India
  • search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಟ್ಟು ಬಿಡದ ಸಾ.ರಾ.ಮಹೇಶ್: ಸಂಕಷ್ಟದಲ್ಲಿ ರೋಹಿಣಿ ಸಿಂಧೂರಿ

|
Google Oneindia Kannada News

ಬೆಂಗಳೂರು, ಸೆ 22: ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ದ ಜೆಡಿಎಸ್, ಕೆ.ಆರ್. ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಮತ್ತೆ ತಿರುಗಿಬಿದ್ದಿದ್ದಾರೆ. ಮಂಗಳವಾರದ (ಸೆ 21) ಅಧಿವೇಶನದಲ್ಲಿ ಮಹೇಶ್ ಅವರು ರೋಹಿಣಿ ವಿರುದ್ದ ಹಕ್ಕುಚ್ಯುತಿ ಪ್ರಸ್ತಾಪ ಮಾಡಿದ್ದಾರೆ.

ಇದರ ಜೊತೆಗೆ ಬ್ಯಾಗ್ ಖರೀದಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆಯೂ ಸಾ.ರಾ.ಮಹೇಶ್ ಧ್ವನಿ ಎತ್ತಿದ್ದಾರೆ. "ಬಟ್ಟೆ, ಬ್ಯಾಗ್ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ. ಸುಮಾರು 6 ಕೋಟಿ ರೂ. ಅಕ್ರಮ ನಡೆದಿದೆ. ಸುಮಾರು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದರ ವಾಸ್ತವ ಬೆಲೆ 1,47,15,000 ಆಗಿದೆ. ಅವರು 7 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಅವರು ಬ್ಯಾಗ್‍ನಲ್ಲೇ 6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ" ಎಂದು ಮಹೇಶ್ ಆರೋಪಿಸಿದ್ದರು.

ಸಾ. ರಾ. ಚೌಲ್ಟ್ರಿ ಭೂ ವಿವಾದ; ರೋಹಿಣಿ ಸಿಂಧೂರಿಗೆ ಸವಾಲ್!ಸಾ. ರಾ. ಚೌಲ್ಟ್ರಿ ಭೂ ವಿವಾದ; ರೋಹಿಣಿ ಸಿಂಧೂರಿಗೆ ಸವಾಲ್!

ಸದನದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಮಹೇಶ್, "ವಾಲ್ಮೀಕಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಉಸ್ತುವಾರಿ ಸಚಿವರು, ಸಂಬಂಧ ಪಟ್ಟ ಶಾಸಕರು ಆ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಇವರು (ರೋಹಿಣಿ) ರಜೆ ಹಾಕಿ ರೆಸಾರ್ಟಿಗೆ ಹೋಗುತ್ತಾರೆ. ಇದಾ ಜಿಲ್ಲಾಧಿಕಾರಿಯಾಗಿರುವವರು ನಡೆದುಕೊಳ್ಳುವ ರೀತಿ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ 6 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದ ಸಾ.ರಾ. ಮಹೇಶ್

"ಮುಖ್ಯಮಂತ್ರಿಗಳ ಮನೆಯಲ್ಲಿ ಇಲ್ಲ, ಸ್ಪೀಕರ್ ಅವರ ಮನೆಯಲ್ಲೂ ಈಜುಕೊಳವಿಲ್ಲ, ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡಿ ಅವರ ಮನೆಗೆ ಈಜುಕೊಳ ನಿರ್ಮಿಸಿದ್ದಾರೆ"ಎಂದು ಸಾ.ರಾ.ಮಹೇಶ್ ಮತ್ತೆ ಹಳೆಯ ಆರೋಪವನ್ನು ಸದನದಲ್ಲಿ ತಂದರು. ರೋಹಿಣಿ ಸಿಂಧೂರಿ ವಿರುದ್ದ ತನಿಖೆ ಪ್ರಕ್ರಿಯೆ ಆರಂಭಿಸಿದ ಸರಕಾರ. ಮುಂದೆ ಓದಿ...

 ಹಕ್ಕುಚ್ಯುತಿಗೆ ಸಂಬಂಧಿಸಿದ ವಿಚಾರ ಮಾತ್ರ ಸದನದಲ್ಲಿ ಪ್ರಸ್ತಾಪ ಮಾಡಿ - ಮಾಧುಸ್ವಾಮಿ

ಹಕ್ಕುಚ್ಯುತಿಗೆ ಸಂಬಂಧಿಸಿದ ವಿಚಾರ ಮಾತ್ರ ಸದನದಲ್ಲಿ ಪ್ರಸ್ತಾಪ ಮಾಡಿ - ಮಾಧುಸ್ವಾಮಿ

"ಅವರ ನಿವಾಸದ ಕರೆಂಟ್ ಬಿಲ್ ತಿಂಗಳಿಗೆ 75 ಸಾವಿರ ರೂಪಾಯಿ. ಒಂದು ಆಶ್ರಯ ಮನೆಗೆ ನಾವು ಕೊಡುವ ದುಡ್ಡನ್ನು ಸರಕಾರ ಅವರ ಒಂದು ತಿಂಗಳ ಕರೆಂಟ್ ಬಿಲ್ಲಿಗೆ ಕೊಡುತ್ತಿದೆ"ಎಂದು ಮಹೇಶ್ ಹೇಳಿದಾಗ, ಎದ್ದು ನಿಂತ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, "ಹಕ್ಕುಚ್ಯುತಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಸದನದಲ್ಲಿ ಪ್ರಸ್ತಾಪ ಮಾಡಿ" ಎಂದು ಮಹೇಶ್‌ಗೆ ಸೂಚಿಸಿದರು. ಆಗ, ಸಾ.ರಾ.ಮಹೇಶ್ ಹಕ್ಕುಚ್ಯುತಿಯನ್ನು ಸದನದಲ್ಲಿ ಮುಂದಿಟ್ಟರು.

