ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ತಡೆ ಚಳುವಳಿ: ಮೋದಿ, ಬಿಎಸ್‌ವೈ ಭಾವಚಿತ್ರಕ್ಕೆ ಚಪ್ಪಲಿ ಸೇವೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 18: ಮೈಸೂರು ನಗರದಲ್ಲಿ ಗುರುವಾರ ನಡೆದ ರೈಲು ತಡೆ ಚಳುವಳಿಯ ವೇಳೆ ಪ್ರತಿಭಟನಾಕಾರರೊಬ್ಬರು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ಹೆಚ್ಚು ಜನ ಸೇರುತ್ತಿದ್ದನ್ನು ಗಮನಿಸಿದ ಪೊಲೀಸರು, ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸ್ಥಳಕ್ಕೆ ಕರೆಸಿ ಪ್ರತಿಭಟನಾಕಾರರನ್ನು ಬಸ್‌ನಲ್ಲಿ ಕರೆದೊಯ್ಯಲು ಯತ್ನಿಸಿದರು.

ಕೋಲಾರ; ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಕೋಲಾರ; ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಬಸ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಭಾವಚಿತ್ರವಿರುವ ಜಾಹೀರಾತು ಇತ್ತು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದೊಡ್ಡಕಾಟೂರು ಮಹದೇವಸ್ವಾಮಿ ಎನ್ನುವವರು ಚಪ್ಪಲಿ ತೆಗೆದು ಬಿಎಸ್‌ವೈ ಅವರ ಭಾವಚಿತ್ರಕ್ಕೆ ಹೊಡೆದರು. ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರನನ್ನು ಶಾಂತಗೊಳಿಸಲು ಯತ್ನಿಸಿದರು. ಕೂಡಲೇ ಆತನನ್ನು ವಶಕ್ಕೆ ಪಡೆದರು.

Mysuru: Rail Roko Protest: Protesters Beat PM Modi And BS Yediyurappas Photo With Slippers

ಮೈಸೂರಿನಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಲು ರೈತರ ಯತ್ನಿಸಿದ್ದು, ಈ ವೇಳೆ ಹೋರಾಟಗಾರರನ್ನು ಪೊಲೀಸರು ತಡೆಯಲು ಪ್ರಯತ್ನಿಸಿದರು. ಆಗ ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ರೈತರಿಂದ ರೈಲು ತಡೆಯಲು ವಿಫಲ ಯತ್ನ‌ ನಡೆಸಲಾಗಿದ್ದು, ಹೋರಾಟಗಾರರನ್ನು ಪೊಲೀಸರು‌ ಬಂಧಿಸಿದರು. ರೈತರನ್ನು ಬಂಧಿಸಿ ಕರೆದೊಯ್ಯಲು ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

Mysuru: Rail Roko Protest: Protesters Beat PM Modi And BS Yediyurappas Photo With Slippers

ರೈತರನ್ನು ವಶಕ್ಕೆ ಪಡೆದಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಈ ವೇಳೆ ರೈತರು ರಸ್ತೆಯಲ್ಲಿ ಹೊರಳಾಡಿದ ಪ್ರಸಂಗ ನಡೆಯಿತು. ಆಗ ಬಲವಂತವಾಗಿ ರೈತರನ್ನು ವಶಕ್ಕೆ ಪಡೆದು ಸಿಆರ್ ಮೈದಾನಕ್ಕೆ ಪೊಲೀಸರು ಕರೆದೊಯ್ದರು.

ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ.

ರೈತರಿಂದ ರೈಲು ತಡೆ ಚಳುವಳಿ ಹಿನ್ನೆಲೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ರೈಲ್ವೆ ನಿಲ್ದಾಣಕ್ಕೆ ಸಂಪರ್ಕವಿರುವ ಎರಡು ರಸ್ತೆಗಳ ಸಂಚಾರ ಬಂದ್ ಮಾಡಿದ್ದರು. ಎರಡು ರಸ್ತೆಗಳಿಗೂ ಬ್ಯಾರಿಕೇಡ್ ಅಳವಡಿಸಿ, ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸಿದರು. ಇತ್ತ ಪೊಲೀಸರ ನಡೆಗೆ ರೈತರ ಆಕ್ರೋಶ ವ್ಯಕ್ತಪಡಿಸಿದರು.

English summary
During Rail roko protest in Mysuru city, a Protesters hit the portrait of Prime Minister Narendra Modi and CM Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X