• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಕಾಟೂರು ಗ್ರಾಮದಲ್ಲಿ ರಾಕೇಶ್ ಅಂತ್ಯಕ್ರಿಯೆ

By Mahesh
|

ಮೈಸೂರು, ಜುಲೈ 31: ರಾಜಕೀಯದಲ್ಲಿ ಅಪ್ಪನಂತೆ ನಾಯಕನಾಗಿ ಬೆಳೆಯಬೇಕೆಂಬ ಕನಸು ಕಂಡಿದ್ದ ಯುವ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಮರಳಿ ಬಾರದ ಲೋಕದತ್ತ ಪಯಣ ಬೆಳೆಸಿದ್ದಾರೆ. ಮೃತರ ಅಂತ್ಯಕ್ರಿಯೆ ಎಚ್ ಡಿ ಕೋಟೆ ರಸ್ತೆಯಲ್ಲಿರುವ ಟಿ ಕಾಟೂರು ಫಾರ್ಮ್ ನಲ್ಲಿ ಸೋಮವಾರ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಪಾರ್ಥಿವ ಶರೀರ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರು ತಲುಪಲಿದೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು 11ರಿಂದ 1.30 ರವರೆಗೆ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಇರಿಸಲಾಗುವುದು. ['ರಾಕೇಶ್ ಜತೆಗಿನ ಗ್ರೂಪ್ ಫೋಟೋ ರಹಸ್ಯ ಬಯಲು']

ಬಳಿಕ ಅಂತ್ಯಕ್ರಿಯೆಗಾಗಿ ಮೈಸೂರು ಸಮೀಪದ ಟಿ. ಕಾಟೂರು ಗ್ರಾಮದ ತೋಟಕ್ಕೆ ಕೊಂಡೊಯ್ಯಲಾಗುವುದು. ಸಂಜೆ 3 ರಿಂದ 4 ಗಂಟೆಯೊಳಗೆ ಕುಟುಂಬ ವರ್ಗ ಮತ್ತು ಬಂಧು ಬಳಗದ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಂಗಳೂರಿನಲ್ಲಿ ಅವಕಾಶ ಇರುವುದಿಲ್ಲ.

ಮೈಸೂರಿನ ದಸರಾ ವಸ್ತು ಸಂಗ್ರಹಾಲಯದಲ್ಲಿ ರಾಕೇಶ್ ಅವರ ಮೃತ ದೇಹ ಅಂತಿಮ ದರ್ಶನವನ್ನು ಪಡೆಯಬಹುದಾಗಿದೆ. ಸಚಿವ ಎಚ್ ಸಿ ಮಹದೇವಪ್ಪ ಅವರು ಸಾರ್ವಜನಿಕ ವೀಕ್ಷಣೆಗೆ ಬೇಕಾದ ಸಿದ್ಧತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.[ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ]

ಶನಿವಾರ(ಜುಲೈ 30) ರಾಕೇಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಗೆಳೆಯರು, ಪಕ್ಷದ ಕಾರ್ಯಕರ್ತರು ಮೈಸೂರಿನ ಶಾರದಾದೇವಿನಗರದ ನಿವಾಸ ಬಳಿ ಜಮಾಯಿಸಿದ್ದು, ಸಂತಾಪ ಸೂಚಿಸಿದ್ದಾರೆ. ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ. [ಪುತ್ರ ಶೋಕ ನಿರಂತರ:ಸಿದ್ದುಗೆ ಸದಾನಂದರಿಂದ ಸಾಂತ್ವನ]

ಸ್ನೇಹಿತರು ಮನೆ ಮುಂದೆ ಕಣ್ಣೀರು ಸುರಿಸುತ್ತಾರೆ

ಸ್ನೇಹಿತರು ಮನೆ ಮುಂದೆ ಕಣ್ಣೀರು ಸುರಿಸುತ್ತಾರೆ

ನೆಚ್ಚಿನ ಗೆಳೆಯನನ್ನು ಕಳೆದುಕೊಂಡ ಸ್ನೇಹಿತರು ಮನೆ ಮುಂದೆ ಕಣ್ಣೀರು ಸುರಿಸುತ್ತಾ ಕಾಯುತ್ತಿದ್ದಾರೆ. ಪಾರ್ಥೀವ ಶರೀರ ಸೋಮವಾರ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದು, ನಂತರ ನೇರವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮಯ್ಯನಹುಂಡಿಯಲ್ಲಿ ಶೋಕ ಮನೆಮಾಡಿದೆ. ಬಂಧು ಮಿತ್ರರು ಮೈಸೂರಿನ ಕಡೆಗೆ ಆಗಮಿಸುತ್ತಿದ್ದಾರೆ.