 ಸಭಾಪತಿ ಪೀಠದ ಮುಂದೆ ಧರಣಿ ಕೂತ ಸಾ.ರಾ.ಮಹೇಶ್

ಸಭಾಪತಿ ಪೀಠದ ಮುಂದೆ ಧರಣಿ ಕೂತ ಸಾ.ರಾ.ಮಹೇಶ್

ಒಂದು ಹಂತದಲ್ಲಿ ಸರಕಾರದಿಂದ ಸೂಕ್ತ ಉತ್ತರ ಬಾರದೇ ಇದ್ದಾಗ, ಸಭಾಪತಿ ಪೀಠದ ಮುಂದೆ ಧರಣಿ ಕೂತ ಸಾ.ರಾ.ಮಹೇಶ್ ಅವರನ್ನು ಸ್ಪೀಕರ್ ಮತ್ತು ಕಾನೂನು ಸಚಿವರು ಸಮಾಧಾನಪಡಿಸಿ, ಆಸನದಲ್ಲಿ ವಾಪಸ್ ಕೂರಿಸಿದರು. "ಶಾಸಕನಾಗಿ ಕೆಲಸ ಮಾಡಲು ಅಡಚಣೆ ಉಂಟಾದರೆ ಹಕ್ಕುಚ್ಯುತಿಯಾಗುತ್ತದೆ, ಶಿಷ್ಟಾಚಾರವನ್ನು ಅವರು ಉಲ್ಲಂಘಿಸಿದರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲು ಡಿಪಿಎಆರ್‌ಗೆ ಸೂಚಿಸುತ್ತೇವೆ" ಎಂದು ಮಾಧುಸ್ವಾಮಿ ಹೇಳಿದರು.

 ರೋಹಿಣಿ ಸಿಂಧೂರಿ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚನೆ

ರೋಹಿಣಿ ಸಿಂಧೂರಿ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚನೆ

"ಸರಕಾರ ನಿಮ್ಮ ಜೊತೆಗೆ ಇದೆ, ಖಾಸಗಿಯಾಗಿಯೂ ನಿಮಗೆ ಈ ಮಾತನ್ನು ಹೇಳಿದ್ದೇನೆ. ನಿಮ್ಮ ಆರೋಪ ಮೇಲ್ನೋಟಕ್ಕೆ ಸರಿ ಎಂದು ಕಾಣಿಸಿರುವುದರಿಂದ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇವೆ. ಬ್ಯಾಗ್ ಖರೀದಿಯ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದೆ"ಎಂದು ಮಾಧುಸ್ವಾಮಿ ಹೇಳಿದಾಗ, ಶಾಸಕ ಸಾ.ರಾ.ಮಹೇಶ್ ತಣ್ಣಗಾದರು.

 ಸರಕಾರಿ ಭೂ ಒತ್ತುವರಿ ಮಾಡಿ ಸಾ.ರಾ.ಮಹೇಶ್ ಅವರು ಚೌಲ್ಟ್ರಿ ಕಟ್ಟಿಸಿದ್ದಾರೆ

ಸರಕಾರಿ ಭೂ ಒತ್ತುವರಿ ಮಾಡಿ ಸಾ.ರಾ.ಮಹೇಶ್ ಅವರು ಚೌಲ್ಟ್ರಿ ಕಟ್ಟಿಸಿದ್ದಾರೆ

ಸರಕಾರಿ ಭೂ ಒತ್ತುವರಿ ಮಾಡಿ ಸಾ.ರಾ.ಮಹೇಶ್ ಅವರು ಚೌಲ್ಟ್ರಿ ಕಟ್ಟಿಸಿದ್ದಾರೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮಹೇಶ್ ಒತ್ತಾಯಿಸಿದ್ದರು, ಬಳಿಕ ಪುನ: ಸರ್ವೇ ಮಾಡಲಾಗಿತ್ತು. ಹಳ್ಳದ ಮೇಲೆ ಚೌಲ್ಟ್ರಿ ನಿರ್ಮಿತವಾಗಿಲ್ಲ. ಹಳ್ಳದ ಜಾಗವನ್ನು ಒತ್ತುವರಿ ಮಾಡಿಲ್ಲ. ಕೆಲವು ಕಡೆ 72.73.74 ಅಳತೆಯಲ್ಲಿ ಕಂಡು ಬರುತ್ತದೆ ಎಂದು ಜಿಲ್ಲಾಧಿಕಾರಿಗಳು ಮಹೇಶ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

English summary
JDS MLA Sa Ra Mahesh Lashes Out At Rohini Sindhuri In Karnataka Assembly Session, urges privilege motion against former Mysuru DC Rohini Sindhuri. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X