• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮನೆಯಲ್ಲಿ ಕಳ್ಳತನ

|

ಮೈಸೂರು, ಏಪ್ರಿಲ್ 24: ಖ್ಯಾತ ನಿರ್ದೇಶಕ ದಿ.ಪುಟ್ಟಣ ಕಣಗಾಲ್ ಅವರ ಮನೆಗೆ ನುಗ್ಗಿದ ಕಳ್ಳರು ಅಮೂಲ್ಯ ಗ್ರಂಥಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.

ಭಾನುವಾರ ರಾತ್ರಿ ಮನೆಯ ಹಿಂಭಾಗದ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು ತಾಮ್ರದ ಪಾತ್ರೆ ಸೇರಿದಂತೆ ಅಮೂಲ್ಯ ಗ್ರಂಥಗಳನ್ನು ಹೊತ್ತೊಯ್ದಿದ್ದಾರೆ.

ಈ ಕುರಿತು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಗ್ರಂಥಗಳನ್ನು ಹೊತ್ತೊಯ್ದಿರುವ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಇನ್ನು ಇದರೊಟ್ಟಿಗೆ ಕಣಗಾಲ್ ಬಳಸುತ್ತಿದ್ದರೆನ್ನಲ್ಲಾದ ಕಂಚಿನ ಪಾತ್ರೆಗಳನ್ನೂ ಕಳ್ಳರು ಕಳ್ಳತನ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖದೀಮತ ಪತ್ತೆಗೆ ಬಲೆ ಬೀಸಿದ್ದಾರೆ.

English summary
In Bettadahalli of Mysuru district, renowned Kannada film director, Late. Puttanna Kanagal's house has been robbed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X