ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯ ರುದ್ರನರ್ತನಕ್ಕೆ ನಲುಗಿದ ಮೈಸೂರು, ನಾಲ್ವರಿಗೆ ಗಾಯ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್‌ 27: ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವ ನಡೆಯುತ್ತಿದ್ದು, ಕಳೆದೆರಡು ದಿನಗಳಿಂದ ರಾತ್ರಿ ಮೈಸೂರಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳವಾರ ಸುರಿದ ಮಳೆಗೆ ಹಲವೆಡೆ ಭಾರೀ ಅವಾಂತರ ಸೃಷ್ಟಿಯಾಗಿದ್ದು ಅನಾಹುತಗಳು ನಡೆದಿವೆ. ಅಲೀಂ ನಗರದಲ್ಲಿ ಕಾಂಪೌಂಡ್ ಕುಸಿದು ನಾಲ್ವರಿಗೆ ಗಾಯಗಳಾಗಿವೆ.

ಕರ್ನಾಟಕದ ಜಲಾಶಯಗಳ ಬುಧವಾರದ ನೀರಿನ ಮಟ್ಟಕರ್ನಾಟಕದ ಜಲಾಶಯಗಳ ಬುಧವಾರದ ನೀರಿನ ಮಟ್ಟ

ನಗರದ ಹಲವೆಡೆ ಮರಗಳು ಮುರಿದು ಬಿದ್ದಿದ್ದು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ಎಡಬಿಡದೆ ಸುರಿಯುತ್ತಿರೋ ಭಾರೀ ಮಳೆಯಿಂದ ಅಲೀಂ ನಗರದಲ್ಲಿ ಕಾಂಪೌಂಡ್ ಕುಸಿದು ನಾಲ್ವರಿಗೆ ಗಾಯಗಳಾಗಿವೆ. ಭಾರೀ ಮಳೆಗೆ ಸ್ಲಂ ಬೋರ್ಡ್ ಒಂದನೇ ಬ್ಲಾಕ್ ನಲ್ಲಿ ಮನೆಗಳು ಬಿರುಕು ಬಿಟ್ಟಿವೆ. ನಿವಾಸಿಗಳು ಕಟ್ಟಡ ಕುಸಿಯುವ ಆತಂಕದಲ್ಲಿದ್ದಾರೆ.

ಮೈಸೂರು: ಚಾಮುಂಡಿ ಬೆಟ್ಟ ಮೆಟ್ಟಿಲ ಮೇಲೆ ತೊರೆ; ಒಡೆದು ಹೋದ ತಾವರೆಕೆರೆಮೈಸೂರು: ಚಾಮುಂಡಿ ಬೆಟ್ಟ ಮೆಟ್ಟಿಲ ಮೇಲೆ ತೊರೆ; ಒಡೆದು ಹೋದ ತಾವರೆಕೆರೆ

ಇದೇ ರೀತಿ ಮೈಸೂರಿನ ಗುಂಡೂರಾವ್ ನಗರ, ಪಡುವಾರಹಳ್ಳಿ, ಗೌಸಿಯಾನಗರ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ. ಹೂಟಗಳ್ಳಿಯ ಸೈಲೆಂಟ್ ಶೋರ್ ರೆಸಾರ್ಟ್ ಪಕ್ಕದ ಕೆರೆ ಒಡೆದು ಭಾರೀ ಹಾನಿ ಸಂಭವಿಸಿದೆ. ಮಳೆರಾಯನ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಹಲವು ನಗರಗಳು ಜಲಾವೃತ

ಹಲವು ನಗರಗಳು ಜಲಾವೃತ

ಹೂಟಗಳ್ಳಿಯಲ್ಲಿ ಗೋಣಿ ಕೆರೆ ಒಡೆದು ಮನೆಗೆ ನೀರು ನುಗ್ಗಿದೆ. ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮೈಸೂರಿನ ಕನಕಗಿರಿ, ಗುಂಡೂರಾವ್ ನಗರ ಕೆರೆಯಂತಾಗಿದೆ.

ತಗ್ಗು ಪ್ರದೇಶ ಜಲಾವೃತ

ತಗ್ಗು ಪ್ರದೇಶ ಜಲಾವೃತ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೆಟ್ಟಿಲಿನಲ್ಲಿ ಜಲಪಾತದ ರೀತಿಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿರುವುದು ಕಂಡು ಬಂತು. ಮಳೆಯ ರುದ್ರ ನರ್ತನಕ್ಕೆ ಮೈಸೂರಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ರಸ್ತೆಗಳಲ್ಲೆಲ್ಲಾ ನೀರು

ರಸ್ತೆಗಳಲ್ಲೆಲ್ಲಾ ನೀರು

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ ನಗರ ಬಹುತೇಕ ಜಲಾವೃತಗೊಂಡಿದ್ದು, ಜೆ.ಸಿ ನಗರದ ರಸ್ತೆಗಳಲ್ಲಿ ನೀರು ಉಕ್ಕಿ ಉಕ್ಕಿ ಹರಿಯುತ್ತಿದೆ.

ರಸ್ತೆ ಮೇಲೆಲ್ಲಾ ಚರಂಡಿ ನೀರು

ರಸ್ತೆ ಮೇಲೆಲ್ಲಾ ಚರಂಡಿ ನೀರು

ರಾತ್ರಿಯೆಲ್ಲ ಸುರಿದ ಮಳೆಯ ನೀರು ರಸ್ತೆಯ ಮೇಲೆ ಹರಿದು ಹೋಗಿದ್ದು ಚರಂಡಿಯಲ್ಲಿದ್ದ ತ್ಯಾಜ್ಯ, ರಸ್ತೆ ಬದಿಯಲ್ಲಿದ್ದ ಮರಳು, ಕಲ್ಲು ಎಲ್ಲವೂ ರಸ್ತೆಗೆ ಬಂದಿದೆ. ಕೆಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದಿದೆ.

English summary
Over-night rain in Mysuru disturbes normal life. Due to rain, streams of water are flowing from Chamundi hills which lead to overflow and breaking of Tavarekere and Goni Lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X