ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ನಗರದ ಹೃದಯ ಭಾಗದಲ್ಲಿ ಹೆಬ್ಬಾವು ಸೆರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 13: ಮೈಸೂರು ನಗರದ ಜನನಿಬಿಡ ಪ್ರದೇಶವಾದ ಕುವೆಂಪು ನಗರದಲ್ಲಿ ಶನಿವಾರ ರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿತು.

ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ ಸಮೀಪದಲ್ಲಿರುವ ಪಂಚಮಂತ್ರ ರಸ್ತೆ ಬದಿಯಲ್ಲಿ ಅಂದಾಜು 7 ರಿಂದ 8 ಅಡಿಗಳಷ್ಟು ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ನಂತರ ಉರಗ ತಜ್ಞರಿಂದ ಸೆರೆ ಹಿಡಿಯಲಾಗಿದೆ.

ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ; ಮೈಸೂರು ಡಿಸಿ ಖಡಕ್ ವಾರ್ನಿಂಗ್ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ; ಮೈಸೂರು ಡಿಸಿ ಖಡಕ್ ವಾರ್ನಿಂಗ್

ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಹೆಬ್ಬಾವು ಇರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಶ್ಯಾಮ್, ರಸ್ತೆಪಕ್ಕದ ಖಾಲಿ ಜಾಗದಲ್ಲಿದ್ದ ಗಿಡಗಳ ಮಧ್ಯದಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Mysuru: Python Captured In Kuvempu Nagara

ಹೆಬ್ಬಾವು ಸೆರೆಹಿಡಿಯಲು ಸ್ನೇಕ್ ಶ್ಯಾಮ್ ಅವರೊಂದಿಗೆ ಅವರ ಪುತ್ರ ಸೂರ್ಯ ಕೂಡ ಸಾಥ್ ನೀಡಿದರು. ಸದಾ ಜನರಿಂದ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಪಂಚಮಂತ್ರ ರಸ್ತೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿತ್ತು.

English summary
A huge python appeared on Saturday night in Kuvempu nagara, a densely populated area of ​​Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X