ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾನ್ಯರಂತೆ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಯದುವೀರ್ ದಂಪತಿ

|
Google Oneindia Kannada News

Recommended Video

ಮೈಸೂರಿನ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗು ತ್ರಿಶಿಕಾ ಒಡೆಯರ್

ಮೈಸೂರು, ಜೂನ್ 17: ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಭಾನುವಾರ ಪತ್ನಿ ತ್ರಿಷಿಕಾ ಕುಮಾರಿ ಜತೆ ದೇವರಾಜ ಮಾರುಕಟ್ಟೆಗೆ ದಿಢೀರ್‌ ಭೇಟಿ ನೀಡಿದರು. ವ್ಯಾಪಾರಿಗಳೊಂದಿಗೆ ಆಪ್ತವಾಗಿ ಚರ್ಚಿಸಿ, ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿದರು.

ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಆದೇಶಿಸಿಲ್ಲ: ಯದುವೀರ್ ಒಡೆಯರ್ದೇವರಾಜ ಮಾರುಕಟ್ಟೆ ಕೆಡವಲು ಕೋರ್ಟ್ ಆದೇಶಿಸಿಲ್ಲ: ಯದುವೀರ್ ಒಡೆಯರ್

ಮಾರುಕಟ್ಟೆಗೆ ತೆರಳಿ ಸೊಪ್ಪು, ತರಕಾರಿ ಖರೀದಿಸುವ ಮೂಲಕ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಆಶ್ಚರ್ಯ ಮೂಡಿಸಿದರು. ಪತ್ನಿ ತ್ರಿಷಿಕಾ ಅವರು ದೇವರಾಜ ಮಾರುಕಟ್ಟೆಯನ್ನು ವೀಕ್ಷಿಸಿದ್ದಲ್ಲದೆ ಮಾರುಕಟ್ಟೆಯಲ್ಲಿ ಸೊಪ್ಪು, ತರಕಾರಿ, ನೇರಳೆ ಹಾಗೂ ನಂಜನಗೂಡು ರಸಬಾಳೆಯನ್ನು ಖರೀದಿಸಿ, ವ್ಯಾಪಾರಿಗಳೊಂದಿಗೆ ಇಲ್ಲಿನ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದರು.

 ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡುವಂತೆ ಯದುವೀರ್ ಗೆ ಮನವಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡುವಂತೆ ಯದುವೀರ್ ಗೆ ಮನವಿ

ತ್ರಿಷಿಕಾ ಅವರು ಮಾರುಕಟ್ಟೆಯಲ್ಲಿ ಖರೀದಿಸಲು ಮುಂದಾದಾಗ ವ್ಯಾಪಾರಿಗಳು ದುಡ್ಡು ಪಡೆಯಲು ಹಿಂದೇಟು ಹಾಕಿದರು. ಕೈ ಮುಗಿದು ಹಣವನ್ನು ನಯವಾಗಿ ನಿರಾಕರಿಸಿದರು. ಆದರೆ ಇದಕ್ಕೆ ಬಗ್ಗದ ದಂಪತಿ ಬಲವಂತವಾಗಿ ಹಣ ನೀಡಿ ತರಕಾರಿ, ಸೊಪ್ಪು ಹಣ್ಣುಗಳನ್ನು ಖರೀದಿಸಿದರು. ನಂತರ ಮೈಸೂರಿನ ಗುರು ಸ್ವೀಟ್ ಮಾರ್ಟ್ ಗೆ ತೆರಳಿ ಮೈಸೂರು ಪಾಕ್ ಖರೀದಿಸಿದರು.

Royal couple visits Mysuru devaraja market and shopped

ರಾಜವಂಶಸ್ಥರು ಮಾರುಕಟ್ಟೆಗೆ ಬಂದು ಖುದ್ದಾಗಿ ತರಕಾರಿ ಖರೀದಿ ಮಾಡಿದ್ದು ರಾಜಪರಂಪರೆಯಲ್ಲಿಯೇ ಇದೆ ಮೊದಲು ಎನ್ನಲಾಗಿದೆ.

English summary
Royal couple visits Mysuru devaraja market and shopped vegetables. Trishika purchased fresh vegetables, greens and Nanjangud Rasabaale. couple Discussed closely with traders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X