ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೈಲ್ವೆ ನಿಲ್ದಾಣಕ್ಕೆ "ಅತ್ಯುತ್ತಮ ನಿರ್ವಹಣೆಯ ನಿಲ್ದಾಣ" ಪ್ರಶಸ್ತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 14: ನೈಋತ್ಯ ರೈಲ್ವೆಯ 'ಪ್ರಮುಖ' ನಿಲ್ದಾಣಗಳ ವಿಭಾಗದಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು 2019-20ನೇ ವರ್ಷದ 'ಅತ್ಯುತ್ತಮ ನಿರ್ವಹಣೆಯ ನಿಲ್ದಾಣ' ಎಂದು ಆಯ್ಕೆ ಮಾಡಲಾಗಿದೆ.

ಸತತವಾಗಿ 4ನೇ ಬಾರಿ ಮೈಸೂರು ನಿಲ್ದಾಣವು ಈ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೈಋತ್ಯ ರೈಲ್ವೆಯ 65ನೇ ರೈಲ್ವೆ ವಾರ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ಪ್ರಶಸ್ತಿ ಪಡೆದರು.

ಪ್ರತಿಷ್ಠಿತ ಮೈಸೂರು ರೈಲ್ವೆ ನಿಲ್ದಾಣಕ್ಕೆ ಐಎಸ್ಓ ಮಾನ್ಯತೆಪ್ರತಿಷ್ಠಿತ ಮೈಸೂರು ರೈಲ್ವೆ ನಿಲ್ದಾಣಕ್ಕೆ ಐಎಸ್ಓ ಮಾನ್ಯತೆ

ರೈಲ್ವೇ ಇಲಾಖೆ 2019-20ನೇ ಸಾಲಿನಲ್ಲಿ ಕೈಗೊಂಡ ಸಮಗ್ರ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯಡಿ ಮೈಸೂರು ರೈಲ್ವೆ ನಿಲ್ದಾಣವು ಕಟ್ಟಡದ ಪಾರಂಪರಿಕ ಮೌಲ್ಯವನ್ನು ಉಳಿಸಿಕೊಂಡು ಸಾಕಷ್ಟು ಕಾಳಜಿಯೊಂದಿಗೆ ಅನೇಕ ಪ್ರಯಾಣಿಕ ಸ್ನೇಹಿ ಉಪಕ್ರಮಗಳನ್ನು ಹೆಚ್ಚಿಸಿದ್ದು, ಮೈಸೂರು ವಿಭಾಗದ ಭದ್ರತಾ ವಿಭಾಗವು 2019-20ನೇ ಸಾಲಿನ ದಕ್ಷತೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ. ಮೈಸೂರು ಮತ್ತು ನಿಜಾಮುದ್ದೀನ್ (ನವದೆಹಲಿ) ನಡುವೆ ಚಲಿಸುವ ಪ್ರತಿಷ್ಠಿತ ಸ್ವರ್ಣಜಯಂತಿ ವಾರದ ಸೂಪರ್ ಫಾಸ್ಟ್ ರೈಲಿಗೆ 2019-20ನೇ ಸಾಲಿನ ನೈಋತ್ಯ ರೈಲ್ವೆಯಲ್ಲಿ 'ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್' ಎಂದು ಪ್ರಶಸ್ತಿ ನೀಡಲಾಗಿದೆ. ಇದು ಮೈಸೂರು ವಿಭಾಗಕ್ಕೆ ಸಿಕ್ಕ ಮತ್ತೊಂದು ಗರಿಯಾಗಿದೆ.

Mysuru Railway Station Won Best Maintenance Station Award

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಅವರು ಮೈಸೂರು ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ 2019-20ರ ಅವಧಿಯಲ್ಲಿನ ಅಸಾಧಾರಣ ಕಾರ್ಯಗಳಿಗಾಗಿ ಅಭಿನಂದಿಸಿದ್ದಾರೆ.

ಗರ್ಗ್ ಅವರು ವಿಭಾಗದ ಸಂಪೂರ್ಣ ಕಾರ್ಯಪಡೆಗೆ, ತನ್ನ ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ದರದ ಪ್ರಯಾಣವನ್ನು ಒದಗಿಸುವಂತೆ ಮಾಡಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವಂತೆ ಕರೆ ನೀಡಿದ್ದಾರೆ.

English summary
Mysoru Railway Station has been selected as the Best Maintenance Station for the year 2019-20,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X