ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯಜ್ಜನಹುಂಡಿ ಕೆರೆ ಕಾಯಕಲ್ಪಕ್ಕೆ ಸೂಚನೆ ಕೊಟ್ಟ ಸಿಂಧೂರಿ

|
Google Oneindia Kannada News

ಮೈಸೂರು, ಫೆಬ್ರವರಿ 3 : ''ಕೇರ್ಗಳ್ಳಿ ಕೆರೆ, ದಟ್ಟಗಳ್ಳಿ ಸಮೀಪದ ಅಯ್ಯಜ್ಜನಹುಂಡಿ ಕೆರೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಕೆರೆಗಳಿಗೆ ಎರಡು ತಿಂಗಳೊಳಗಾಗಿ ಕಾಯಕಲ್ಪ ನೀಡಿ, ಕೆರೆ ಸ್ವರೂಪದಲ್ಲಿ ಕಾಣುವಂತೆ ಮಾಡಬೇಕು'' ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರದಂದು ಅಯ್ಯಜ್ಜನಹುಂಡಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು. ಬಳಿಕ ಅವರು, ಈ ಕೆರೆಗಳಿಗೆ ಕಾಯಕಲ್ಪ ನೀಡುವ ಸಂಬಂಧ ಮುಡಾ, ಮಹಾನಗರ ಪಾಲಿಕೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆಲಸ ವಹಿಸಿದರು.

ತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿತ್ರಿವಳಿ ಕೆರೆಗಳ ಸೌಂದರ್ಯಾಭಿವೃದ್ದಿಗೆ ಕ್ರಮ: ರೋಹಿಣಿ ಸಿಂಧೂರಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೇರ್ಗಳ್ಳಿ ಕೆರೆಯಲ್ಲಿ ಮೆಕ್ಕಲು ತೆಗೆಯಬೇಕು, ಬೇಲಿ ಹಾಕಬೇಕು. ಚರಂಡಿ ನೀರು ಒಳಚರಂಡಿಯ ಮೂಲಕವೇ ಹರಿಯುವಂತೆ ಸಂಪರ್ಕ ಮಾಡುವಂತೆ ತಿಳಿಸಿದರು.

Rejuvenation Kergalli, Dataggalli, Ajjayyanahundi Lake Underdway: DC Rohini Sindhuri

ಅಯ್ಯಜ್ಜನಹುಂಡಿ ಕೆರೆಯ ಕಾಯಕಲ್ಪ ಕೆಲಸವನ್ನು ಮಹಾನಗರ ಪಾಲಿಕೆ ವತಿಯಿಂದ ಮಾಡುವಂತೆ ತಿಳಿಸಿದರು. ಈ ಕೆರೆಗಳಿಗೆ ಬದು ನಿರ್ಮಾಣ ಮಾಡಿ, ನೀರು ತುಂಬಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಮಾಡುವಂತೆ ತಿಳಿಸಿದರು.

ಈ ಕೆರೆಗಳ ಸಮೀಪ ಕಟ್ಟಡ ತ್ಯಾಜ್ಯವನ್ನು ಯಾರೂ ಹಾಕಬಾರದು ಎಂಬ ಫಲಕವನ್ನು ಮಹಾನಗರ ಪಾಲಿಕೆ ಅಳವಡಿಸಬೇಕು. ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಬೇಕು ಎಂದು ಹೇಳಿದರು.

ಫ್ಲೆಕ್ಸ್, ಬ್ಯಾನರ್, ಬಾವುಟಗಳು, ಬಂಟಿಂಗ್ಸ್ ಹಾಕಿದ್ರೆ 6 ತಿಂಗಳ ಜೈಲು ಶಿಕ್ಷೆಫ್ಲೆಕ್ಸ್, ಬ್ಯಾನರ್, ಬಾವುಟಗಳು, ಬಂಟಿಂಗ್ಸ್ ಹಾಕಿದ್ರೆ 6 ತಿಂಗಳ ಜೈಲು ಶಿಕ್ಷೆ

ಈ ಸಂದರ್ಭದಲ್ಲಿ ಮುಡಾ ಆಯುಕ್ತ ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್, ಮಹಾನಗರ ಪಾಲಿಕೆ ವಲಯ ಅಧೀಕ್ಷಕ ಇಂಜಿನಿಯರ್ ಬಿಳಿಗಿರಿರಂಗಸ್ವಾಮಿ, ತಹಶೀಲ್ದಾರ್ ರಕ್ಷಿತ್, ಪಾಲಿಕೆ ಟಿ.ಎಸ್.ವಲಯ 3 ರ ಆಯುಕ್ತ ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಕರ್ನಾಟಕ ವಾರ್ತೆ)

English summary
Rejuvenation of Kergalli, Dataggalli, Ajjayyanahundi Lake Underdway said DC Rohini Sindhuri after inspecting the work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X