ಚಿಕ್ಕ ವಯಸ್ಸಿಗೆ ಬಾಳ ಪಯಣ ಮುಗಿಸಿದ್ದಾರೆ

ಚಿಕ್ಕ ವಯಸ್ಸಿಗೆ ಬಾಳ ಪಯಣ ಮುಗಿಸಿದ್ದಾರೆ

ಚಿಕ್ಕ ವಯಸ್ಸಿಗೆ ಬಾಳ ಪಯಣ ಮುಗಿಸಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಭವಿಷ್ಯದ ರಾಜಕೀಯ ನಾಯಕನೊಬ್ಬ ದೂರದ ಊರಿಗೆ ಸಂತೋಷದಿಂದ ಪ್ರವಾಸ ಹೋಗಿ ಮರಳಿ ಹೆಣವಾಗಿ ಬರುತ್ತಾನೆಂದರೆ ಅದು ನಿಜಕ್ಕೂ ದುರಂತವೇ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಈ ಆಘಾತ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು, ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.

ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ

ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ

ಕಳೆದ ಕೆಲವರ್ಷಗಳಿಂದ ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಕೇಶ್ ಸಿದ್ದರಾಮಯ್ಯ ಅವರು ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ. ಆದರೆ, ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜಕೀಯ ಪ್ರವೇಶದ ಇಂಗಿತ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದಿಂದ ಮುಂದೊಂದು ದಿನ ಸ್ಪರ್ಧಿಸುತ್ತಾರೆ ಎಂದು ಅಭಿಮಾನಿಗಳು ಕನಸು ಕಾಣುತ್ತಿದ್ದರು.

ಅಭಿವೃದ್ಧಿ ಕಾಮಗಾರಿಗಳನ್ನು ಪ್ರೋತ್ಸಾಹಿಸುತ್ತಿದ್ದ ರಾಕೇಶ್

ಅಭಿವೃದ್ಧಿ ಕಾಮಗಾರಿಗಳನ್ನು ಪ್ರೋತ್ಸಾಹಿಸುತ್ತಿದ್ದ ರಾಕೇಶ್

ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ, ಸಹಾಯಧನ ವಿತರಣೆ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದರಲ್ಲದೆ, ಅದಕ್ಕಾಗಿ ತಯಾರಿಯನ್ನು ಮಾಡಿಕೊಂಡಿದ್ದರು. ವರುಣಾ ಕ್ಷೇತ್ರದಲ್ಲಿ ಆಗಾಗ್ಗೆ ಓಡಾಡುತ್ತಾ ಸದಾ ಜನಸಂಪರ್ಕದಲ್ಲಿದ್ದರು.

ಹುಟ್ಟುಹಬ್ಬದ ಸಂಭ್ರಮದ ನಂತರ ಸೂತಕ

ಹುಟ್ಟುಹಬ್ಬದ ಸಂಭ್ರಮದ ನಂತರ ಸೂತಕ

ಜುಲೈ 13ರಂದು ತಮ್ಮ 39ನೇ ವರ್ಷದ ಹುಟ್ಟು ಹಬ್ಬವನ್ನು ಗೆಳೆಯರು ಹಾಗೂ ಕ್ಷೇತ್ರದ ಜನರೊಂದಿಗೆ ಬೆರೆತು ಆಚರಿಸಿಕೊಂಡಿದ್ದರು. ಇದಾದ ಬಳಿಕ ಬೆಲ್ಜಿಯಂಗೆ ಪ್ರವಾಸ ತೆರಳಿದ್ದ ಅವರು ಅಲ್ಲಿ ತಮ್ಮ ಗೆಳೆಯರೊಂದಿಗೆ ಕಾಲ ಕಳೆದಿದ್ದರು. ಆ ನಂತರ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಮೈಸೂರಿನ ನಿವಾಸದಲ್ಲಿ ಅಭಿಮಾನಿಗಳು

ಮೈಸೂರಿನ ನಿವಾಸದಲ್ಲಿ ಅಭಿಮಾನಿಗಳು

ಮೈಸೂರಿನ ಶಾರದಾನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದ ಅಭಿಮಾನಿಗಳು ಹಾಗೂ ಬಂಧು ಮಿತ್ರರು

English summary
CM Siddaramaiah’s family will fly back from Belgium with the corpse of Rakesh to Bengaluru KIA then to Mysuru in a special aircraft on Sunday evening or Monday morning. Rakesh’s last rites will be held in T Katuru Farm house in Mysuru taluk on Monday (Aug 01).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X