ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್‌ನಲ್ಲಿ ಮಾಜಿ ಸಚಿವ ಸಾರಾ ಮಹೇಶ್

|
Google Oneindia Kannada News

ಮೈಸೂರು, ಜುಲೈ 6: ಮಾಜಿ ಸಚಿವ ಸಾರಾ ಮಹೇಶ್‌ರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್ ಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅವರ ಸಂಪರ್ಕ ಹೊಂದಿದ್ದ ಕಾರಣ ಸಾರಾ ಮಹೇಶ್‌ರನ್ನು ಕ್ವಾರಂಟೈನ್ ಮಾಡಲಾಗಿದೆ.

Recommended Video

Chinese Army Vacates Galwan | Oneindia Kannada

ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹಬ್ಬುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್ ಗೆ ಸಹ ಸೋಂಕು ತಗುಲಿದ್ದು, ಇದರಿಂದ ಸಾರಾ ಮಹೇಶ್ ಕ್ವಾರಂಟೈನ್‌ನಲ್ಲಿ ಇರುವಂತಾಗಿದೆ.

ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!

ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಸಾ.ರಾ ಮಹೇಶ್ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸೀಲ್‍ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಹೀಗಾಗಿ, ತಹಶೀಲ್ದಾರ್ ಜೊತೆಗೆ ಸಂಪರ್ಕದಲ್ಲಿ ಇದ್ದ ಕಾರಣ ಕ್ವಾರಂಟೈನ್ ಮಾಡಲಾಗಿದೆ.

Coronavirus Former Minister Sa Ra Mahesh In Quarantine

ಸಾರಾ ಮಹೇಶ್ ತಹಶೀಲ್ದಾರ್ ಜೊತೆಗೆ ಕೆ.ಆರ್.ನಗರದ ಬ್ರಾಹ್ಮಣರ ಬೀದಿ ಹಾಗೂ ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬದವರಿಗೆ ಅಗತ್ಯ ವಸ್ತುಗಳು ಹಾಗೂ ಪಡಿತರ ದಿನಸಿ ಪದಾರ್ಥ ಔಷಧಿಗಳನ್ನು ವಿತರಿಸಿದ್ದರು.

ಕರ್ನಾಟಕದಲ್ಲಿ ಕೊರೊನಾ ಕಾಟ ಹೆಚ್ಚಾಗಿದೆ. ನಿನ್ನೆ ಬರೋಬ್ಬರಿ 1925 ಮಂದಿಗೆ ಸೋಂಕು ಹರಡಿದೆ. ಮೈಸೂರಿನ 25 ಮಂದಿಗೆ ನಿನ್ನೆ ಕೊರೊನಾ ಸೋಂಕು ಅಂಟಿದೆ.

English summary
Coronavirus in mysore: Former minister Sa Ra Mahesh in quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X