ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣರಾಜ್ಯೋತ್ಸವ ಪರೇಡ್: ರಾಜ್‌ಪಥ್‌ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ

|
Google Oneindia Kannada News

ಮೈಸೂರು, ಜನವರಿ 26: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಜ.26) ನಡೆದ 73ನೇ ಗಣರಾಜ್ಯೋತ್ಸವದ ಐತಿಹಾಸಿಕ ಪರೇಡ್​ನಲ್ಲಿ ಭಾಗವಹಿಸಿದ್ದ ಎನ್​ಸಿಸಿ ತಂಡವನ್ನು ಮೈಸೂರಿನ ವಿದ್ಯಾರ್ಥಿನಿ ನೇತೃತ್ವ ವಹಿಸಿದ್ದರು. ಈ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ ನೇತೃತ್ವದ ಎನ್​ಸಿಸಿ ತಂಡ ಪಥಸಂಚಲನದಲ್ಲಿ ಭಾಗಿಯಾಗಿತ್ತು. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್ ಸಿಂಗ್ ಮತ್ತು ಪುಷ್ಪಾ ಕುನ್ವರ್ ದಂಪತಿಯ ಪುತ್ರಿಯಾಗಿರುವ ಪ್ರಮಿಳಾ, ಎನ್​ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ.

ಪ್ರಮೀಳಾ ಅವರ ತಂದೆ ಮೈಸೂರು ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್​ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಎನ್​ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡಿದೆ.

Republic Day 2022: Mysuru Student Prameela Kunwar Led By NCC Parade at Rajpath

ಮೈಸೂರಿನಿಂದ ಒಟ್ಟು 19 ಕೆಡೆಟ್​ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್​ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ನವದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್‌ಗಾಗಿ ಭಾರತದ 17 ಡೈರೆಕ್ಟೊರೇಟ್​ಗಳಿಂದ ಕೆಡೆಟ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ಎನ್‌ಸಿಸಿ ಕ್ಯಾಂಪ್​ನಲ್ಲಿ ಇವರು ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು, ಫ್ಯಾಗ್ ಏರಿಯಾ ಮತ್ತು ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.

ಕೊರೊನಾ ಸೋಂಕಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್​ಸಿಸಿ ಕ್ಯಾಂಪ್​ಗೆ ಆಯ್ಕೆ ಮಾಡುವ ಕೆಡೆಟ್‌ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್‌ನಿಂದ ಒಟ್ಟು 54 ಕೆಡೆಟ್​ಗಳನ್ನು ಆಯ್ಕೆ ಮಾಡಲಾಗಿದ್ದು, 2 ತಿಂಗಳ ಹಿಂದೆಯೇ ನವದೆಹಲಿ ತಲುಪಿದ್ದರು.

English summary
The Mysuru student Prameela Kunwar led by an NCC team that participated in the 73rd Republic Day Historic Parade at Rajpath in New Delhi today (Jan. 26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X