ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿಯ ಪ್ರೊ. ಎಚ್. ನಾಗರಾಜ್ ಅಮಾನತು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 06; ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿ ಬಂಧಿತರಾಗಿರುವ ಮಾನಸ ಗಂಗೋತ್ರಿಯ ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗರಾಜ್ ಅಮಾನತುಗೊಳಿಸಲಾಗಿದೆ.

ಶುಕ್ರವಾರ ಮೈಸೂರು ವಿಶ್ವವಿದ್ಯಾಲಯ ಈ ಕುರಿತು ಆದೇಶ ಹೊರಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಸೌಮ್ಯ ಪ್ರೊ. ಎಚ್. ನಾಗರಾಜ್ ಅವರ ಶಿಷ್ಯೆ.

Breaking news; ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ; ಜಿಯಾಗ್ರಫಿ ಪ್ರೊಫೆಸರ್ ಅಮಾನತುBreaking news; ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ; ಜಿಯಾಗ್ರಫಿ ಪ್ರೊಫೆಸರ್ ಅಮಾನತು

ಇವರ ಮಾರ್ಗದರ್ಶನದಲ್ಲೇ ಸೌಮ್ಯ ಪಿಡಿಎ (ಪೋಸ್ಟ್ ಡಾಕ್ಟರೇಟ್ ಫೆಲೋ) ಮಾಡುತ್ತಿದ್ದರು. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ದಿನ ಪ್ರೊ.ನಾಗರಾಜ್ ಅವರ ಮೊಬೈಲ್‌ನಿಂದ 18 ಪ್ರಶ್ನೆಗಳು ಸೌಮ್ಯ ಮೊಬೈಲ್‌ಗೆ ಬಂದಿತ್ತು.

Breaking; ಪ್ರಶ್ನೆ ಪತ್ರಿಕೆ ಲೀಕ್; ಪ್ರೊಫೆಸರ್ ಬಂಧಿಸಿದ ಪೊಲೀಸರು Breaking; ಪ್ರಶ್ನೆ ಪತ್ರಿಕೆ ಲೀಕ್; ಪ್ರೊಫೆಸರ್ ಬಂಧಿಸಿದ ಪೊಲೀಸರು

professor

ಇದರಲ್ಲಿ 11 ಪ್ರಶ್ನೆಗಳು ಪರೀಕ್ಷೆಯಲ್ಲಿ ಬಂದಿತ್ತು. ಸೌಮ್ಯ ತನಗೆ ಬಂದ ಪ್ರಶ್ನೆಗಳನ್ನು ತನ್ನ ಸ್ನೇಹಿತೆಗೂ ಶೇರ್ ಮಾಡಿದ್ದರು. ನಂತರ ಸೌಮ್ಯರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಪ್ರೊ. ನಾಗರಾಜ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ: ಮೈಸೂರಿನ ಅತಿಥಿ ಉಪನ್ಯಾಸಕಿ ಸೌಮ್ಯಾ ಬಂಧನಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ: ಮೈಸೂರಿನ ಅತಿಥಿ ಉಪನ್ಯಾಸಕಿ ಸೌಮ್ಯಾ ಬಂಧನ

ಸದ್ಯ ಬಂಧಿತ ಪ್ರೊ. ನಾಗರಾಜ್ ಪ್ರಶ್ನೆ ಪತ್ರಿಕೆ ಸಿದ್ಧತಾ ಸಮಿತಿಯಲ್ಲಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ವಿವಿ ಈ ಹಿನ್ನಲೆಯಲ್ಲಿ ಪ್ರೊ. ನಾಗರಾಜ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ)ರಾಗಿ ಪ್ರೊ. ಎಚ್. ನಾಗರಾಜ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಕುಲಸಚಿವ ಹುದ್ದೆಯಿಂದಲೂ ಬಿಡುಗಡೆಗೊಳಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ನಾಗರಾಜ್‌ರನ್ನು ಏಪ್ರಿಲ್ 27ರಂದು ಬಂಧಿಸಿದ್ದರು. ಪೊಲೀಸರು ಪ್ರೊಫೆಸರ್ ವಿಚಾರಣೆ ನಡೆಸುತ್ತಿದ್ದಾರೆ.

English summary
Mysore university suspended geography professor H. Nagaraj. Professor arrested by police in connection with the assistant professor exam question paper leak scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X