ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ಉಚಿತ, ಕಡ್ಡಾಯ ಶಿಕ್ಷಣ ಎಡವಟ್ಟಿನ ಗೋಳು ಕೇಳೋರಿಲ್ಲ

|
Google Oneindia Kannada News

ಮೈಸೂರು, ಮೇ 18 : ದೇಶದಲ್ಲಿ 6 ರಿಂದ 14 ವರ್ಷ ವಯೋಮಿತಿಯ ಎಲ್ಲ ಮಕ್ಕಳಿಗೆ ಯಾವುದೇ ಬೇಧ - ಭಾವವಿಲ್ಲದೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತಿದೆ. ಅಲ್ಲದೆ ತನ್ನ ಮೂಲ ಉದ್ದೇಶವನ್ನೇ ಮರೆಯುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.

ಎಲ್ಲಾ ಜಾತಿ - ಧರ್ಮದ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಬೇಕೆಂದು ಜಾರಿಗೆ ತಂದ ಆರ್ ಟಿ ಇ ದುರುಪಯೋಗವಾಗುತ್ತಿದ್ದು ಅರ್ಹ ಮಕ್ಕಳಿಗೆ ಇದರ ಲಾಭ ದೊರೆಯುತ್ತಿಲ್ಲ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆರ್‍ಟಿಇ ಕಾಯ್ದೆಯ ಈ ತಿದ್ದುಪಡಿ ಯಿಂದಾಗಿ ಕೇವಲ ಆಧಾರ್ ಕಾರ್ಡ್ ಮಾನದಂಡದಡಿ ಶಾಲೆಗಳಿಗೆ ದಾಖಲಾತಿ ನೀಡುವುದಾದರೆ ಇಂತಹ ವಲಸಿಗರೂ ಕೂಡ ಫಲಾನುಭವಿಗಳಾಗಿ ಮಾರ್ಪಡುವ ಅಪಾಯವಿದೆ.

ಸರ್ಕಾರಿ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿಯಲ್ಲಿ ಆರ್‌ಟಿಇ ಸೀಟು ಸರ್ಕಾರಿ ಶಾಲೆಗಳಿಲ್ಲದಿದ್ದರೆ ಮಾತ್ರ ಖಾಸಗಿಯಲ್ಲಿ ಆರ್‌ಟಿಇ ಸೀಟು

ಶಿಕ್ಷಣ ಇಲಾಖೆಯ ಅವೈಜ್ಞಾನಿಕ ತೀರ್ಮಾನ ಇಂದು ಅರ್ಹ ಮಕ್ಕಳ ಪ್ರವೇಶಕ್ಕೆ ಅಡ್ಡಿಯಾಗಿದೆ. ಕಳೆದ ಬಾರಿ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ 650 ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳನ್ನು ಈ ಕಾಯ್ದೆಯಡಿ ಒಳಪಡಿಸಲಾಗಿತ್ತು. 5644 ಸೀಟುಗಳು ಲಭ್ಯವಿದ್ದವು. 4335 ಮಂದಿ ಪ್ರವೇಶ ಪಡೆದಿದ್ದರು. ಆದರೆ ಈ ಬಾರಿ ಕೇವಲ 122 ಶಾಲೆಯಲ್ಲಿ 1011 ಸೀಟುಗಳನ್ನು ಮೀಸಲಿರಿಸಲಾಗಿದೆ.

ಬಲಿಷ್ಠರು, ಉಳ್ಳವರಿಗೆ ಹೆಚ್ಚು ಲಾಭ

ಬಲಿಷ್ಠರು, ಉಳ್ಳವರಿಗೆ ಹೆಚ್ಚು ಲಾಭ

ಬಲಿಷ್ಠರು, ಉಳ್ಳವರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೇಂದ್ರ ಸರ್ಕಾರವು ರೂಪಿಸಿದ ಶಾಸನ ಕಾಯಿದೆಯಾಗಿ 2009 ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿದ್ದು , 2010 ಏಪ್ರಿಲ್ 1 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.

