ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ರಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿ ಬಾರ್‌ ಮುಚ್ಚಿಸಿದ ಗ್ರಾಮಸ್ಥರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 13: ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಪ್ರಯತ್ನಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ನಡೆದಿದೆ.

Recommended Video

ಏನು?ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡ್ತಿರೋ ಈ ಯಂತ್ರದ ನಿಗೂಢ ರಹಸ್ಯ | Oneindia Kannada

ಕಳೆದ ಆರು ತಿಂಗಳಿಂದ ಈ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಓರ್ವ ವ್ಯಕ್ತಿ ಪ್ರಯತ್ನಿಸುತ್ತಿದ್ದರು. ಇದಕ್ಕೆ ಗ್ರಾಮಸ್ಥರು ಸಂಪೂರ್ಣ ವಿರೋಧ ವ್ಯಕ್ತಪಡಿಸಿ ತೆರೆಯಲು ಅವಕಾಶ ನೀಡಿರಲಿಲ್ಲ. ಈ ಸಂಬಂಧ ಅಧಿಕಾರಿಗಳಿಗೂ ಮನವಿ ಮಾಡಿದ್ದರು.

ಶನಿವಾರ, ಭಾನುವಾರ ಮೈಸೂರಿಗೆ ಹೋಗುವವರ ಗಮನಕ್ಕೆ ಶನಿವಾರ, ಭಾನುವಾರ ಮೈಸೂರಿಗೆ ಹೋಗುವವರ ಗಮನಕ್ಕೆ

ಆದರೆ ಶನಿವಾರ ಬೆಳಿಗ್ಗೆ ಬಾರ್‌ ತೆರೆಯಲು ಮುಂದಾದಾಗ ಗ್ರಾಮಸ್ಥರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಬಾರ್‌ ಮುಂದೆ ಜಮಾಯಿಸಿ ಬಾಗಿಲು ಮುಚ್ಚಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಬಾರ್‌ನ ಫ್ಲೆಕ್ಸ್ ಅನ್ನು ಹರಿದು ಹಾಕಿ ಗಲಾಟೆ ಮಾಡಿದ್ದಾರೆ.

Mysore: Rammanahalli Villagers Who Protested And Closed The Bar

ನಮ್ಮ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಬಾರ್‌ ತೆರೆಯಲು ಬಿಡುವುದಿಲ್ಲ. ಬಾರ್‌ ತೆರೆದರೆ ಯುವಕರು ಕುಡಿತ ಕಲಿತು, ಕಳ್ಳತನಕ್ಕೆ ಇಳಿಯುತ್ತಾರೆ. ಗಂಡಸರು ಮನೆಯಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದ ಗ್ರಾಮದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ ಎಂದು ತಿಳಿ ಹೇಳಿದ್ದಾರೆ.

ಒಂದು ವೇಳೆ ಬಾರ್ ತೆಗೆಯಲು ಮುಂದಾದರೆ ಮಹಿಳೆಯರು ಬಾರ್‌ ಮುಂದೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇಲ್ಲಿ ಬಾರ್‌ ವಿರುದ್ಧ ಪುರುಷರು, ಮಹಿಳೆಯರು ಒಟ್ಟಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

English summary
Villagers where expressed outrage over the attempt to open a liquor shop in the village of Rammanahalli, Mysore Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X