ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

OLX ಹೆಸರಿನಲ್ಲಿ ಜನರಿಗೆ 12 ಲಕ್ಷ ರೂ. ವಂಚಿಸಿದ್ದವನ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 30: OLX ನಲ್ಲಿ ನಕಲಿ ಜಾಹೀರಾತು ಪ್ರಕಟಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪಿಯನ್ನು ಮೈಸೂರಿನ ತಿಲಕ್‌ ನಗರ ಪೊಲೀಸರು ಬಂಧಿಸಿದ್ದಾರೆ. ಆತನಿಂದ 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕನಕಪುರ ತಾಲ್ಲೂಕಿನ ಎನ್‌.ಮಂಜುನಾಥ್‌ ಎಂದು ಗುರುತಿಸಲಾಗಿದ್ದು, ಈತನು OLX ನಲ್ಲಿ ವಾಹನ ಮಾರಾಟಕ್ಕಿದೆ ಎಂದು ತನ್ನ ನಕಲಿ ಹೆಸರುಗಳಲ್ಲಿ ಜಾಹೀರಾತು ಪ್ರಕಟಿಸುತ್ತಿದ್ದ. ಗ್ರಾಹಕರಿಗೆ ವಾಹನ ತನ್ನ ಸಂಬಂಧಿಕರದ್ದು ಅವರು ಬೀಝಿ ಇದ್ದಾರೆ ಹಾಗಾಗಿ ನನಗೆ ಒಪ್ಪಿಸಿದ್ದಾರೆ ಎಂದು ನಂಬಿಸಿ ಮೋಸ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

ಬೈಕ್, ಮೊಬೈಲ್ ಆಸೆಗಾಗಿ 4 ತಿಂಗಳ ಮಗುವನ್ನು ಮಾರಿದ ತಂದೆ-ತಾಯಿಬೈಕ್, ಮೊಬೈಲ್ ಆಸೆಗಾಗಿ 4 ತಿಂಗಳ ಮಗುವನ್ನು ಮಾರಿದ ತಂದೆ-ತಾಯಿ

ಅಲ್ಲದೇ, ವಾಹನ ಮಾರಾಟ ಮಾಡುವ ಮಾಲೀಕರಿಗೆ, ವಾಹನ ಖರೀದಿಸುವವರು ನನ್ನ ಸಂಬಂಧಿಕರು ಎಂದು ನಂಬಿಸಿದ್ದಾನೆ. ಆ ಮೂಲಕ ವಾಹನ ಖರೀದಿದಾರ ಹಾಗೂ ಮಾರಾಟಗಾರ ಇಬ್ಬರಿಗೂ ವಂಚಿಸಿದ್ದಾನೆ. ವಾಹನ ಖರೀದಿಸುವವನಿಂದ ಹಣ ಪಡೆಯುತ್ತಿದ್ದಂತೆ ಪರಾರಿಯಾಗಿದ್ದಾನೆ.

Mysuru: Rs 12 lakhs Fraud In The Name Of OLX, One Arrested

ಈ ರೀತಿಯ ವಂಚನೆಯಿಂದ ಸುಮಾರು 12 ಲಕ್ಷ ರೂ. ಗಳಿಸಿದ್ದ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಆರೋಪಿಯು ಬೆಂಗಳೂರು ಹಾಗೂ ಮೈಸೂರಿನ ಹಲವು ಕಡೆ ಸಾರ್ವಜನಿಕರನ್ನು ನಂಬಿಸಿ ವಂಚಿಸಿದ್ದಾನೆ.

ಈತನ ಬಳಿಯಿದ್ದ 9 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳು, ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, ವಾಚ್, ಗೃಹ ಉಪಯೋಗಿ ವಸ್ತುಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಿಲಕ್‌ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

English summary
An one accused of defrauding the public by posting fake advertisements on OLX, Tilak Nagar police in Mysuru have arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X