ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀತಿ ಸಂಹಿತೆ ಹಿನ್ನೆಲೆ; ಶಾಸಕ ಸಾ.ರಾ. ಮಹೇಶ್ ಪತ್ರಿಕಾಗೋಷ್ಠಿಗೆ ಬ್ರೇಕ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 4: ಚುನಾವಣಾ ನೀತಿ ಸಂಹಿತೆ ಅಡ್ಡಿ ಹಿನ್ನೆಲೆ ಮಾಜಿ ಸಚಿವ ಸಾ.ರಾ.ಮಹೇಶ್ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಲಾಯಿತು.

ರಮಾ ವಿಲಾಸ ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ನಾಯಕರು ಸುದ್ದಿಗೋಷ್ಠಿ ಹಾಗೂ ಬಹಿರಂಗ ಹೇಳಿಕೆಯನ್ನು ನೀಡದಂತೆ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಸಂದೇಶ ರವಾನಿಸಿದರು.

ಉಪ ಚುನಾವಣಾ ಪ್ರಚಾರ ಮುಕ್ತಾಯ; ನಡೆದಿದೆ ಕೊನೆ ಕ್ಷಣದ ಕಸರತ್ತು!ಉಪ ಚುನಾವಣಾ ಪ್ರಚಾರ ಮುಕ್ತಾಯ; ನಡೆದಿದೆ ಕೊನೆ ಕ್ಷಣದ ಕಸರತ್ತು!

ಮಾತ್ರವಲ್ಲದೆ, ನಿನ್ನೆ ಸಂಜೆ ‌(ಡಿ.3) 6 ಗಂಟೆಯಿಂದ ಮತದಾನ ಮುಕ್ತಾಯವಾಗುವವರೆಗೂ ರಾಜಕೀಯ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡುವುದು ಪ್ರಜಾಪ್ರಾತಿನಿದ್ಯ ಕಾಯ್ದೆ 1951ರ ಸೆಕ್ಷನ್ 126ರ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Sa Ra Mahesh Cancelled Press Conference On Behalf Of Election Code Of Conduct

ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದುಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು

ಮಾಧ್ಯಮಗಳು ಸಹ‌ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಈ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಸಾ.ರಾ.ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡದೇ ಸುದ್ದಿಗೋಷ್ಠಿ ರದ್ದುಗೊಳಿಸಿದರು. ಅಲ್ಲದೆ ಚುನಾವಣೆ ಬಳಿಕ ಮಾತನಾಡುವುದಾಗಿ ಹೇಳಿದರು.

English summary
Former Minister Sa ra Mahesh's press conference was curtailed following the disruption of the Election Code. The news conference was called at 11 am today at the MLA's office on Rama Vilas Road in mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X