ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಬ್ಯಾಂಕ್ ಚಲನ್ ಹಿಂಭಾಗ ಕುರಾನ್ ಪಠ್ಯ, ಮುಸ್ಲಿಮರ ಆಕ್ರೋಶ

|
Google Oneindia Kannada News

ಮೈಸೂರು, ಜೂನ್ 13: ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ನಡೆದ ಅಚಾತುರ್ಯ ಭಾರೀ ಆತಂಕಕ್ಕೆ ಕಾರಣವಾಗಿ, ಬಿಗುವಿನ ಸನ್ನಿವೇಶ ನಿರ್ಮಾಣವಾಗಿತ್ತು. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಬ್ಯಾಂಕ್ ಗಳಲ್ಲಿ ಬಳಸುವ ಚಲನ್ ನ ಹಿಂಭಾಗ ಕುರಾನ್ ನ ಮುದ್ರಣವಾಗಿತ್ತು. ಅದು ಅರೇಬಿಕ್ ಭಾಷೆಯಲ್ಲಿದ್ದದ್ದರಿಂದ ಬ್ಯಾಂಕ್ ಸಿಬ್ಬಂದಿಗೂ ಅದು ಏನು ಅಂತಲೇ ಗೊತ್ತಾಗಿಲ್ಲ.

ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ

ಇದು ಗೊತ್ತಾಗಿ, ಆಕ್ರೋಶಗೊಂಡ ಮುಸ್ಲಿಮರು ಬ್ಯಾಂಕ್ ಮುಂದೆ ಸೇರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಚಲನ್ ನ ನಕಲು ಪ್ರತಿ ಮಾಡಿಕೊಟ್ಟಿದ್ದ ಅಶೋಕ ರಸ್ತೆಯ ಮಂಜು ಜೋನ್ ನ ನವೀನಕುಮಾರ್ ಎಂಬಾತನನ್ನು ಎನ್ ಆರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Quran text on the back of bank challan form in Mysuru

ಇಲ್ಲಿನ ಶಿವಾಜಿ ರಸ್ತೆಯಲ್ಲಿರುವ ಬ್ಯಾಂಕ್ ನ ಚಲನ್ ಖಾಲಿಯಾಗಿತ್ತು. ಒಂದಷ್ಟು ಚಲನ್ ನಕಲು ಮಾಡುವಂತೆ ನವೀನಕುಮಾರ್ ಗೆ ಬ್ಯಾಂಕ್ ಅಧಿಕಾರಿಗಳೇ ಹೇಳಿದ್ದರು. ಒಂದು ಕಡೆ ಕುರಾನ್ ನ ಪಠ್ಯ ಪ್ರಕಟವಾಗಿದ್ದ ಕಾಗದವನ್ನು ಬಳಸಿ ಚಲನ್ ನ ಛಾಯಾಪ್ರತಿ ತಯಾರು ಮಾಡಲಾಗಿದೆ.

ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!ಕುರಾನ್ ನಲ್ಲಿ 11ನೇ ವರ್ಷಕ್ಕೆ ಪದವಿ ಪಡೆದ ಸಚಿವ ಯು.ಟಿ ಖಾದರ್ ಪುತ್ರಿ!

ಇವುಗಳನ್ನು ಸೋಮವಾರ ಬ್ಯಾಂಕ್ ನಲ್ಲಿ ಕೂಡ ಇಡಲಾಗಿದೆ. ಇದನ್ನು ಗಮನಿಸಿದ ಮುಸ್ಲಿಂ ಯುವಕರ ಗುಂಪೊಂದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದೆ. ಆ ವೇಳೆ, ತಮ್ಮದೇನೂ ತಪ್ಪಿಲ್ಲ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಈ ಸುದ್ದಿ ಹರಡಿ ಪರಿಸ್ಥಿತಿ ಕೈ ಮೀರಿತ್ತು. ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾಗಿದೆ.

English summary
Quran text printed on the back of bank challan form in Mysuru. It leads to angry of Muslim youths against bank officers. One person taken into custody by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X