ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿಭಜನೆಗೆ ವಿರೋಧ ವ್ಯಕ್ತಪಡಿಸಿದ ಸಾ.ರಾ. ಮಹೇಶ್

|
Google Oneindia Kannada News

Recommended Video

Sa Ra Mahesh Opposes Mysore Partition | Oneindia Kannada

ಮೈಸೂರು, ಅಕ್ಟೋಬರ್ 14: ಮೈಸೂರು ಜಿಲ್ಲೆ ವಿಭಜನೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಿಂದ ಹುಣಸೂರನ್ನು ಬೇರೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಮೈಸೂರು ಜಿಲ್ಲೆಗೆ ವಿಶ್ವದಲ್ಲಿ ಪ್ರಖ್ಯಾತಿ ಇದೆ. ಅಷ್ಟೇ ಅಲ್ಲದೆ ಅಲ್ಲದೆ ಮೈಸೂರು ಸಾಂಸ್ಕೃತಿಕ ಜಿಲ್ಲೆ. ಇದನ್ನು ವಿಭಜಿಸಲು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಮೈಸೂರು ಜಿಲ್ಲೆ ವಿಭಜನೆಗೆ ಎಚ್‌ ವಿಶ್ವನಾಥ್ ಒತ್ತಾಯ ಮೈಸೂರು ಜಿಲ್ಲೆ ವಿಭಜನೆಗೆ ಎಚ್‌ ವಿಶ್ವನಾಥ್ ಒತ್ತಾಯ

ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳೂ ಒಟ್ಟಾಗಿ ಇರಬೇಕು. ವಿಭಜನೆ ಒಳ್ಳೆಯದಲ್ಲ. ಎಚ್​. ವಿಶ್ವನಾಥ್​ ಅವರು ಶಾಸಕರಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡದೆ ಈಗ ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sa Ra Mahesh Oppose To Mysuru Partition

ಮೈಸೂರು ಜಿಲ್ಲೆ ವಿಭಜನೆಯಾಗಬೇಕು ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್ ಒತ್ತಾಯಿಸಿದ್ದಾರೆ. ಈಗಾಗಲೇ ವಿಜಯನಗರ, ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು ಎಂದು ಹೋರಾಟಗಳು ಆರಂಭವಾಗಿರುವ ಬೆನ್ನಲ್ಲೇ ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಬೇಕು.ಮೈಸೂರಿನಿಂಸ ಬೇರ್ಪಡಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಮೈಸೂರನ್ನು ಇಬ್ಭಾಗ ಮಾಡಬೇಕೆಂದು ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್‌ ವಿಶ್ವನಾಥ್ ಆಗ್ರಹಿದ್ದಾರೆ. ಅಲ್ಲದೆ ಪ್ರತ್ಯೇಕ ಜಿಲ್ಲೆಗೆ ಒಂದು ಹೋರಾಟ ಸಮಿತಿ ರಚಿಸಿ ಹೋರಾಟ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ.

ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆ ಉಳಿಯಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ, ಕುರಣಾಕರರೆಡ್ಡಿ, ಸಚಿವ ಶ್ರೀರಾಮುಲು ಪಟ್ಟು ಹಿಡಿದಿದ್ದರು. ಇನ್ನೊಂದೆಡೆ ಅನರ್ಹ ಶಾಸಕ ಆನಂದಸಿಂಗ್, ಕೆಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಅವರು ವಿಜಯನಗರ ಜಿಲ್ಲೆಯ ರಚನೆ ಆಗಲೇಬೇಕೆಂದು ಸಿಎಂ ಬಿಎಸ್ ವೈ ಮೇಲೆ ಒತ್ತಡ ಹೇರಿದ್ದರು.

English summary
Former Minister Sa Ra Mahesh Opposed of Mysuru District Partition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X