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ತನಿಖೆ ಪೂರ್ಣವಾಗುವ ಮುನ್ನ ವರದಿ ಬಿಜೆಪಿ ಕೈಗೆ ಸಿಗಲು ಹೇಗೆ ಸಾಧ್ಯ?- ಸಾರಾ ಮಹೇಶ್

ಮೈಸೂರು, ಸೆಪ್ಟೆಂಬರ್ 30: ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಆಗಿದೆ ಎಂಬ ಸಚಿವ ಆರ್ ಅಶೋಕ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಾರಾ ಮಹೇಶ್, "ಸಿಬಿಐ ತನಿಖೆ ಪೂರ್ಣಗೊಂಡ ನಂತರವಷ್ಟೇ ಸ್ಪಷ್ಟ ವಿವರ ತಿಳಿಯಲಿದೆ" ಎಂದಿದ್ದಾರೆ.

ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ: ಎಚ್ಡಿಕೆ ಏನಂದ್ರು?ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ: ಎಚ್ಡಿಕೆ ಏನಂದ್ರು?

ಮೈಸೂರಿನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಅಶೋಕ್‌ ಅವರು ಒಂದು ಹೇಳಿಕೆ ಕೊಡುತ್ತಾರೆ, ಪುನಃ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತೊಂದು ರೀತಿಯ ಹೇಳಿಕೆ ಕೊಡುತ್ತಾರೆ. ಇದರ ಹಿಂದೆ ಇರುವುದು ಬರೀ ರಾಜಕೀಯ ಉದ್ದೇಶ" ಎಂದು ಆರೋಪಿಸಿದರು.

Sa Ra Mahesh Statement On Nirmalananda Swamiji Phone Tapping Incident

ಫೋನ್ ಕದ್ದಾಲಿಕೆ ಪ್ರಕರಣ ಬಹಿರಂಗಗೊಂಡಿದ್ದು ಆ ಒಂದು ಮೊಬೈಲ್ ಸಂಖ್ಯೆಯಿಂದಫೋನ್ ಕದ್ದಾಲಿಕೆ ಪ್ರಕರಣ ಬಹಿರಂಗಗೊಂಡಿದ್ದು ಆ ಒಂದು ಮೊಬೈಲ್ ಸಂಖ್ಯೆಯಿಂದ

"ಈಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಸಂಬಂಧ ಹಾಳು ಮಾಡುವ ಪ್ರಯತ್ನ ನಡೆದಿದೆ, ಈಗ ಶ್ರೀಗಳ ವಿರುದ್ಧವೂ ಅದೇ ಪ್ರಯತ್ನ ನಡೆದಿದೆ" ಎಂದರು. "ಸರ್ಕಾರ ಬೀಳುವ ಸಂಭವವಿದೆ ಎಂದು ಗೊತ್ತಿದ್ದರೂ ಕುಮಾರಸ್ವಾಮಿ ಅವರು ಶ್ರೀಗಳ ಅಮೆರಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಪ್ರಧಾನಿ ದೇವೇಗೌಡ ಮತ್ತು ಶ್ರೀಗಳ ಸಂಬಂಧ ಚೆನ್ನಾಗಿದೆ. ಅದನ್ನು ಒಡೆಯುವ ವಿರೋಧಿಗಳ ಯತ್ನ ಫಲಿಸದು" ಎಂದು ಹೇಳಿದರು.

English summary
Former minister Sara Mahesh Responded to the Minister R Ashok's statement on phonetapping of Nirmalananda Swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X