ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಹುಂಡಿ ಗ್ರಾಮ ಪಂಚಾಯಿತಿಯಲ್ಲಿ ಕಿತ್ತಾಟ; ಸಿಸಿ ಟಿವಿ ದೃಶ್ಯಾವಳಿ ವೈರಲ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 25: ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷೆಗೆ ಸದಸ್ಯನೊಬ್ಬ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ ಘಟನೆ ಹೊಸಹುಂಡಿ ಗ್ರಾಮ ಪಂಚಾಯತಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲೆಯ ಹೊಸಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಳಿನಿ ಎಂಬುವರು ಪಂಚಾಯತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸದೆ ಭೇದ ಭಾವ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಸೋಮಣ್ಣ ಎಂಬುವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಪಂಚಾಯತಿ ಕಚೇರಿಯೊಳಗೆ ಮಹಿಳಾ ಅಧ್ಯಕ್ಷರು ಹಾಗೂ ಸೋಮಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ.

'ಚಂದ್ರ'ನ ಮೇಲೆ ನಡೆದ ಮಂಗಳೂರಿನ 6ನೇ ತರಗತಿ ಬಾಲಕಿ!'ಚಂದ್ರ'ನ ಮೇಲೆ ನಡೆದ ಮಂಗಳೂರಿನ 6ನೇ ತರಗತಿ ಬಾಲಕಿ!

Quarel In Hosahundi Village panchayat CC TV Scene Viral

ಸದಸ್ಯ ಸೋಮಣ್ಣ ತನ್ನ ಚಪ್ಪಲಿಯಿಂದ ಅಧ್ಯಕ್ಷೆಗೆ ಹೊಡೆಯಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಇತರೆ ಸದಸ್ಯರು ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲೇ ಅಧ್ಯಕ್ಷೆ ಕೂಡ ಸಿಟ್ಟಿನಿಂದ ಸದಸ್ಯನ ಟವೆಲ್ ಎಳೆದು ಹಲ್ಲೆಗೆ ಮುಂದಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಸದ್ಯ ಇದರ ಸಿಸಿ ಟಿವಿ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
A member of the village panchayat tried to hit a woman with a slipper which took place at Hosahundi village panchayat, which was captured on CC TV is going viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X