ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ರೈಲ್ವೆ ವಿಭಾಗಕ್ಕೆ ಹೊಸ ಮುಖ್ಯಸ್ಥರು

|
Google Oneindia Kannada News

ಮೈಸೂರು, ಅಕ್ಟೋಬರ್ 27: ನೈಋತ್ಯ ರೈಲ್ವೆ ಮೈಸೂರು ವಿಭಾಗದ ಹೊಸ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ರಾಹುಲ್ ಅರ್ಗರ್ವಾಲ್ ಅಧಿಕಾರ ಸ್ವೀಕರಿಸಿದ್ದಾರೆ. ಉತ್ತಮ ಕಾರ್ಯ ನಿರ್ವಹಣೆಗಾಗಿ ರೈಲ್ವೆ ಸಚಿವರಿಂದ ಪ್ರಶಸ್ತಿ ಪಡೆದ ಅಧಿಕಾರಿ ರಾಹುಲ್.

ಮಂಗಳವಾರ ರಾಹುಲ್ ಅಗರ್ವಾಲ್ ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ವಲಯದ ವ್ಯವಸ್ಥಾಪಕರಾಗಿದ್ದ ಅಪರ್ಣ ಗರ್ಗ್ ಅಧಿಕಾರವನ್ನು ಹಸ್ತಾಂತರ ಮಾಡಿದರು.

ಮೈಸೂರು-ತಮಿಳುನಾಡು ಹಬ್ಬದ ವಿಶೇಷ ರೈಲು; ವೇಳಾಪಟ್ಟಿ ಮೈಸೂರು-ತಮಿಳುನಾಡು ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

ರಾಹುಲ್ ಅಗರ್ವಾಲ್ 1992ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವಾ ಅಧಿಕಾರಿಯಾಗಿ ನೇಮಕವಾದರು. ರೂರ್ಕಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ.

ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ

Rahul Agarwal New Divisional Railway Manager For Mysuru

ಥರ್ಮಲ್ ಇಂಜಿನಿಯರಿಂಗ್‍ನಲ್ಲಿ ತಮ್ಮ ಎರಡನೇ ಸ್ನಾತಕೋತ್ತರ ಪದವಿಯನ್ನು ರಾಹುಲ್ ಪಡೆದಿದ್ದಾರೆ. ರೈಲ್ವೆ ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಕ ಅನುಭವವನ್ನು ರಾಹುಲ್ ಹೊಂದಿದ್ದಾರೆ.

ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ

ರೈಲ್ವೆ ಮಂಡಳಿಯಲ್ಲಿ ಸಂಚಾರ ಸಾರಿಗೆ (ಉಕ್ಕು) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ಉತ್ತರ ಮಧ್ಯೆ ರೈಲ್ವೆಯಲ್ಲಿ ಮುಖ್ಯ ಪ್ರಯಾಣಿಕರ ಸಂಚಾರ ವ್ಯವಸ್ಥಾಪಕರಾಗಿ ಹಾಗೂ ಸರಕು ಮಾರಾಟ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ರಾಹುಲ್ ಅಗರ್ವಾಲ್ ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ತರಬೇತಿ ಕೋರ್ಸ್‍ಗಳಿಗೆ ಹಾಜರಾಗಿದ್ದಾರೆ. ವಡೋದರಾದ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೆಯಲ್ಲಿ ನಡೆದ ಸುಧಾರಿತ ನಿರ್ವಹಣಾ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ತಮ್ಮ ಅತ್ಯುತ್ತಮ ಸೇವೆಗಾಗಿ 2013ರಲ್ಲಿ ರೈಲ್ವೆ ಸಚಿವರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿದ್ದ ಅಪರ್ಣ ಗರ್ಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕ ರೈಲ್ವೆ ಗಾಲಿ ಕಾರ್ಖಾನೆಯ ಪ್ರಧಾನ ಹಣಕಾಸು ಸಲಹೆಗಾರರಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

English summary
Rahul Agarwals takes charge as South Western Railway Mysruru division divisional railway manager.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X