ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರಾ ಯದುವೀರ್?

|
Google Oneindia Kannada News

Recommended Video

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರವಾಸೋದ್ಯಮ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರಾ?

ಮೈಸೂರು, ಸೆಪ್ಟೆಂಬರ್ 20 : ಪ್ರವಾಸೋದ್ಯಮ ಇಲಾಖೆಗೆ ಹಳೆ ಮೈಸೂರು ಭಾಗದ ರಾಯಭಾರಿ ಆಗುವಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಮನವಿ ಮಾಡಿದ್ದಾರೆ.

ಇದೇ ವಿಚಾರವಾಗಿ ಸಚಿವರು, ಯದುವೀರ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಯದುವೀರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಹೇಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪಸಿದ್ಧರನ್ನು ರಾಯಭಾರಿಗಳಾಗಿ ಬಳಸಿಕೊಳ್ಳಲು ಸಚಿವರು ಯೋಜಿಸಿದ್ದಾರೆ.

ಅಂಬಾರಿ ವಿಚಾರದ ಬಗ್ಗೆ ಅಮ್ಮನನ್ನೇ ಕೇಳಿ: ಯದುವೀರ್ ಒಡೆಯರ್ ಅಂಬಾರಿ ವಿಚಾರದ ಬಗ್ಗೆ ಅಮ್ಮನನ್ನೇ ಕೇಳಿ: ಯದುವೀರ್ ಒಡೆಯರ್

ಹಳೆ ಮೈಸೂರು ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯದುವೀರ್ ಅವರ ವರ್ಚಸ್ಸು ಬಳಸಿಕೊಳ್ಳಬೇಕೆಂಬುದು ಸಚಿವರ ಆಲೋಚನೆ. ಇನ್ನು ಯದುವೀರ್ ಕೂಡ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ತಮ್ಮ ತಾಯಿಯವರನ್ನು ಕೇಳಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

SA RA Mahesh appealed to Yaduveer Wadiyar to become Ambassador of the Tourism Department

"ಯದುವಂಶದ ಕೊನೆಯ ರಾಜ ಹಾಗೂ ರಾಜ್ಯದ ಮೊದಲ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಂದೆ) ಜನ್ಮಶತಮಾನೋತ್ಸವ ಅಂಗವಾಗಿ ಅವರ ಭಾವಚಿತ್ರವನ್ನು ಈ ಬಾರಿ ದಸರಾ ಮಹೋತ್ಸವದ ಎಲ್ಲಾ ಭಿತ್ತಿ ಪತ್ರ(ಪೋಸ್ಟರ್) ಗಳಲ್ಲೂ ಹಾಕಿಸಲಾಗುವುದು.

ಮಂಡ್ಯದ ಪ್ರವಾಸಿ ತಾಣಗಳಲ್ಲಿ ಪುಂಡರ ಹಾವಳಿ, ಹದ್ದಿನ ಕಣ್ಣಿಟ್ಟ ಪೊಲೀಸ್ಮಂಡ್ಯದ ಪ್ರವಾಸಿ ತಾಣಗಳಲ್ಲಿ ಪುಂಡರ ಹಾವಳಿ, ಹದ್ದಿನ ಕಣ್ಣಿಟ್ಟ ಪೊಲೀಸ್

ಇದು ಸರ್ಕಾರ ಅವರಿಗೆ ಸಲ್ಲಿಸುವ ಗೌರವ" ಎಂದು ಸಚಿವರು ತಿಳಿಸಿದ್ದು ಇದಕ್ಕೆ ಯದುವೀರ್ ಅವರೂ ಒಪ್ಪಿಗೆ ಸೂಚಿಸಿದ್ದಾರೆ.

English summary
Tourism and Silk Minister SA RA Mahesh appealed to Yaduveer Krishnadatta Chamaraja Wadiyar to become Ambassador of the Old Mysore to the Tourism Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X