ಸರ್ಕಾರಿ ಶಾಲೆ ಇರುವ ಕಡೆ ಖಾಸಗಿ ಆರ್‌ಟಿಇ ಸೀಟು ಇಲ್ಲ ಸರ್ಕಾರಿ ಶಾಲೆ ಇರುವ ಕಡೆ ಖಾಸಗಿ ಆರ್‌ಟಿಇ ಸೀಟು ಇಲ್ಲ

ಶೇ 25ರಷ್ಟು ಸೀಟನ್ನು ಆರ್‌ಟಿಇ ಅಡಿಯಲ್ಲಿ ನೀಡಬೇಕು

ಶೇ 25ರಷ್ಟು ಸೀಟನ್ನು ಆರ್‌ಟಿಇ ಅಡಿಯಲ್ಲಿ ನೀಡಬೇಕು

ಕರ್ನಾಟಕದಲ್ಲಿ ಇದು 2012-13 ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬಂದರೆ, ಖಾಸಗಿ ಶಾಲೆಗಳಲ್ಲಿ ಶೇ.25ರಷ್ಟು ಸೀಟನ್ನು ಆರ್ ಟಿ ಇ ಅಡಿಯಲ್ಲಿ ನೀಡುವ ಉದ್ದೇಶ ಇದಾಗಿತ್ತು. ಆದರೆ ನಂತರದ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಬಂದ ಹಿನ್ನೆಲೆ, ಎಚ್ಚೆತ್ತ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳು ಇಲ್ಲದ ವಾರ್ಡ್ ವ್ಯಾಪ್ತಿಯಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಈ ಸೀಟುಗಳನ್ನು ಆರ್ ಟಿ ಇ ಅಡಿಯಲ್ಲಿ ವಿತರಣೆ ಮಾಡುವ ಆದೇಶ ಹೊರಡಿಸಿತ್ತು.

ಆರ್ ಟಿಇ: ಕೇರಳ ಮಾದರಿ ಕರ್ನಾಟಕದಲ್ಲೂ ಅನುಷ್ಠಾನಗೊಳ್ಳುವುದೇ? ಆರ್ ಟಿಇ: ಕೇರಳ ಮಾದರಿ ಕರ್ನಾಟಕದಲ್ಲೂ ಅನುಷ್ಠಾನಗೊಳ್ಳುವುದೇ?

ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಬಳಿಕ ಏನಾಗಿದೆ

ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಬಳಿಕ ಏನಾಗಿದೆ

ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿ ತಂದು ಸರ್ಕಾರಿ ಶಾಲೆಗಳ ಸೀಟು ಭರ್ತಿ ಮೊದಲ ಆದ್ಯತೆ ನೀಡಲು ರಾಜ್ಯ ಸರ್ಕಾರ ಮುಂದಾಯಿತು. ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ವರದಾನವಾಗಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಈಗ ಗಣನೀಯ ಪ್ರಮಾಣದಲ್ಲಿ ಸೀಟುಗಳು ಕಡಿಮೆಯಾಗಿದೆ.

ಆಧಾರ್ ಹೊರತುಪಡಿಸಿ ಇನ್ಯಾವುದೇ ದಾಖಲೆ ಬೇಡ

ಆಧಾರ್ ಹೊರತುಪಡಿಸಿ ಇನ್ಯಾವುದೇ ದಾಖಲೆ ಬೇಡ

ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶಾಲೆಗಳವರು ಆಧಾರ್ ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು ಪರಿಶೀಲಿಸಬಾರದು ಎಂದು ಕಟ್ಟಪ್ಪಣೆ ವಿಧಿಸಿರುವ ಕಾರಣ ಅರ್ಹ ಫಲಾನುಭವಿಗಳು ವಂಚಿತರಾಗುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಹೇಳಲಾಗಿದೆ. ತಾವು ವಾಸಿಸುವ ವಾರ್ಡ್ ವ್ಯಾಪ್ತಿ ಯಲ್ಲಿ ಆರ್‍ಟಿಇಗೆ ಒಳಪಡುವ ಶಾಲೆಗಳು ಇಲ್ಲದಿದ್ದರೆ ಅಂತಹ ಶಾಲೆಗಳಿರುವ ವಾರ್ಡ್ ವ್ಯಾಪ್ತಿ ವಿಳಾಸಕ್ಕೆ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈಗಾಗಲೇ ಬಾಂಗ್ಲಾ ಸೇರಿದಂತೆ ಇತರ ದೇಶಗಳ ವಲಸಿಗರು ಭಾರತದ ಯಾವುದಾದರೂ ವಿಳಾಸದಲ್ಲಿ ಆಧಾರ್ ಕಾರ್ಡ್ ಪಡೆಯುವುದು ಅತ್ಯಂತ ಸುಲಭವಾಗಿದೆ ಹಾಗೂ ಹಲವಾರು ವಲಸಿಗರು ಇದೇ ರೀತಿ ಆಧಾರ್ ಕಾರ್ಡ್ ಪಡೆದಿದ್ದಾರೆ.

English summary
RTE Children Parents are criticizing the new rules of Government for school admission. They are made complain that, know children’s get enrolled in unaided private schools only if there are no government schools in their locality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X