ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ.ಎಡ್. ಪ್ರವೇಶಾತಿ ಪರೀಕ್ಷೆ ಮುಂದೂಡಿಕೆ: ವಿದ್ಯಾರ್ಥಿಗಳಿಂದ ಮುಕ್ತ ವಿವಿ ಎದುರು ಪ್ರತಿಭಟನೆ

|
Google Oneindia Kannada News

ಮೈಸೂರು, ಜನವರಿ 7: ಕರ್ನಾಟಕ ರಾಜ್ಯ ಮುಕ್ತ ವಿವಿ ಬಿ.ಎಡ್. ಪ್ರವೇಶಾತಿ ಪರೀಕ್ಷೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಎಂದು ಮುಂದೂಡಿದ್ದಕ್ಕೆ ವಿರೋಧಿಸಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಮುಕ್ತ ವಿವಿ ಮುಂದೆ ಪ್ರತಿಭಟನೆ ನಡೆಸಿದರು.

ಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರುಮುಕ್ತ ವಿವಿ ಬಗ್ಗೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು

ಬಿ.ಎಡ್. ಪ್ರವೇಶಾತಿಗಾಗಿ ನಿನ್ನೆ ಭಾನುವಾರ ಪರೀಕ್ಷೆ ನಿಗದಿಪಡಿಸಲಾಗಿತ್ತು. ಇದರಿಂದ ರಾಜ್ಯದ ವಿವಿಧೆಡೆಗಳಿಂದ ಅಭ್ಯರ್ಥಿಗಳು ಸಹ ಆಗಮಿಸಿದ್ದರು. ಆದರೆ ಮುಕ್ತ ವಿವಿ ಪರೀಕ್ಷಾ ಭವನದ ಮುಂದೆ ಬಿ.ಎಡ್. ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣಾ ಫಲಕದಲ್ಲಿ ಬರೆದಿದ್ದನ್ನು ನೋಡಿ ಅಭ್ಯರ್ಥಿಗಳು ಕಂಗಾಲಾದರು.

 ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ ಕೆಎಸ್ಓಯು ನಲ್ಲಿ ಎಂಬಿಎ, ಬಿಎಡ್ ಕೋರ್ಸ್ ಗೆ ಶೀಘ್ರ ಅರ್ಜಿ ಆಹ್ವಾನ

ಇದರಿಂದ ಅಸಮಾಧಾನಗೊಂಡ ನೂರಾರು ಅಭ್ಯರ್ಥಿಗಳು ಪ್ರತಿಭಟನೆಗೆ ಮುಂದಾದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸೂಚನೆ ನೀಡದೆ ದಿಢೀರ್ ಎಂದು ಪರೀಕ್ಷೆಯನ್ನು ಮುಂದೂಡಿದ್ದಕ್ಕಾಗಿ ಬೇಸರ ವ್ಯಕ್ತಪಡಿಸಿದರು..

Protest in Mysuru for postponed of B. Ed entrance exam

ಬಿ.ಎಡ್.ಕೋರ್ಸಿಗೆ ಪ್ರವೇಶ ಪರೀಕ್ಷೆ ಇರುವುದಾಗಿ ಕೆಎಸ್ಒಯು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ, ಯುಜಿಸಿ ಆದೇಶಕ್ಕೆ ಅನುಸಾರವಾಗಿ ಪರೀಕ್ಷೆಯನ್ನು ಫೆ. 3ಕ್ಕೆ ಮುಂದೂಡಿರುವುದಾಗಿಯೂ ಪ್ರಕಟಣೆ ನೀಡಿತ್ತು. ಈ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಜಾಹೀರಾತುಗಳನ್ನೂ ನೀಡಿತ್ತು. ಜೊತೆಗೆ, ಪರೀಕ್ಷಾರ್ಥಿಗಳಿಗೆ ಇ- ಮೇಲ್‌ ಹಾಗೂ ಎಸ್‌ಎಂಎಸ್‌ ಕಳುಹಿಸಿದ್ದಾಗಿಯೂ ಇಲ್ಲಿನ ಸಿಬ್ಬಂದಿ ತಿಳಿಸಿದ್ದರೂ ಅಭ್ಯರ್ಥಿಗಳು ಮಾತ್ರ ನಮಗೆ ಯಾವುದು ಬಂದಿಲ್ಲ ಎಂದು ತಿಳಿಸಿದರು.

 ಕೆಎಸ್ಓಯು ದೂರ ಶಿಕ್ಷಣ ಕೋರ್ಸ್‌, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ! ಕೆಎಸ್ಓಯು ದೂರ ಶಿಕ್ಷಣ ಕೋರ್ಸ್‌, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ!

ಇದಾದ ಬಳಿಕ ಕೆಲ ಕಾಲ ಮಾತಿನ ಚಕಮಕಿ ಸಹ ನಡೆಯಿತು. ಆ ನಂತರ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಲಾಯಿತು.

English summary
Protest in Mysuru for postponed of B. Ed entrance exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X