ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ತಡೆದು, ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟನೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 6: ಇಲ್ಲಿನ ಫೌಂಟೇನ್ ವೃತ್ತದಲ್ಲಿ ಎನ್ ಎಸ್ ಯುಐ ಸದಸ್ಯರು ಮೈಸೂರು-ಬೆಂಗಳೂರು ರಸ್ತೆ ತಡೆದು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸದಾ ಕರ್ನಾಟಕದ ಜತೆಗೆ ಕ್ಯಾತೆ ತೆಗೆಯುತ್ತಲೇ ಇದ್ದಾರೆ. 9 ಲಕ್ಷ ಎಕರೆ ಸಾಂಬಾ ಬೆಳೆಗೆ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಒತ್ತಾಯಿಸಿತ್ತು. ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿ, ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.[ಬೆಂಗಳೂರಿಗರೇ ಎಚ್ಚರ!, ಕುಡಿಯೋಕೆ ಕಾವೇರಿ ನೀರು ಸಿಗಲ್ಲ!]

Protest against Supreme court decision in Mysuru

ಆದರೆ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಸಂಕಷ್ಟ ಉಂಟಾಗಿದೆ. ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ರಾಜ್ಯ ಸಹ ಹೇಳಿತ್ತು, ಕಾವೇರಿ ನೀರು ಬಿಡುಗಡೆ ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ಹಿನ್ನಡೆ:ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಮುಂದಿನ 10 ದಿನಗಳ ಕಾಲ ಬಿಡುವಂತೆ ಬಿಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಸುಪ್ರೀಂ ಇದರಿಂದ ರಾಜ್ಯಕ್ಕೆ ಮತ್ತೆ ಹಿನ್ನೆಡೆಯಾಗಿದೆ. 10 ದಿನದಲ್ಲಿ 13.7 ಟಿಎಂಸಿ ನೀರು ತಮಿಳುನಾಡಿಗೆ ಹರಿಯಲಿದೆ ಎಂದು ಬೇಸರ ವ್ಯಕ್ತಪಡಿಸಿದರು.[ಮೈಸೂರಿನಲ್ಲಿ ಜಯಲಲಿತಾ ಪ್ರತಿಕೃತಿ ನೇಣಿಗೆ ಹಾಕಿ ಪ್ರತಿಭಟನೆ]

ಕಾವೇರಿ ನದಿ ಕಣಿವೆಯ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ 93 ಅಡಿಗಳಷ್ಟಿದೆ. ಈ ಪೈಕಿ ಕೇವಲ 74 ಅಡಿಗಳವರೆಗೆ ಮಾತ್ರ ನೀರು ಬಳಸಬಹುದು, ಅಂದ್ರೆ 10 ಟಿಎಂಸಿ ಅಡಿ ನೀರು. ಅದೇ ರೀತಿ ಕಬಿನಿ ಜಲಾಶಯದಲ್ಲಿ ಸದ್ಯ 4.8 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಹಾರಂಗಿಯಲ್ಲಿ 6.8 ಟಿಎಂಸಿ ಅಡಿ ಹಾಗೂ ಹೇಮಾವತಿಯಲ್ಲಿ 14 ಟಿಎಂಸಿ ಅಡಿ ನೀರಿದೆ ಎಂದರು.

Protest against Supreme court decision in Mysuru

ಕುಡಿಯುವುದಕ್ಕೆ ನೀರು ಇರಲ್ಲ: ಈ ಎಲ್ಲ ಡ್ಯಾಮ್ ಗಳಲ್ಲಿನ ನೀರಿನ ಸಂಗ್ರಹ 35.6 ಟಿಎಂಸಿ ಅಡಿ ಮಾತ್ರ. ಕೋರ್ಟ್ ಆದೇಶ ಪಾಲಿಸಿದ್ದೇ ಆದಲ್ಲಿ ರಾಜ್ಯದ ರೈತರಿಗೆ ಕೃಷಿಗಿಗಿರಲಿ, ಕುಡಿಯುವ ನೀರು ಒದಗಿಸುವುದು ಅಸಾಧ್ಯ. ನಮ್ಮ ರಾಜ್ಯದ ರೈತರು ಬೆಳೆದ ಫಸಲು ಕೈಗೆ ಬರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗದ ಪರಿಣಾಮ ಬರಗಾಲ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.[ಮೈಸೂರಿನಲ್ಲಿ ತಮಿಳು ಚಿತ್ರ ಪ್ರದರ್ಶನಕ್ಕೆ ಹೋರಾಟಗಾರರ ಬ್ರೇಕ್]

ಸುಪ್ರೀಂ ಕೋರ್ಟ್ ನ ಈ ಆದೇಶ ಬಂದಿರುವುದು ದುರದೃಷ್ಟಕರ, ಕೆಲ ದಿನ ಕಳೆದರೆ ನಮ್ಮ ರಾಜ್ಯದ ಜನರಿಗೆ ಕುಡಿಯಲು ನೀರು ಇರುವುದಿಲ್ಲ. ಇಂಥ ಪರಿಸ್ಥಿತಿ ಇರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿ ಎನ್ ಎಸ್ ಯುಐ ವತಿಯಿಂದ ಪ್ರತಿಭಟಿಸಲಾಯಿತು.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ, ನಗರಪಾಲಿಕೆ ಸದಸ್ಯ ರಘು ರಾಜ್ ಅರಸ್, ನಗರಾಧ್ಯಕ್ಷ ರೋಹಿತ್ ಸಿಂಗ್, ಉಪಾಧ್ಯಕ್ಷ ಇನಾಯತ್, ಫರ್ಹಾನ್, ಸುಲೇಮಾನ್, ರವಿ ಮತ್ತಿತರರು ಭಾಗವಹಿಸಿದ್ದರು.

English summary
Supreme court decision regarding Kaveri water leads to people angry. Several protest going against decision. NSUI members angry on Tamilnadu chief minister Jayalalithaa in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X