ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

By Mahesh
|
Google Oneindia Kannada News

ಮೈಸೂರು,ಜೂ.3: ಮೈಸೂರು ಸಂಸ್ತಾನದ ಅಭಿವೃದ್ಧಿಯ ಹರಿಕಾರ, ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 131ನೇ ಜಯಂತಿಯನ್ನು ಜೂ. 4 ರಂದು ಆಚರಿಸಲಾಗುತ್ತದೆ ಎಂದು ಅರಸು ಮಂಡಳಿಯ ಅಧ್ಯಕ್ಷ ಹೆಚ್.ಡಿ.ನಂಜರಾಜೇ ಅರಸ್ ತಿಳಿಸಿದ್ದಾರೆ.

ಅರಸು ಮಂಡಳಿಯು ಪ್ರತೀ ವರ್ಷವೂ ಜೂ.4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನವನ್ನು ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾ ಬಂದಿದೆ. ಅದರಂತೆ ಈ ಬಾರಿಯೂ ಜೂನ್ 4 ರಂದು ಜಯಂತಿ ಆಚರಿಸಲು ನಿರ್ಧರಿಸಿದೆ.

ಜೂ.4ರಂದು ಬೆಳಗ್ಗೆ ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿ ಸಂಘದ ಕಚೇರಿಯಿಂದ ಅಲಂಕೃತ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಹೊತ್ತ ವಾಹನದೊಂದಿಗೆ ಕೆ.ಆರ್. ವೃತ್ತದ ವರೆಗೆ ಮೆರವಣಿಗೆಯಲ್ಲಿ ತೆರಳಿ, ಅಲ್ಲಿನ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಗೌರವ ನಮನ ಸಲ್ಲಿಸಲಿದೆ ಎಂದು ಹೇಳಿದರು.

Rajashri Nalwadi Krishnaraja Wadiyar jayanthi in Mysore on June 4

ನಂತರ ಅರಸು ಸಮುದಾಯದ ಭವನದಲ್ಲಿ ಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದು, ಈ ಕಾರ್ಯಕ್ರಮವನ್ನು ಸಂಸದ ಪ್ರತಾತ್ ಸಿಂಹ ಜ್ಯೋತಿ ಬೆಳಗಿಸಿ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮೇಯರ್ ಆರ್. ಲಿಂಗಪ್ಪ ಹಾಗೂ ಪಾಲಿಕೆಯ ಕೆಲ ಸದಸ್ಯರುಗಳು ಭಾಗವಹಿಸಲಿದ್ದಾರೆ ಎಂದರು.

ರಾಮರಾಜ್ಯ ನನಸು ಮಾಡಿದ ನಾಲ್ವಡಿ: ಗಾಂಧೀಜಿ ಕಂಡ ಕನಸನನು ನನಸುಮಾಡಿದ ಮಹಾನ್ ಪುರುಷ ನಾಲ್ವಡಿ ಕೃಷ್ಣರಾಜ ಒಡೆಯರ್ ಆಗಿದ್ದು, ಇವರು ಸರ್ವಜನಾಂಗವನ್ನು ಒಂದೇ ಸೂರಿನಲ್ಲಿ ಬದುಕುವಂತೆ ಮಾಡಿ ಸರ್ವರಿಗೂ ಸಮಾನತೆ ಸಾರಿ, ದಲಿತರಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಎಲ್ಲರಿಗೂ ಎಲ್ಲಾ ವರ್ಗದ ಜನರಿಗೂ ವಿದ್ಯಾಭ್ಯಾಸ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟರು.

ಅಲ್ಲದೇ ಕೈಗಾರಿಕೆ, ಕಲಾಚಾರ, ನೀರಾವರಿ, ಸೇರಿದಂತೆ ಇನ್ನೂ ಹಲವಾರು ಅಭಿವೃದ್ಧಿಕಾರ್ಯಗಳಿಗೆ ಹೆಚ್ಚು ಒತ್ತುಕೊಟ್ಟು ವಿಶ್ವದ ಭೂಪಟದಲ್ಲಿಯೇ ಮೈಸೂರು ಸಂಸ್ಥಾನವನ್ನು ಮೇರು ಸ್ಥಾನಕ್ಕೇರಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಲ್ಲುತ್ತದೆ ಎಂದು ವಾಸ್ತವಾಂಶವನ್ನು ವಿವರಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು, ಜೂನ್. 4 ರಂದು ಸರ್ಕಾರಿ ರಜಾದಿನ ಘೋಷಣೆ ಮಾಡಬೇಕು, ಡಿ. ದೇವರಾಜ ಅರಸ್ ಪ್ರತಿಮೆಯನ್ನು ಮೈಸೂರಲ್ಲಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

English summary
Rajashri Nalwadi Krishnaraja wadiyar jayanthi in Mysore on June 4.Krishna IV was the 24th ruler of the Wodeyar dynasty of Mysore that ruled over Mysore State from 1399 to 1950. English statesman Lord Samuel. Mahatma Gandhi called him Rajarshi, or "saintly king", and his kingdom was described by his followers as Rama Rajya, an ideal kingdom akin to the rule of Lord Rama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X