ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್‌ರಿಂದ ಆಯುಧ ಪೂಜೆ ಸಂಭ್ರಮ

|
Google Oneindia Kannada News

ಮೈಸೂರು, ಅಕ್ಟೋಬರ್ 14: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು, ವಿಶ್ವವಿಖ್ಯಾತ ದಸರಾ ಹಬ್ಬಕ್ಕಾಗಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು ಹೆಜ್ಜೆ ಹೆಜ್ಜೆಗೂ ಕಣ್ಮನ ಸೆಳೆಯುತ್ತಿದೆ.

ಈ ಬಾರಿ ಸರಳ ದಸರಾ ಆಚರಣೆಯ ನಡುವೆಯೂ, ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗಳ ತಾಲೀಮು, ವಿದ್ಯುದ್ದೀಪಗಳಿಂದ ಝಗಮಗಿಸುವ ಅಂಬಾವಿಲಾಸ ಅರಮನೆ, ನಗರದಾದ್ಯಂತ ಪ್ರವಾಸಿಗರ ದಂಡು, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ನಿಜಕ್ಕೂ ನಯನ ಮನೋಹರವಾಗಿದೆ.

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಡಗರ
ಇನ್ನು ಮಹಾನವಮಿ ಅಂಗವಾಗಿ ಗುರುವಾರ ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯ ಆಯುಧ ಪೂಜೆ ನಡೆಯಿತು. ಆಯುಧ ಪೂಜೆ ನಿಮಿತ್ತ ಬೆಳಗ್ಗೆ 5.30ರಿಂದ ಅರಮನೆಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು. ನಂತರ ಬೆಳಿಗ್ಗೆ 7.45ರ ಸುಮಾರಿಗೆ ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇಗುಲಕ್ಕೆ ರಾಜರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಕತ್ತಿ ಪಲ್ಲಕ್ಕಿ ಸೇರಿ ಎಲ್ಲಾ ಆಯುಧಗಳನ್ನು ತಂದು ಪೂಜೆ ಮಾಡಲಾಯಿತು.

Royal Family Performs Ayudha Pooja At Mysuru Palace

ಪೂರ್ಣಕುಂಭ ಹೊತ್ತ ಮಹಿಳೆಯರು ಜೊತೆಗೆ ರಾಜ ಪರಿವಾರದವರು ಭಾಗಿಯಾಗಿರುವ ಮೆರವಣಿಗೆ ಸೋಮೇಶ್ವರ ದೇಗುಲ ತಲುಪಿತು. ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಆಗಮಿಸಿತು.

ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್‌ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ. ತಮ್ಮ ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ ಈಟಿ ಸೇರಿದಂತೆ ರಾಜಮನೆತನದ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.‌ ಇದರ ಜೊತೆಗೆ ರಾಜಪರಿವಾರದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಕತ್ತಿ, ಪಟ್ಟದ ಪಲ್ಲಕ್ಕಿ, ಕಾರುಗಳಿಗೂ ಪೂಜೆ ಸಲ್ಲಿಸಲಾಗುವುದು.

ಇನ್ನು ಯದುವೀರ ಕೃಷದತ್ತ ಚಾಮರಾಜ ಒಡೆಯರ್‌ ಪೂಜೆ ನಂತರ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಕತ್ತಿ, ಪಲ್ಲಕ್ಕಿ ತಂದು ಪೂಜೆ ನೆರವೇರಿಸಲಾಗುತ್ತದೆ. ಕೋಡಿ ಸೋಮೇಶ್ವರ ದೇವಾಲಯದಲ್ಲಿ ಯದುವಂಶ ಪ್ರಾರಂಭವಾಗಿದ್ದು, ಈ ಕಾರಣದಿಂದಲೇ ಅಲ್ಲಿಂದಲೇ ಮೊದಲ ಪೂಜೆ ಹಾಗೂ ಕೊನೆ ಪೂಜೆ ಕೂಡ ಎಂದು ಅರಮನೆ ಪುರೋಹಿತ ಸುಬ್ರಮಣ್ಯ ತಿಳಿಸಿದ್ದಾರೆ.

Royal Family Performs Ayudha Pooja At Mysuru Palace

ಮೈಸೂರಿಗರಿಂದ ಸರಳ ದರಸಾ ಆಚರಣೆ
ಮತ್ತೊಂದೆಡೆ ಈ ಬಾರಿ ಸರಳ ದಸರಾ ಹಿನ್ನಲೆಯಲ್ಲಿ ಮೈಸೂರಿಗರು ಕೂಡ ಸರಳವಾಗಿ ಆಯುಧ ಪೂಜೆಯನ್ನು ಆಚರಿಸುತ್ತಿದ್ದಾರೆ. ಕೊರೊನಾ ಸೋಂಕು ಭೀತಿ ಹಾಗೂ ಆರೋಗ್ಯ ದೃಷ್ಟಿಯಿಂದ ಜನರೇ ಈ ಬಾರಿ ಆಯುಧ ಪೂಜೆಯನ್ನು ಸರಳವಾಗಿ ಮನೆಯಲ್ಲೇ ಪೂಜೆ ಮಾಡಿ, ವಾಹನಗಳಿಗೆ ಅಲಂಕಾರವನ್ನು ಮಾಡಿ ದೇವಸ್ಥಾನಕ್ಕೆ ಬಂದು ಪೂಜೆಗಳನ್ನು ಮಾಡಿಸುತ್ತಿದ್ದಾರೆ.

ಮೈಸೂರಿನ ಸಿಟಿ‌ ಮಾರ್ಕೆಟ್‌ನಲ್ಲಿ ಈ ಬಾರಿ‌ ತಕ್ಕ ಮಟ್ಟಿನ ವ್ಯಾಪಾರ ನಡೆದಿದೆ. ಆದರೆ ಕೊರೊನಾ ಪೂರ್ವದ ವ್ಯಾಪಾರ ಈಗ ಇಲ್ಲ. ಆದರೂ ಕೂಡ ಜನ ಸಂಪ್ರದಾಯವನ್ನು ಬಿಡದೆ ಸರಳವಾಗಿ ಆಯುಧ ಪೂಜೆಯನ್ನು ಆಚರಿಸುತ್ತಿದ್ದಾರೆ.

ಮಾವುತರು, ಕಾವಾಡಿಗಳು, ಸಿಬ್ಬಂದಿಗೆ ಉಪಾಹಾರ ಬಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಪ್ರತಿ ವರ್ಷದಂತೆ ಈ ಬಾರಿಯೂ ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಪಹಾರದ ವ್ಯವಸ್ಥೆ ಮಾಡಿಸಿದ್ದು, ಅರಮನೆ ಆವರಣದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಶೋಭಾ ಕರಂದ್ಲಾಜೆ ಉಪಹಾರ ಬಡಿಸಿದ್ದಾರೆ.

ಮಸಾಲೆ ದೋಸೆ, ಇಡ್ಲಿ, ಚಟ್ನಿ, ಸಾಂಬಾರು, ವೆಜೆಟೆಬಲ್ ಪಲಾವ್, ದಂಬರೋಟು ಖಾರ ಪೊಂಗಲ್, ಹುಳಿ ಗೊಜ್ಜು, ಉದ್ದಿನ ವಡೆ, ತರಕಾರಿ ಉಪ್ಪಿಟ್ಟು ಬಡಿಸಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ದಸರಾ ಆನೆಗಳಿಗೆ ಪೂಜೆ ಸಲ್ಲಿಸಿ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದರು.

English summary
Royal Family Performs Ayudha Pooja At Mysuru Palace. The Ayudha Pooja began at the palace from 5.30 am on thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X