ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ವಿವಾದ : ಕಟ್ಟಡಕ್ಕೆ ಕಾರ್ ಬಾಂಬ್ ಇಟ್ಟ ಭೂಪ!

|
Google Oneindia Kannada News

ಮೈಸೂರು, ಜು. 1 : ಮೈಸೂರಿನ ಜೆ.ಸಿ.ನಗರದ ಮೂರು ಅಂತಸ್ತಿನ ಕಟ್ಟಡವನ್ನು ಕಾರ್ ಬಾಂಬ್ ಇಟ್ಟು ಸ್ಫೋಟಿಸುವ ರೌಡಿ ಶೀಟರ್ ಪ್ರಯತ್ನ ವಿಫಲಗೊಂಡಿದೆ. ಕಾರ್ ಬಾಂಬ್ ಇಟ್ಟ ಆರೋಪಿಯನ್ನು ನಜರಾಬಾದ್‌ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ನಿವೇಶನ ತನ್ನ ವಶಕ್ಕೆ ಸಿಗಲಿಲ್ಲ ಎಂಬ ಸೇಡಿನಿಂದಾಗಿ ರೌಡಿಶೀಟರ್‌ ನಂಜುಂಡಿ ಶಿವರಾಜ್‌, ತಾನು ಕಣ್ಣು ಹಾಕಿದ್ದ ನಿವೇಶನದಲ್ಲಿ ನಿರ್ಮಾಣವಾಗುತ್ತಿದ್ದ ಮೂರು ಅಂತಸ್ತಿನ ಕಟ್ಟಡವನ್ನು ಕೆಡವಲು ಸಂಚು ರೂಪಿಸಿದ್ದ. ಆದರೆ, ಭಾನುವಾರ ತಡರಾತ್ರಿ ಆತನ ಪ್ರಯತ್ನ ವಿಫ‌ಲಗೊಂಡಿದ್ದು, ಸೋಮವಾರ ಶಿವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

Police

ಘಟನೆ ವಿವರ : ರೌಡಿಶೀಟರ್‌ ನಂಜುಂಡಿ ಶಿವರಾಜ್‌ ಜೆ.ಸಿ.ನಗರ ಮುಖ್ಯರಸ್ತೆಯಲ್ಲಿ ವೆಂಕಟೇಶ್‌ ಎಂಬುವವರ ನಿವೇಶನದ ಮೇಲೆ ಕಣ್ಣು ಹಾಕಿದ್ದ. ನಿವೇಶನವನ್ನು ತನಗೆ ನೀಡುವಂತೆ ಕೇಳಿದ್ದ. ಆದರೆ, ನಿವೇಶನ ನೀಡಲು ವೆಂಕಟೇಶ್‌ ನಿರಾಕರಿಸಿದ್ದರು. ನಂತರ ಆತ ಮಾಲೀಕತ್ವಕ್ಕೆ ತಕರಾರು ತೆಗೆದು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಪಡೆಯಲು ಯತ್ನಿಸಿದ್ದ. ವಿವಾದ ನ್ಯಾಯಾಲಕ್ಕೆ ಹೋಗಿ ತೀರ್ಪು ವೆಂಕಟೇಶ್ ಪರವಾಗಿ ಬಂದಿತ್ತು.

ವೆಂಕಟೇಶ್‌ ಆ ನಿವೇಶನದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿತ್ತು. ಆದರೆ, ನಿವೇಶನ ಕೈ ತಪ್ಪಿದ ಸೇಡು ಉಳಿಸಿಕೊಂಡಿದ್ದ ರೌಶಿ ಶೀಟರ್, ತನ್ನ ಕಾರನ್ನು ಬಾಂಬ್‌ ರೀತಿ ಸ್ಫೋಟಿಸಿ ಕಟ್ಟಡವನ್ನು ನೆಲಸಮಗೊಳಿಸಲು ಸಂಚು ರೂಪಿಸಿದ್ದ.

ತನ್ನ ಯೋಜನೆಯಂತೆ ನಂಜುಂಡಿ ಶಿವರಾಜ್‌ ಭಾನುವಾರ ರಾತ್ರಿ ತನ್ನ ಮಾರುತಿ 800 ಕಾರಿನ ಗ್ಯಾಸ್‌ ಕಿಟ್‌ ಪೈಪ್‌ ಕತ್ತರಿಸಿ, ಕಾರಿನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕಟ್ಟಡದ ನೆಲ ಮಹಡಿಗೆ ತಳ್ಳಿದ್ದಾನೆ. ಆದರೆ, ಕಾರು ಕಟ್ಟಡದ ಕಾಂಪೌಂಡ್‌ಗೆ ತಾಗಿ ಹೊರಗೆ ನಿಂತುಕೊಂಡಿದೆ.

ಕಟ್ಟಡದ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಕಂಡು ಭದ್ರತಾ ಸಿಬ್ಬಂದಿ ಕಟ್ಟಡದ ಮಾಲೀಕ ವೆಂಕಟೇಶ್‌ ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್ ಬರುವ ವೇಳೆಗೆ ಕಾರು ನಿಂತಿದ್ದ ಜಾಗದಲ್ಲಿಯೇ ಸ್ಫೋಟಗೊಂಡಿದೆ. ಕಟ್ಟಡದ ಹೊರಗೆ ಕಾರು ಸ್ಫೋಟಗೊಂಡಿದ್ದರಿಂದ ಕಟ್ಟಡಕ್ಕಾಗಲೀ, ಭದ್ರತಾ ಸಿಬ್ಬಂದಿಗಾಗಲಿ ಯಾವುದೇ ಹಾನಿಯಾಗಿಲ್ಲ.

ಘಟನೆಯ ಮಾಹಿತಿ ಪಡೆದ ನಜರಾಬಾದ್‌ ಪೊಲೀಸರು ಈ ಕೃತ್ಯ ರೌಡಿಶೀಟರ್‌ ನಂಜುಂಡಿ ಶಿವರಾಜ್‌ ಅವನದ್ದೇ ಎಂದು ಶಂಕಿಸಿ ಆತನನ್ನು ಸೋಮವಾರ ಬಂಧಿಸಿದಾಗ ಘಟನೆಯ ಸತ್ಯಾಂಶ ಬಯಲಾಗಿದೆ. ನಂಜುಂಡಿ ಶಿವರಾಜ್‌ ವಿರುದ್ಧ ನಗರದ ನಜರಾಬಾದ್‌, ಕೃಷ್ಣರಾಜ ಹಾಗೂ ವಿದ್ಯಾರಣ್ಯಪುರಂ ಠಾಣೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Mysore Nazarbad Police have arrested a rowdy-sheeter Nanjunda Shivaraj (40) who allegedly involved in case of car bomb blast case in J.C.Nagar in the city on Sunday night. Police said Nanjunda plans to damage the building by LPG-fitted Maruti 800 car and set it on fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X